-->
DRINK AND DRIVE: ಕೋರ್ಟಿನಲ್ಲೇ ದಂಡ ಕಟ್ಟಿ- ಹೈಕೋರ್ಟ್ ಮಹತ್ವದ ಸೂಚನೆ

DRINK AND DRIVE: ಕೋರ್ಟಿನಲ್ಲೇ ದಂಡ ಕಟ್ಟಿ- ಹೈಕೋರ್ಟ್ ಮಹತ್ವದ ಸೂಚನೆ

DRINK AND DRIVE: ಕೋರ್ಟಿನಲ್ಲೇ ದಂಡ ಕಟ್ಟಿ- ಹೈಕೋರ್ಟ್ ಮಹತ್ವದ ಸೂಚನೆ





ಕುಡುಕ ಚಾಲಕರಿಗೆ ಸಂಕಷ್ಟ... ಅವರಿಗೆ ಇದು ಕಹಿ ಸುದ್ದಿ. ಕುಡಿದು ವಾಹನ ಚಲಾಯಿಸುವವರು ಇನ್ನು ಪೊಲೀಸ್ ಠಾಣೆಯಲ್ಲಿ ದಂಡ ಕಟ್ಟುವ ಹಾಗಿಲ್ಲ. DRINK AND DRIVEಗೆ ಸಂಬಂಧಿಸಿದ ಎಲ್ಲ ಕೇಸುಗಳನ್ನು ಕೋರ್ಟಿನಲ್ಲೇ ನಿರ್ವಹಿಸಬೇಕು, ದಂಡ ಕಟ್ಟುವುದಿದ್ದರೂ ಕೋರ್ಟಿನಲ್ಲೇ ಕಟ್ಟಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.



DRINK AND DRIVE ಕುರಿತಂತೆ ಬಿಹಾರ ಮೂಲದ ಇಬ್ಬರು ಯುವಕರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಬೇಕು ಎಂಬ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಮೊಹಮ್ಮದ್ ನವಾಜ್ ನೇತೃತ್ವದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.



ಮದ್ಯ ಪಾನ ಮಾಡಿ ವಾಹನ ಚಲಾಯಿಸುತ್ತಿದ್ದರು ಎಂಬುದನ್ನು ಪ್ರಶ್ನಿಸಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಬಿಹಾರದ ಯುವಕರು ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಎಂದು ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ, ಸಾಕ್ಷ್ಯರಹಿತ ಆರೋಪ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಪಾಟ್ನಾ ಮೂಲದ ಪ್ರಿಯಾಂಶು ಕುಮಾರ್ ಮತ್ತು ಅಲೋಕ್ ಕುಮಾರ್ ಎಂಬುವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.



ಆರೋಪಕ್ಕೆ ಪೂರಕವಾಗಿ ತನಿಖಾಧಿಕಾರಿಗಳು ಯಾವುದೇ ಸೂಕ್ತ ಸಾಕ್ಷ್ಯಾಧಾರ ಒದಗಿಸಿಲ್ಲ. ಹೀಗಾಗಿ ಆರೋಪ ಸತ್ಯ ಎನ್ನಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಡ್ರಿಂಕ್ ಆಂಡ್ ಡ್ರೈವ್ ಪ್ರಕರಣದಲ್ಲಿ ಕೋರ್ಟಿನಲ್ಲಿ ಮಾತ್ರ ದಂಡ ಕಟ್ಟಬೇಕು. ಈ ಬಗ್ಗೆ ಸಂಚಾರಿ ವಿಭಾಗದ ಪೊಲೀಸ್ ಆಯುಕ್ತರು ಸುತ್ತೋಲೆ ಜಾರಿಗೊಳಿಸಿದ್ದಾರೆ. ಈ ನಿಯಮವನ್ನು ಧಿಕ್ಕರಿಸಿ ತನಿಖಾಧಿಕಾರಿಗಳು ಆರೋಪಿಗಳಿಂದ ದಂಡ ನೀಡುವಂತೆ ಒತ್ತಾಯಿಸಿದ್ದಾರೆ. ಇದು ನಿಯಮ ಬಾಹಿರ ಎಂದು ಕೋರ್ಟ್ ಹೇಳಿದೆ.



ಡ್ರಿಂಕ್ ಆಂಡ್ ಡ್ರೈನ್ ಪರಿಶೀಲನೆ ವೇಳೆ ಸಂಪೂರ್ಣ ಘಟನೆ ಚಿತ್ರೀಕರಣ ಕಡ್ಡಾಯ. ಈ ಈ ಪ್ರಕರಣದಲ್ಲಿ ವಿಡಿಯೋ ಚಿತ್ರೀಕರಣ ಮಾಡಿಲ್ಲ. ಕರ್ತವ್ಯಕ್ಕೆ ಅಡ್ಡಿ ಎಂಬ ಆರೋಪಕ್ಕೆ ತನಿಖಾಧಿಕಾರಿ ಯಾವುದೇ ಸಾಕ್ಷಿಗಳನ್ನು ಒದಗಿಸಿಲ್ಲ. 



ಸಾರ್ವಜನಿಕರ ನೆರವಿನಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದರೂ ಯಾವುದೇ ಸಾಕ್ಷಿದಾರರ ಹೇಳಿಕೆ ದಾಖಲಿಸಿಲ್ಲ, ಚಾರ್ಜ್ ಶೀಟ್‌ನಲ್ಲಲೂ ಉಲ್ಲೇಖಿಸಿಲ್ಲ. ಸಾಕ್ಯಾಧಾರಗಳು ಇಲ್ಲದಿರುವಾಗ ಸುಖಾಸುಮ್ಮನೆ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.



ಇದನ್ನೂ ಓದಿ:

ಭ್ರಷ್ಟಾಚಾರ ಆರೋಪ: ಜಡ್ಜ್ ದೋಷಮುಕ್ತ- ಮರುನಿಯುಕ್ತಿಗೆ ಕರ್ನಾಟಕ ಹೈಕೋರ್ಟ್ ಆದೇಶ



ವೇಶ್ಯಾವಾಟಿಕೆ: ಸಿಕ್ಕಿಬಿದ್ದ ಗ್ರಾಹಕನ ವಿರುದ್ಧ ಕ್ರಮ ಜರುಗಿಸಲಾಗದು- ಕರ್ನಾಟಕ ಹೈಕೋರ್ಟ್



ನ್ಯಾಯಾಂಗ ಅಧಿಕಾರಿಗಳಿಗೆ ನೂತನ ಪಿಂಚಣಿ ನೀತಿ ಕಡ್ಡಾಯವಲ್ಲ, ಐಚ್ಚಿಕ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು



Ads on article

Advertise in articles 1

advertising articles 2

Advertise under the article