-->
MICR Code ಬಗ್ಗೆ ನಿಮಗೆಷ್ಟು ಗೊತ್ತು..?: ಪ್ರತಿ ಚೆಕ್‌ನಲ್ಲಿ ಇರುವ ಈ ಅಂಕಿ ವಿಶೇಷತೆ ಏನು ಗೊತ್ತೇ..?

MICR Code ಬಗ್ಗೆ ನಿಮಗೆಷ್ಟು ಗೊತ್ತು..?: ಪ್ರತಿ ಚೆಕ್‌ನಲ್ಲಿ ಇರುವ ಈ ಅಂಕಿ ವಿಶೇಷತೆ ಏನು ಗೊತ್ತೇ..?

MICR Code ಬಗ್ಗೆ ನಿಮಗೆಷ್ಟು ಗೊತ್ತು..?: ಪ್ರತಿ ಚೆಕ್‌ನಲ್ಲಿ ಇರುವ ಈ ಅಂಕಿ ವಿಶೇಷತೆ ಏನು ಗೊತ್ತೇ..?





ಪ್ರತಿ ಚೆಕ್‌ನಲ್ಲಿ ಚೆಕ್ ನಂಬರ್ ಜೊತೆಗೆ MICR Code ಇರುತ್ತದೆ. ಬ್ಯಾಂಕ್‌ ಖಾತೆಯ ಪಾಸ್‌ಬುಕ್, ಚೆಕ್ ಹಾಗೂ ಇ-ಬ್ಯಾಂಕಿಂಗ್‌ನಲ್ಲಿ ಈ ಕೋಡ್ ಇದ್ದೇ ಇರುತ್ತದೆ. ಬ್ಯಾಂಕ್‌ನಲ್ಲಿರುವ ಈ ಅಂಕಿಗಳ ಒಂದು ವಿಶಿಷ್ಟ ಸ್ವರೂಪದ್ದು. ಆದರೆ, ಅದರ ಪ್ರಾಮುಖ್ಯತೆ ಹೆಚ್ಚಿನವರಿಗೆ ತಿಳಿದಿಲ್ಲ. ಅಂತಹ ಅಂಕಿಗಳಲ್ಲಿ MICR Code ಕೂಡ ಒಂದು.



ಅದರ ಪ್ರಾಮುಖ್ಯತೆಯ ಬಗ್ಗೆ ಒಂದು ಪುಟ್ಟ ವಿವರ ಇಲ್ಲಿದೆ.


ಬ್ಯಾಂಕ್‌ನ ಪಾಸ್‌ಬುಕ್, ವೆಬ್‌ಸೈಟ್, ಚೆಕ್‌ನಲ್ಲಿರುವ ಎಲ್ಲ ಅಂಕಿ ಅಂಶಗಳು ನಾವು ದೈನಂದಿನ ವಹಿವಾಟುಗಳನ್ನು ಸರಿಯಾಗಿ ನಡೆಸಬೇಕಾದರೆ ಅತೀ ಅಗತ್ಯವಾಗಿದೆ. ಆನ್‌ಲೈನ್‌ ಮೂಲಕ ಹಣಕಾಸು ವಹಿವಾಟು ಮಾಡಲು, ಹಣ ವರ್ಗಾವಣೆ ಯಾ ಹಣ ಪಾವತಿ, ಸ್ವೀಕೃತಿಗೆ IFSC ಕೋಡ್ ಬಳಸುತ್ತೇವೆ. ಹಾಗೆಯೇ, MICR Code ಕೂಡಾ ಮುಖ್ಯವಾಗಿದೆ.


MICR Code ಎಂದರೇನು?

ಪ್ರತಿ ಚೆಕ್‌ನಲ್ಲಿ MICR Code ಇದ್ದೇ ಇರುತ್ತದೆ. ಈ MICR Code ಎಂದರೆ ಮ್ಯಾಗ್ನೆಟಿಕ್ ಇಂಕ್ ಕ್ಯಾರೆಕ್ಟರ್ ರೆಕಾಗ್ನಿಷನ್. ಇದು ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್‌ನ ಭಾಗ. MICR Code ನಿಂದ ಬ್ಯಾಂಕ್‌ನ ಶಾಖೆಯನ್ನು ಗುರುತಿಸಲಾಗುತ್ತದೆ.



ಇದು 9 Digit ಇರುವ ಒಂದು ಕೋಡ್ ಆಗಿದೆ. ಖಾತೆದಾರರಿಗೆ ನೀಡುವ ಚೆಕ್ ಬುಕ್‌ನಲ್ಲಿ ಈ MICR Code ಅನ್ನು ಮುದ್ರಿಸಲಾಗಿರುತ್ತದೆ. ಹಾಗೆಯೇ ಬ್ಯಾಂಕ್‌ ನೀಡುವ ಚೆಕ್ ರಿಸಿಪ್ಟ್‌ನಲ್ಲಿಯೂ ಈ MICR Code ಇರುತ್ತದೆ. ಮೆಷಿನ್‌ನಲ್ಲಿ ಡೆಪಾಸಿಟ್ ಮಾಡಲಾದ ಚೆಕ್ ಅನ್ನು ಕ್ಲಿಯರ್ ಮಾಡಲು ಈ MICR Code ಅತೀ ಮುಖ್ಯ. ಚೆಕ್ ಕ್ಲಿಯರೆನ್ಸ್‌ನಲ್ಲಿ ಯಾವುದೇ ತಪ್ಪು ಆಗೋದನ್ನು ಇದು ತಡೆಯುತ್ತದೆ.


MICR Codeನ ಫಾರ್ಮೆಟ್ ಯಾವುದು?

MICR Code 9 ಅಂಕಿಗಳನ್ನು ಹೊಂದಿದೆ. ಇದರಲ್ಲಿ ಮೊದಲ ಮೂರು ಅಂಕೆಗಳು ಚೆಕ್‌ ನೀಡಿರುವ ನಗರವನ್ನು ಸೂಚಿಸುತ್ತದೆ. ಆ ಬಳಿಕದ ಮೂರು ಅಂಕೆಗಳು ಚೆಕ್ ನೀಡಿರುವ ಬ್ಯಾಂಕ್‌ ಯಾವುದು ಎಂಬುವುದನ್ನು ಸೂಚಿಸುತ್ತದೆ. ಅಂತಿಮ ಮೂರು ಅಂಕೆಗಳು ಆ ಬ್ಯಾಂಕಿನ ಶಾಖೆ ಯಾವುದು ಎಂಬುವುದನ್ನು ಹೇಳುತ್ತದೆ. 



ಉದಾಹರಣೆಗೆ 700002021 ಎಂಬ MICR Code ಕೋಲ್ಕತ್ತಾದ SBI ಬ್ರಾಂಚ್‌ನ ಕೋಡ್ ಆಗಿದೆ. ಎಂಐಸಿಆರ್‌ ಕೋಡ್‌ನಲ್ಲಿ ಇರುವ ಮೊದಲ ಮೂರು ಡಿಜಿಟ್ 700 ಚೆಕ್ ನೀಡಿದ ನಗರ ಯಾವುದು ಎಂಬುವುದನ್ನು ಸೂಚಿಸುತ್ತದೆ. ಮುಂದಿನ ಮೂರು ಡಿಜಿಟ್ 002 ಯಾವ ಬ್ಯಾಂಕ್ ಎಂಬುವುದನ್ನು ಸೂಚಿಸಿದರೆ, ಮುಂದಿನ ಮೂರು ಡಿಜಿಟ್ 021 ಯಾವ ಶಾಖೆ ಎನ್ನುವುದನ್ನು ಹೇಳಿಕೊಡುತ್ತದೆ.


ಮೆಷಿನ್‌ಗಳು MICR Code ಮೂಲಕ ಚೆಕ್ ಕ್ಲಿಯರೆನ್ಸ್ ನಡೆಸುತ್ತದೆ. ಚೆಕ್ ಕ್ಲಿಯರೆನ್ಸ್ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಈ ಕೋಡ್ ತಡೆಯುತ್ತದೆ. ಚೆಕ್ ಕ್ಲಿಯರೆನ್ಸ್ ಪ್ರಕ್ರಿಯೆಯಲ್ಲಿ ಸುರಕ್ಷತೆಯನ್ನು ಹೆಚ್ಚಿಸುತ್ತದೆ.


MICR Codeನ ಪ್ರಾಮುಖ್ಯತೆ ಏನು?

* ಚೆಕ್ ಕ್ಲಿಯರೆನ್ಸ್ ಪ್ರಕ್ರಿಯೆಯು ಶೀಘ್ರವಾಗಿ ನಡೆಯಬೇಕಾದರೆ ಈ MICR Code ಅತೀ ಮುಖ್ಯವಾಗಿದೆ.


* ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾಗದ ದಾಖಲೆ ಮೂಲಕ ನಡೆಸಲಾಗುವ ವಹಿವಾಟಿನ ಮುಖ್ಯವಾಗಿ ಚೆಕ್‌ನ ವ್ಯಾಲಿಡಿಟಿ ತಿಳಿಯಲು MICR Code ಮುಖ್ಯವಾಗಿದೆ, ಹಾಗೆಯೇ ಇದು ಚೆಕ್ ನಕಲಿಯೇ ಅಸಲಿಯೇ ಎಂದು ತಿಳಿಯಲು ಕೂಡಾ ಮುಖ್ಯವಾಗಿದೆ.


* ನೆಫ್ಟ್, ಐಎಂಪಿಎಸ್ ಮೂಲಕ ವಹಿವಾಟು ನಡೆಸಲು MICR Code ಮುಖ್ಯವಾಗಿದೆ. ಈ ವಹಿವಾಟಿನಲ್ಲಿ ಎಂಐಸಿಆರ್ ಕೋಡ್ IFSC Codeಗೆ ಸಮವಾಗಿದೆ.


* ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಣೆ ಮಾಡುವವರು ಈ MICR Code ಸ್ಕ್ಯಾನ್ ಮಾಡಿ ಚೆಕ್‌ನ ಸಂಪೂರ್ಣ ಮಾಹಿತಿಯನ್ನು ಸುಲಭವಾಗಿ ಪಡೆಯಲು ಇದು ಸಹಾಯಕವಾಗಿದೆ.


* ಎಲ್ಲ ಬ್ಯಾಂಕ್‌ಗಳಿಗೆ MICR Code ಇದ್ದೇ ಇರುತ್ತದೆ. ಇದನ್ನು ಭಾರತೀಯ ರಿಸರ್ವ್‌ ಬ್ಯಾಂಕ್ ನೀಡಿರುತ್ತದೆ.


MICR Codeನ್ನು ಎಲ್ಲಿ ಪತ್ತೆ ಹಚ್ಚುವುದು?

MICR Code ಚೆಕ್ ಸಂಖ್ಯೆಯ ನಂತರದಲ್ಲಿ ಮುದ್ರಿಸಲಾಗಿರುತ್ತದೆ. ಇದನ್ನು ಮುದ್ರಿಸಲು ಬಳಕೆ ಮಾಡಲಾಗಿರುವ ಮಸಿ (ಶಾಹಿ) ಹಾಗೂ ಟೈಪ್‌ಫೇಸ್‌ ಮ್ಯಾಗ್ನೆಟಿಕ್ ಕ್ಯಾರೆಕ್ಟರ್ ಇಂಕ್ ರೀಡರ್‌ನಿಂದ ಮಾತ್ರ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಭಾರತೀಯ ರಿಸರ್ವ್‌ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿಯೂ MICR ಸಂಖ್ಯೆಯು ಲಭ್ಯವಿದೆ.



Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200