-->
ನಾಗರಿಕ ಸೇವೆಗಳ ಅಧಿಕಾರಿಗಳಿಗೆ ಬಡ್ತಿ: ಮೀಸಲು ನಿಯಮದಲ್ಲಿ ಗೊಂದಲ ನಿವಾರಣೆಗೆ ಹೈಕೋರ್ಟ್ ಸೂಚನೆ

ನಾಗರಿಕ ಸೇವೆಗಳ ಅಧಿಕಾರಿಗಳಿಗೆ ಬಡ್ತಿ: ಮೀಸಲು ನಿಯಮದಲ್ಲಿ ಗೊಂದಲ ನಿವಾರಣೆಗೆ ಹೈಕೋರ್ಟ್ ಸೂಚನೆ

ನಾಗರಿಕ ಸೇವೆಗಳ ಅಧಿಕಾರಿಗಳಿಗೆ ಬಡ್ತಿ: ಮೀಸಲು ನಿಯಮದಲ್ಲಿ ಗೊಂದಲ ನಿವಾರಣೆಗೆ ಹೈಕೋರ್ಟ್ ಸೂಚನೆ





ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಇರುವ ನಾಗರಿಕ ಸೇವಾ ಅಧಿಕಾರಿಗಳಿಗೆ ಭರ್ತಿಯಲ್ಲಿ ಮೀಸಲಾತಿ ಜಾರಿಗೊಳಿಸಲು ಉಂಟಾಗುತ್ತಿರುವ ಗೊಂದಲವನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.



ರಾಜ್ಯ ಸರಕಾರವು ಕರ್ನಾಟಕ ನಾಗರೀಕ ಸೇವಾ ಕಾಯ್ದೆ 2017 ಕ್ಕೆ ಹೊಸ ಹಾಗೂ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸುವುದು ಸೂಕ್ತ ಎಂದು ಹೈಕೋರ್ಟು ಅಭಿಪ್ರಾಯ ಪಟ್ಟಿದೆ.


ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆಲ ಅಧಿಕಾರಿಗಳಿಗೆ ಕೆಪಿಟಿಸಿಎಲ್ ಬಡ್ತಿ ನೀಡಿತ್ತು. ಈ ಬಡ್ತಿಯು ಪ್ರಸ್ತುತ ಕಾನೂನಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿ ರಾಜ್ಯ ಸರಕಾರದ ವಿದ್ಯುತ್ ಕಂಪನಿಗಳ ಮುಖ್ಯ ಇಂಜಿನಿಯರ್‌ಗಳು, ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ವರ್ಗಕ್ಕೆ ಸೇರಿದ ಬಿ. ಗುರುಮೂರ್ತಿ ಮತ್ತು ಇತರ ಅಧಿಕಾರಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು.



ಅರ್ಜಿದಾರರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾ. ಎಸ್ ಸುನಿಲ್ ದತ್ ಯಾದವ್ ನೇತೃತ್ವದ ಏಕ ಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶ ನೀಡಿದೆ.

2017ರ ಕರ್ನಾಟಕ ನಾಗರೀಕ ಸೇವಾ ಕಾಯ್ದೆಯನ್ನು ಜಾರಿಗೆ ತರಲು 2019ರ ಜೂನ್ 24ರಂದು ಹೊರಡಿಸಲಾದ ಸರಕಾರಿ ಆದೇಶದಲ್ಲಿ ಕೆಲವು ಅಸ್ಪಷ್ಟತೆಗಳಿವೆ. ಹೆಚ್ಚಿನ ಗೊಂದಲಗಳನ್ನು ತಪ್ಪಿಸಲು ಈ ಆದೇಶವನ್ನು ಹಿಂದೆ ಪಡೆಯುವುದು ಸೂಕ್ತ ಮತ್ತು ಹೊಸ ಮಾರ್ಗಸೂಚಿ ಜಾರಿಗೊಳಿಸುವುದೇ ಸರಿಯಾದ ದಾರಿ ಎಂದು ನ್ಯಾಯಪೀಠ ತಿಳಿಸಿದೆ.



ಕಾಯ್ದೆ ಅನುಷ್ಠಾನದಲ್ಲಿ ಆಗಬಹುದಾದ ಗೊಂದಲಗಳನ್ನು ನಿವಾರಿಸಬಹುದಾಗಿದೆ. ಸರಕಾರಿ ಅಧಿಕಾರಿಗಳ ಕಾರ್ಯ ನಿರ್ವಹಣೆಯ ಮೇಲೂ ಇದು ಪರಿಣಾಮ ಬೀರುತ್ತದೆ. ಅನಗತ್ಯ ವ್ಯಾಜ್ಯಗಳಿಗೆ ಆಸ್ಪದ ನೀಡುವುದೂ ತಪ್ಪುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.



ಹೊಸ ಮಾರ್ಗಸೂಚಿಗಳನ್ನು ರೂಪಿಸುವಾಗ ಸುಪ್ರೀಂ ಕೋರ್ಟ್ ನೀಡಿರುವ ಎಲ್ಲ ತೀರ್ಪುಗಳನ್ನು ಗಮನದಲ್ಲಿ ಇರಿಸಿಕೊಂಡಿರಬೇಕು. ನಂತರದ ಮೀಸಲು, ಮೀಸಲಾತಿ ವರ್ಗದವರು ಸಾಮಾನ್ಯವಾಗಿ ಅರ್ಹರಾಗಿರುತ್ತಾರೆ ಎಂಬ ಸಮಸ್ಯೆ ನಿವಾರಣೆ, ಅರ್ಹತೆ ಮತ್ತು ಇತರ ಸಂಬಂಧಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಬೇಕಿದೆ ಎಂದು ಕರ್ನಾಟಕ ಸರಕಾರಕ್ಕೆ ಹೈಕೋರ್ಟ್ ವಿವರಿಸಿದೆ





Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200