-->
ಹೈಕೋರ್ಟ್ ಕಲಾಪ ವರದಿಗಾರಿಕೆ: ಅನುಮತಿ ಕಡ್ಡಾಯ, ನಿಯಮ ಮೀರಿದರೆ ನ್ಯಾಯಾಂಗ ನಿಂದನೆ - ಇಲ್ಲಿದೆ ಹೊಸ ನಿಯಮದ ವಿವರ

ಹೈಕೋರ್ಟ್ ಕಲಾಪ ವರದಿಗಾರಿಕೆ: ಅನುಮತಿ ಕಡ್ಡಾಯ, ನಿಯಮ ಮೀರಿದರೆ ನ್ಯಾಯಾಂಗ ನಿಂದನೆ - ಇಲ್ಲಿದೆ ಹೊಸ ನಿಯಮದ ವಿವರ

ಹೈಕೋರ್ಟ್ ಕಲಾಪ ವರದಿಗಾರಿಕೆ: ಅನುಮತಿ ಕಡ್ಡಾಯ, ನಿಯಮ ಮೀರಿದರೆ ನ್ಯಾಯಾಂಗ ನಿಂದನೆ - ಇಲ್ಲಿದೆ ಹೊಸ ನಿಯಮದ ವಿವರ






ಕರ್ನಾಟಕ ಹೈಕೋರ್ಟ್ ಪತ್ರಕರ್ತರಿಗಾಗಿ ಹೈಕೋರ್ಟ್ ಕಲಾಪದ ವರದಿಗಾರಿಕೆಗೆ ಹೊಸ ನಿಬಂಧನೆಗಳನ್ನು ಜಾರಿಗೊಳಿಸಿದೆ. ಬೇಕಾಬಿಟ್ಟಿ ವರದಿಗಾರಿಕೆಗೆ ಬ್ರೇಕ್ ಹಾಕುವ ಉದ್ದೇಶದಿಂದ ಈ ನಿಯಮ ಜಾರಿಗೊಳಿಸಲಾಗಿದೆ.



ಪತ್ರಕರ್ತರು ಇನ್ನು ಮುಂದೆ ಕರ್ನಾಟಕ ಹೈಕೋರ್ಟ್ (ಕಲಾಪಗಳು, ತೀರ್ಪು/ಆದೇಶಗಳ ವರದಿಗೆ ಪತ್ರಕರ್ತರಿಗೆ ಮಾನ್ಯತೆ ಮಂಜೂರು) ನಿಯಮಗಳು 2021ರ ನಿಯಮಗಳನ್ನು ಪಾಲಿಸಬೇಕಾಗಿದೆ.



ಈ ನಿಯಮಗಳ ಪ್ರಕಾರ, ಕೋರ್ಟ್ ಕಲಾಪದ ವರದಿಗಾರಿಕೆಗೆ ಅನುಮತಿ ಕಡ್ಡಾಯ. ಪತ್ರಕರ್ತರಿಗೆ ಹೈಕೋರ್ಟ್ ಗುರುತಿನ ನೀಡಿ ನೀಡಲಿದ್ದು, ಕನಿಷ್ಟ ಮೂರು ವರ್ಷದ ಅನುಭವ ಇದ್ದವರಿಗೆ ಮಾತ್ರ ಅನುಮತಿ ನೀಡಲಾಗುವುದು.



ಬೇಕಾಬಿಟ್ಟಿ ಯಾ ತಿರುಚಿದ ಕಲಾಪಗಳು ಯಾ ತೀರ್ಪುಗಳನ್ನು ವರದಿ ಮಾಡಿದರೆ ಪತ್ರಕರ್ತರ ಅನುಮತಿ ರದ್ದು ಮಾಡುವ ಜೊತೆಗೆ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನೂ ಎದುರಿಸಲಿದ್ದಾರೆ.



ಈ ನಿಯಮಗಳ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ. ಅದರ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಐಡಿ ಕಾರ್ಡ್ ಹೊಂದಿರುವ ಪತ್ರಕರ್ತರಿಗೆ ಮಾತ್ರ ಹೈಕೋರ್ಟ್ ಕಲಾಪ ವರದಿ ಮಾಡಲು ಅವಕಾಶ ನೀಡಲಿದೆ. ತಪ್ಪು ಯಾ ತಿರುಚಿದ ವರದಿಗಳು ಪ್ರಕಟವಾದರೆ, ಅಂತಹ ಪತ್ರಕರ್ತರ ವಿರುದ್ಧ ಹೈಕೋರ್ಟ್‌ ಕಠಿಣ ಕ್ರಮ ಕೈಗೊಳ್ಳಲಿದೆ.


ಹೈಕೋರ್ಟ್ ಅಧಿಸೂಚನೆಗೆ ಈ ಲಿಂಕ್ ಒತ್ತಿರಿ


ಕರ್ನಾಟಕ ಹೈಕೋರ್ಟ್ (ಕಲಾಪಗಳು, ತೀರ್ಪು/ಆದೇಶಗಳ ವರದಿಗೆ ಪತ್ರಕರ್ತರಿಗೆ ಮಾನ್ಯತೆ ಮಂಜೂರು) ನಿಯಮಗಳು 2021




Ads on article

Advertise in articles 1

advertising articles 2

Advertise under the article