-->
ಭ್ರಷ್ಟ ಅಧಿಕಾರಿಗೆ 4 ವರ್ಷ ಸಜೆ, 4 ಲಕ್ಷ ದಂಡ: ಮಂಗಳೂರು ನ್ಯಾಯಾಲಯದ ತೀರ್ಪು

ಭ್ರಷ್ಟ ಅಧಿಕಾರಿಗೆ 4 ವರ್ಷ ಸಜೆ, 4 ಲಕ್ಷ ದಂಡ: ಮಂಗಳೂರು ನ್ಯಾಯಾಲಯದ ತೀರ್ಪು

ಭ್ರಷ್ಟ ಅಧಿಕಾರಿಗೆ 4 ವರ್ಷ ಸಜೆ, 4 ಲಕ್ಷ ದಂಡ: ಮಂಗಳೂರು ನ್ಯಾಯಾಲಯದ ತೀರ್ಪು

ಕಾರ್ಖಾನೆಗಳ ಮಾಲೀಕರಿಂದ ಲಂಚ ಸ್ವೀಕರಿಸುತ್ತಿದ್ದ ಭ್ರಷ್ಟ ಅಧಿಕಾರಿಯ ಆರೋಪ ಸಾಬೀತಾಗಿದ್ದು, ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ನಾಲ್ಕು ಲಕ್ಷ ರೂ.ಗಳ ದಂಡವನ್ನೂ ಕಟ್ಟಲು ಆದೇಶಿಸಲಾಗಿದೆ.ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಕಾರ್ಖಾನೆಗಳ ಮಾಲೀಕರಿಂದ ಲಂಚ ಪಡೆಯುತ್ತಿದ್ದ ಮಂಗಳೂರಿನ ಕಾರ್ಖಾನೆಗಳ ಇಲಾಖೆ ಸಹಾಯಕ ನಿರ್ದೇಶಕ ಎಚ್ ಸುರೇಶ್ ಈ ಶಿಕ್ಷೆಗೆ ಗುರಿಯಾದ ಭ್ರಷ್ಟ ಅಧಿಕಾರಿ. ಈತ 2016ರಲ್ಲಿ ಭ್ರಷ್ಟಾಚಾರ ನಿಗ್ರಹದಳ ಎಸಿಬಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ.ಸುದೀರ್ಘ ಆರು ವರ್ಷಗಳ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಈ ಆದೇಶ ಹೊರಡಿಸಿದ್ದಾರೆ. ದಂಡ ಕಟ್ಟಲು ವಿಫಲವಾದರೆ ಮತ್ತೆ ಆರು ತಿಂಗಳ ಜೈಲುವಾಸ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಹೇಳಿದ್ದಾರೆಕಾರ್ಖಾನೆಗಳು, ಬಾಯ್ಲರ್ ಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಮಂಗಳೂರು ಉಪವಿಭಾಗ-2ರಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಎಚ್ ಸುರೇಶ್ ನಗರದ ಕೊಟ್ಟಾರದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.ಆ ಸಂದರ್ಭದಲ್ಲಿ ವಿವಿಧ ಕಾರ್ಖಾನೆಗಳಿಗೆ ಪರವಾನಿಗೆ ನೀಡಲು ಹಾಗೂ ಪರವಾನಿಗೆ ನವೀಕರಣಕ್ಕೆ ನಿರಪೇಕ್ಷಣಾ ಪತ್ರ ನೀಡಲು ಕಾರ್ಖಾನೆ ಮಾಲೀಕರನ್ನು ಲಂಚಕ್ಕಾಗಿ ಪೀಡಿಸುತ್ತಿದ್ದರು ಎಂದು ಆರೋಪಿಸಲಾಯಿತ್ತು.ಎಸಿಬಿ ಅಧಿಕಾರಿಗಳು 2016ರಲ್ಲಿ ನವಂಬರ್ 30ರಂದು ಅವರ ಕಚೇರಿಗೆ ದಾಳಿ ನಡೆಸಿದಾಗ ಮೂರು ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿತ್ತು. ಆಗಿನ ಎಸಿಬಿ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಆರೋಪಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದರು.ಇದನ್ನೂ ಓದಿ:

ಭ್ರಷ್ಟಾಚಾರ ಆರೋಪ: ಜಡ್ಜ್ ದೋಷಮುಕ್ತ- ಮರುನಿಯುಕ್ತಿಗೆ ಕರ್ನಾಟಕ ಹೈಕೋರ್ಟ್ ಆದೇಶವೇಶ್ಯಾವಾಟಿಕೆ: ಸಿಕ್ಕಿಬಿದ್ದ ಗ್ರಾಹಕನ ವಿರುದ್ಧ ಕ್ರಮ ಜರುಗಿಸಲಾಗದು- ಕರ್ನಾಟಕ ಹೈಕೋರ್ಟ್

Ads on article

Advertise in articles 1

advertising articles 2

Advertise under the article