ಬಹುಪತ್ನಿತ್ವ, ನಿಖಾ ಹಲಾಲ ಸಿಂಧುತ್ವ ಅರ್ಜಿ ವಿಚಾರಣೆಗೆ ಸಂವಿಧಾನ ಪೀಠ ಸ್ಥಾಪನೆ
ಬಹುಪತ್ನಿತ್ವ, ನಿಖಾ ಹಲಾಲ ಸಿಂಧುತ್ವ ಅರ್ಜಿ ವಿಚಾರಣೆಗೆ ಸಂವಿಧಾನ ಪೀಠ ಸ್ಥಾಪನೆ
ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿ ಇರುವ ಬಹುಪತ್ನಿತ್ವ ಮತ್ತು ನಿಖಾ ಹಲಾಲ ಪದ್ಧತಿಗಳ ಸಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಸ್ಥಾಪಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಈ ಹಿಂದಿನ ಸಂವಿಧಾನ ಪೀಠದಲ್ಲಿ ಇದ್ದ ನ್ಯಾಯಮೂರ್ತಿಗಳ ಪೈಕಿ ಹಿರಿಯರಾದ ಇಂದಿರಾ ಬ್ಯಾನರ್ಜಿ ಮತ್ತು ಹೇಮಂತ್ ಗುಪ್ತಾ ನಿವೃತ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಐವರು ಸದಸ್ಯರ ಪೀಠ ರಚಿಸಬೇಕಾದ ಅಗತ್ಯವಿದೆ ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಪಿ.ಎಸ್. ನರಸಿಂಹ ಅವರ ನ್ಯಾಯಪೀಠ, ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ರಚಿಸುತ್ತೇವೆ. ಅದರ ಮುಂದೆ ಮುಖ್ಯವಾದ ವಿಷಯಗಳು ಬಾಕಿ ಉಳಿದಿವೆ ಎಂದು ಹೇಳಿದೆ.
ಬಹುಪತ್ನಿತ್ವ ಮತ್ತು ನಿಖಾ ಹಲಾಲ ಪದ್ಧತಿಗಳು ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂಬುದಾಗಿ ಘೋಷಿಸಲು ನಿರ್ದೇಶನ ನೀಡುವಂತೆ ಉಪಾಧ್ಯಾಯ ಎಂಬವರು ಐಪಿಎಲ್ ಸಲ್ಲಿಸಿದ್ದು, ಇದು ವಿಚಾರಣೆಗೆ ಬಾಕಿ ಇದೆ.
ಬಹುಪತ್ನಿತ್ವ ಪದ್ಧತಿ ಮುಸ್ಲಿಂ ಪುರುಷರಿಗೆ ನಾಲ್ಕು ವಿವಾಹವಾಗಲು ಅವಕಾಶ ನೀಡುತ್ತದೆ. ನಿಖಾ ಹಲಾಲ್ ಪದ್ಧತಿಯು ವಿಚ್ಚೇದನದ ಬಳಿಕ ಮಹಿಳೆ ತನ್ನ ಮಾಜಿ ಪತಿಯ ಜೊತೆಗೆ ಮದುವೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ.