-->
Pro Bono- ಎಲ್ಲರಿಗೂ ಕಾನೂನು: ಸೇವಾ ಪ್ರಾಧಿಕಾರದಿಂದ ಗುಣಮಟ್ಟದ ಕಾನೂನು ಸೇವೆ ಸಾಧ್ಯವೇ..?

Pro Bono- ಎಲ್ಲರಿಗೂ ಕಾನೂನು: ಸೇವಾ ಪ್ರಾಧಿಕಾರದಿಂದ ಗುಣಮಟ್ಟದ ಕಾನೂನು ಸೇವೆ ಸಾಧ್ಯವೇ..?

Pro Bono- ಎಲ್ಲರಿಗೂ ಕಾನೂನು: ಸೇವಾ ಪ್ರಾಧಿಕಾರದಿಂದ ಗುಣಮಟ್ಟದ ಕಾನೂನು ಸೇವೆ ಸಾಧ್ಯವೇ..?




ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಬಡವರಿಗೆ ಅಗತ್ಯ ಕಾನೂನು ನೆರವು ದೊರಕಿಸಿಕೊಡುವಲ್ಲಿ NALSA ದೊಡ್ಡ ಮಟ್ಟಿನ ಯಶಸ್ಸು ಕಂಡಿಲ್ಲ ಎಂಬುದು ಇತ್ತೀಚೆಗೆ ಕಾನೂನು ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.



ನವೆಂಬರ್‌ನಲ್ಲಿ ನಡೆದ 15 ದಿನಗಳ ಎಲ್ಲರಿಗೂ ಕಾನೂನು ನೆರವು ಜಾಗೃತಿ ಅಭಿಯಾನದಲ್ಲಿ ಕೆಲವು ರಾಜ್ಯಗಳು ಕನಿಷ್ಟ ಕಾರ್ಯಕ್ರಮವನ್ನೂ ರೂಪಿಸಿಲ್ಲ ಎಂದು ನಾಲ್ಸಾ ದಾಖಲೆಗಳು ಸ್ಟಪ್ಟಪಡಿಸಿದ್ದು, ಕಾನೂನು ಸೇವೆಯ ಗುಣಮಟ್ಟ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದೆ.



ಕೆಲ ವಕೀಲರು ಜಿಲ್ಲಾ ಮಟ್ಟದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಅಶಕ್ತರಿಗೆ ಕಾನೂನು ನೆರವು ವ್ಯವಸ್ಥೆಯ ಭಾಗವಾಗಲು ಇಚ್ಚಿಸುತ್ತಾರೆ. ಅದವರಿಗೆ ಅವರಿಗೆ ಪ್ರಾಧಿಕಾರದಿಂದ ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹ ಸಿಗುತ್ತಿಲ್ಲ. ಅವರಿಗೆ ಸಿಗುವ ಗೌರವಧನ ಯಾ ವೇತನವು ಅವರು ಕೈಗೊಳ್ಳುವ ಕಾನೂನು ಸೇವೆ ಅಥವಾ ವಕೀಲರಾಗಲು ಅವರು ತೆಗೆದುಕೊಂಡ ಶ್ರಮಕ್ಕೆ ಅನುಗುಣವಾಗಿಲ್ಲ. ಅಷ್ಟೇ ಅಲ್ಲದೆ, ಕಾನೂನು ಸೇವಾ ಪ್ರಾಧಿಕಾರದಿಂದ ಅವರಿಗೆ ನೀಡಲಾಗುವ ಪಾವತಿಗಳು ಸಾಮಾನ್ಯವಾಗಿ ವಿಳಂಬವಾಗುತ್ತದೆ ಎನ್ನುವುದು ಅಧ್ಯಯನದಲ್ಲಿ ಬಹಿರಂಗವಾಗಿದೆ.



ಸಾಮಾನ್ಯವಾಗಿ, ನ್ಯಾಯಾಲಯದಲ್ಲಿ ಖಾಸಗಿ ವಕೀಲರಿಗೆ ಸಿಗುವ ಗೌರವ ಯಾ ಮಾನ್ಯತೆಯನ್ನು ಕಾನೂನು ಪ್ರಾಧಿಕಾರದ ಪ್ಯಾನೆಲ್ ವಕೀಲರಿಗೆ ನೀಡುವುದಿಲ್ಲ. ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಪ್ರಾಧಿಕಾರದಲ್ಲೂ ಅವರಿಗೆ ಕ್ಲಪ್ತ ಕಾಲಕ್ಕೆ ಪಾವತಿಗಳು ಕೈಗೆ ಸಿಗುವುದಿಲ್ಲ. ಮತ್ತು ಉದ್ಯೋಗಿಗಳಲ್ಲದ ಕಾರಣ ಮತ್ತು ಅವರು ಯಾವುದೇ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಪಡೆಯುವುದಿಲ್ಲ ಎಂಬ ಕಾರಣಕ್ಕೆ ಗುಣಮಟ್ಟದ ಸೇವೆಯನ್ನು ಖಾತ್ರಿ ಪಡಿಸಲು ಸೇವಾ ಪ್ರಾಧಿಕಾರವು ವಿಫಲವಾಗುತ್ತವೆ ಎಂದು ಅಧ್ಯಯನ ವರದಿ ತಿಳಿಸುತ್ತದೆ.



"ವಕೀಲರಿಗೆ ಉತ್ತಮ ವೇತನ ನೀಡಲಾಗದಿದ್ದರೆ, ಒಬ್ಬ ಸಮರ್ಥ ವಕೀಲರು ತಮ್ಮನ್ನು ಪ್ಯಾನಲ್ ವಕೀಲರು/ಉಚಿತ ಕಾನೂನು ನೆರವು ಸಲಹೆಗಾರರಾಗಿ ಏಕೆ ಎಂಪನೆಲ್ ಮಾಡುತ್ತಾರೆ?" ಎಂಬ ಬಗ್ಗೆ ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಿಕ್ಷಣ ಮತ್ತು ಸಂಶೋಧನೆಯ ಪ್ರಾಧ್ಯಾಪಕ ಜಿತ್‌ಮಾನ್ ಸಿಂಗ್ ನಡೆಸಿದ ಅಧ್ಯಯನದ ವರದಿಗಳೂ ಇದನ್ನೇ ಹೇಳುತ್ತಿವೆ.



ಭಾರತದ ಕಾನೂನು ನೆರವು ವ್ಯವಸ್ಥೆ

ಭಾರತೀಯ ಸಂವಿಧಾನದ 22 (1) ಮತ್ತು 14 ನೇ ವಿಧಿಗಳ ಅಡಿಯಲ್ಲಿ, ಕಾನೂನು ನೆರವು ಎಲ್ಲರಿಗೂ ಅಗತ್ಯವಾಗಿ ದೊರೆಯಬೇಕಾದ ಒಂದು ಹಕ್ಕು. ಆರ್ಟಿಕಲ್ 39-A ಕೂಡಾ ಅಗತ್ಯವಿರುವ ನಾಗರಿಕರಿಗೆ ಉಚಿತ ಕಾನೂನು ಸಹಾಯದ ಅವಕಾಶವನ್ನು ಪ್ರತಿಪಾದಿಸುತ್ತದೆ. ಈ ಹಿನ್ನೆಲೆಯಲ್ಲಿ, ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ- 1987 ರ ಅಡಿಯಲ್ಲಿ ಅಗತ್ಯವಿರುವವರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲಾಗುತ್ತದೆ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಿಂದ (NALSA) ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ.



ಖಾಸಗಿ ವಕೀಲರನ್ನು ಪಡೆಯಲು ಸಾಧ್ಯವಾಗದ ಕೈದಿಗಳು, ವಿಚಾರಣಾಧೀನ ಕೈದಿಗಳು ಮತ್ತು ಅರ್ಜಿದಾರರು ಭಾರತದ ಪ್ರತಿ ಜಿಲ್ಲಾ ನ್ಯಾಯಾಲಯದಲ್ಲಿರುವ NALSA ವಿಭಾಗದ ಮೂಲಕ ಉಚಿತ ಕಾನೂನು ನೆರವು ಸೌಲಭ್ಯಗಳನ್ನು ಪಡೆಯಬಹುದು.


ಪ್ರತಿಯೊಂದು ರಾಜ್ಯವು ತನ್ನದೇ ಆದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಹೊಂದಿದೆ. ಮಾರ್ಚ್ 2022 ರ ಹೊತ್ತಿಗೆ, ಭಾರತವು 50,394 (46,385 ಜಿಲ್ಲೆ + 4,009 ಉಚ್ಚ ನ್ಯಾಯಾಲಯ) ಪ್ಯಾನಲ್ ವಕೀಲರು ಅಥವಾ ಉಚಿತ ಕಾನೂನು ಸೇವಾ ಪೂರೈಕೆದಾರರನ್ನು ಹೊಂದಿದೆ. ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ (CHRI) 2018 ರ ಅಧ್ಯಯನವು ಭಾರತವು 18,609 ಜನಸಂಖ್ಯೆಗೆ ಒಬ್ಬ ಕಾನೂನು ನೆರವು ವಕೀಲರನ್ನು ಹೊಂದಿದೆ ಅಥವಾ 100,000 ಜನಸಂಖ್ಯೆಗೆ ಐದು ಕಾನೂನು ನೆರವು ವಕೀಲರನ್ನು ಹೊಂದಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ.


Read This Also

'ಬೆಳಗಾವಿ ಚಲೋ': ಸಂರಕ್ಷಣಾ ಕಾಯ್ದೆಗೆ ಆಗ್ರಹಿಸಿ ರಾಜ್ಯ ವಕೀಲರ ಪರಿಷತ್ತಿನ ನೇತೃತ್ವದಲ್ಲಿ ನಿರ್ಣಾಯಕ ಸಮರ


ಜಡ್ಜ್‌ಗಳು ಕಾನೂನಿಗೆ ಮಿಗಿಲಲ್ಲ, ಕರ್ತವ್ಯ ಚ್ಯುತಿಗೆ ಅವರೂ ಪರಿಣಾಮ ಎದುರಿಸಬೇಕು- ಕೇರಳ ಹೈಕೋರ್ಟ್‌


ಲೈಸನ್ಸ್ ರಹಿತ ಬಡ್ಡಿ ವ್ಯಾಪಾರಿಗಳ ಮೇಲೆ ದಾಳಿ ಮಾಡಲು ಪೊಲೀಸರಿಗೆ ಅಧಿಕಾರವಿಲ್ಲ: ಹೈಕೋರ್ಟ್‌


Ads on article

Advertise in articles 1

advertising articles 2

Advertise under the article