'ಬೆಳಗಾವಿ ಚಲೋ': ಸಂರಕ್ಷಣಾ ಕಾಯ್ದೆಗೆ ಆಗ್ರಹಿಸಿ ರಾಜ್ಯ ವಕೀಲರ ಪರಿಷತ್ತಿನ ನೇತೃತ್ವದಲ್ಲಿ ನಿರ್ಣಾಯಕ ಸಮರ
'ಬೆಳಗಾವಿ ಚಲೋ': ಸಂರಕ್ಷಣಾ ಕಾಯ್ದೆಗೆ ಆಗ್ರಹಿಸಿ ರಾಜ್ಯ ವಕೀಲರ ಪರಿಷತ್ತಿನ ನೇತೃತ್ವದಲ್ಲಿ ನಿರ್ಣಾಯಕ ಸಮರ
ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಮತ್ತು ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ರೂಪಿಸಿರುವ ಕರಡು ಮಸೂದೆಯನ್ನು ಸದನದಲ್ಲಿ ಮಂಡಿಸಿ ಅಂಗೀಕಾರ ಮಾಡಬೇಕು ಎಂದು ಒತ್ತಾಯಿಸಿ ವಕೀಲರು ನಿರ್ಣಾಯಕ ಸಮರಕ್ಕೆ ಇಳಿದಿದ್ದಾರೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮತ್ತು ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಸಾವಿರಾರು ವಕೀಲರು ಮಂಗಳವಾರ ಬೆಳಗಾವಿ ಚಲೋ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತ ನಿರ್ಧಾರ ಕೈಗೊಂಡಿರುವ ವಕೀಲರ ಪರಿಷತ್ತು, ಮಂಗಳವಾರ ಬೆಳಗಾವಿಗೆ ತೆರಳಿ ನ್ಯಾಯವಾದಿಗಳ ಪರ ಹೋರಾಟ ನಡೆಸುವುದಾಗಿ ಘೋಷಿಸಿದೆ.
ಈ ಹೋರಾಟಕ್ಕೆ ಬೆಂಗಳೂರು ವಕೀಲರ ಸಂಘವೂ ಬೆಂಬಲ ಘೋಷಿಸಿದೆ. ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ. ರವಿ ಮತ್ತು ಖಜಾಂಚಿ ಹರೀಶ್ ಎಂ.ಟಿ. ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಮಂಗಳವಾರ 27-12-2022ರಂದು ಬೆಳಗಾವಿ ವಕೀಲರ ಸಂಘದ ಕಚೇರಿಯಲ್ಲಿ ಹಾಜರಾಗುವಂತೆ ವಕೀಲರಿಗೆ ಮನವಿ ಮಾಡಿದೆ.
ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಲು ನಿರ್ಣಾಯಕ ಸಮರ ಇದಾಗಿದ್ದು, ಸ್ವತಃ ರಾಜ್ಯ ವಕೀಲರ ಪರಿಷತ್ತು ಈ ಹೋರಾಟದ ನೇತೃತ್ವ ವಹಿಸಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಸರ್ಕಾರ ವಕೀಲರ ಬೇಡಿಕೆಗೆ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಮಂಗಳವಾರದ ಬೆಳಗಾವಿ ಚಲೋ ಕಾರ್ಯಕ್ರಮದ ಬಳಿಕ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ
ಸರ್ಕಾರಿ ಅಧಿಕಾರಿ ವಿರುದ್ಧ ಗಂಭೀರ ಆರೋಪಕ್ಕೆ ತಕ್ಷಣ ವರ್ಗಾವಣೆ ಪರಿಹಾರವಲ್ಲ: ಕರ್ನಾಟಕ ಹೈಕೋರ್ಟ್
ಚೆಕ್‌ನಲ್ಲಿ ನಮೂದಾಗಿರುವ MICR ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು...? ಅದರ ಮಹತ್ವ ಗೊತ್ತೇ..?
ಸರ್ಕಾರಿ ನೌಕರರಿಗೆ ಸಂಘಟನೆ ನಿರ್ಬಂಧ: ಜಾತಿ, ಭಾಷೆ ಸಂಘ ಸೇರಲು ಕಡಿವಾಣ!