-->
EPS ಪಿಂಚಣಿ ಯೋಜನೆ: ಎಂಟು ವಾರದೊಳಗೆ ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ಸೂಚನೆ

EPS ಪಿಂಚಣಿ ಯೋಜನೆ: ಎಂಟು ವಾರದೊಳಗೆ ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ಸೂಚನೆ

EPS ಪಿಂಚಣಿ ಯೋಜನೆ: ಎಂಟು ವಾರದೊಳಗೆ ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ಸೂಚನೆ





ಉದ್ಯೋಗಿಗಳ ಪಿಂಚಣಿ ನಿಧಿ (ಇಪಿಎಸ್)ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಎಂಟು ವಾರದ ಒಳಗಾಗಿ ಜಾರಿಗೆಗೊಳಿಸುವಂತೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಅಧಿಕಾರಿಗಳಿಗೆ ಸೂಚನೆ ನೀಡಿದೆ.


ಉದ್ಯೋಗಿಗಳು ಪಿಂಚಣಿ ನಿಧಿಗೆ ತಮ್ಮ ಪೂರ್ಣ ವೇತನದ ಶೇಕಡ 8.33 ರಷ್ಟನ್ನು ವಂತಿಗೆಯಾಗಿ ಪಾವತಿಸಬಹುದು ಎಂದು ಸುಪ್ರೀಂ ಕೋರ್ಟ್ ನವೆಂಬರ್ ನಾಲ್ಕರಂದು ನೀಡಿದ್ದ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಈ ಆದೇಶವನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಕೂಡ ನಿರ್ದೇಶನ ನೀಡಿದೆ ಎಂದು EPFO ತನ್ನ ಸೂಚನೆಯಲ್ಲಿ ತಿಳಿಸಿದೆ.



ಹೆಚ್ಚಿನ ಪಿಂಚಣಿ ಪಡೆಯಲು ಬೇಕಾದ ಅರ್ಹತೆ ಮತ್ತು ಯಾವೆಲ್ಲ ದಾಖಲೆಗಳು ಅಗತ್ಯ ಎನ್ನುವ ವಿವರಗಳನ್ನು EPFO ಮಾರ್ಗಸೂಚಿಯಲ್ಲಿ ನೀಡಿದೆ. ಅರ್ಹ ಸದಸ್ಯರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಉದ್ಯೋಗದಾತರ ಜೊತೆಗೆ ಜಂಟಿಯಾಗಿ ಅರ್ಜಿಗೆ ಸಲ್ಲಿಸಬೇಕು.



ಇಪಿಎಫ್ ಹಿಂದಿನ ವೇತನ ಮಿತಿ ರೂಪಾಯಿ 5,000/ 6500 ಕ್ಕಿಂತಲೂ ಹೆಚ್ಚಿನ ಕೊಡುಗೆ ನೀಡಿರುವ ಇಪಿಎಸ್ ಸದಸ್ಯರು ಹೆಚ್ಚಿನ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.


ಇಪಿಎಫ್-95ಗೆ 2014ರಲ್ಲಿ ತಿದ್ದುಪಡಿ ತರುವುದಕ್ಕೂ ಮುನ್ನ ಉದ್ಯೋಗದಾತರೊಂದಿಗೆ ಜಂಟಿ ಆಯ್ಕೆ ಹೊಂದಿರುವವರು ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ



ಇಪಿಎಫ್ ಸದಸ್ಯರು ನಿವೃತ್ತಿಗೂ ಮೊದಲು ಹೆಚ್ಚಿನ ಪಿಂಚಣಿಯನ್ನು ಆಯ್ಕೆ ಮಾಡಿಕೊಂಡಿದ್ದರೂ ಅವರ ಮನವಿಯನ್ನು ಈ EPFO ನಿರಾಕರಿಸಲಿಸಿದ್ದರೆ ಅಂತಹ ಸದಸ್ಯರು ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

.

Ads on article

Advertise in articles 1

advertising articles 2

Advertise under the article