-->
ವಿದೇಶಿ ವಕೀಲರು, ಕಾನೂನು ಸಂಸ್ಥೆಗೆ ಭಾರತದಲ್ಲಿ ಅನುಮತಿ: ಬಿಸಿಐ ಮಹತ್ವದ ನಿರ್ಧಾರ

ವಿದೇಶಿ ವಕೀಲರು, ಕಾನೂನು ಸಂಸ್ಥೆಗೆ ಭಾರತದಲ್ಲಿ ಅನುಮತಿ: ಬಿಸಿಐ ಮಹತ್ವದ ನಿರ್ಧಾರ

ವಿದೇಶಿ ವಕೀಲರು, ಕಾನೂನು ಸಂಸ್ಥೆಗೆ ಭಾರತದಲ್ಲಿ ಅನುಮತಿ: ಬಿಸಿಐ ಮಹತ್ವದ ನಿರ್ಧಾರ





ಮಹತ್ವಪೂರ್ಣ ಬೆಳವಣಿಗೆಯೊಂದರಲ್ಲಿ, ವಿದೇಶಿ ಕಾನೂನು ಸಂಸ್ಥೆ ಮತ್ತು ವಿದೇಶಿ ವಕೀಲರು ಭಾರತದಲ್ಲಿ ಪ್ರ್ಯಾಕ್ಟಿಸ್ ನಡೆಸಲು ಭಾರತೀಯ ವಕೀಲರ ಪರಿಷತ್ತು(ಬಿಸಿಐ) ಅನುಮತಿ ನೀಡಿದೆ.

ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದಂತೆ, ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳು ಪರಸ್ಪರ ವಿನಿಮಯದ ಆಧಾರದಲ್ಲಿ ವಿದೇಶಿ ಕಾನೂನುಗಳನ್ನು ಅಭ್ಯಾಸ ಮಾಡಲು ಅವಕಾಶ ನೀಡಲು ಭಾರತೀಯ ವಕೀಲರ ಪರಿಷತ್ ನಿರ್ಧರಿಸಿದೆ.



ಅಂತರರಾಷ್ಟ್ರೀಯ ವಕೀಲರು ಮತ್ತು ಮಧ್ಯಸ್ಥಿಕೆ ಕ್ಷೇತ್ರದಲ್ಲಿ ವೃತ್ತಿ ಅಭ್ಯಾಸ ಮಾಡುವವರಿಗೆ, ಭಾರತದಲ್ಲಿ ಸಲಹೆ ನೀಡಲು ಅವಕಾಶ ಕಲ್ಪಿಸುವ ಉದ್ದೇಶದಿಂದಲೇ, ವಿದೇಶಿ ವಕೀಲರು ಮತ್ತು ವಿದೇಶಿ ಕಾನೂನು ಸಂಸ್ಥೆಗಳ ನೋಂದಣಿ ಮತ್ತು ನಿಯಂತ್ರಣಕ್ಕಾಗಿ ಭಾರತೀಯ ವಕೀಲರ ಪರಿಷತ್, ಕಾನೂನು ಸಚಿವಾಲಯದೊಂದಿಗೆ ಸಮಾಲೋಚಿಸಿ, ನಿಯಮಾವಳಿಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಬಿಸಿಐ ಮಾಹಿತಿ ನೀಡಿದೆ.



ವಿದೇಶಿ ವಕೀಲರಿಗೆ ಭಾರತದಲ್ಲಿ ಕಾನೂನು ಅಭ್ಯಾಸ ಮಾಡಲು ಅವಕಾಶ ಕಲ್ಪಿಸುವುದರಿಂದ ವೈವಿಧ್ಯಮಯ ಅಂತರರಾಷ್ಟ್ರೀಯ ಕಾನೂನು ವ್ಯಾಜ್ಯಗಳು ಹಾಗೂ ಅಂತರಾಷ್ಟ್ರೀಯ ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಭಾರತದ ವಕೀಲರಿಗೂ ಅನುಕೂಲ ಆಗಲಿದೆ ಎಂದು ಹೇಳಲಾಗಿದೆ.

ಅಲ್ಲದೆ ಕಾನೂನು ಕ್ಷೇತ್ರದ ಬೆಳೆಯಲು ಭವಿಷ್ಯದಲ್ಲಿ ಸಹಾಯವಾಗಲಿದೆ ಎಂದು ಭಾರತೀಯ ವಕೀಲರ ಪರಿಷತ್ ತಿಳಿಸಿದೆ.



ಇದೇ ವೇಳೆ ಭಾರತೀಯ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ವಿದೇಶಿ ವಕೀಲರು ಮತ್ತು ವಿದೇಶಿ ವಕೀಲ ಸಂಸ್ಥೆಗಳು ಹಾಜರಾಗುವಂತಿಲ್ಲ. ಅಲ್ಲದೆ ಭಾರತೀಯ ಕಾನೂನುಗಳ ಬಗ್ಗೆ ಸಲಹೆ ನೀಡುವಂತಿಲ್ಲ ಎಂದು ಸಹಾ ಭಾರತೀಯ ವಕೀಲರ ಪರಿಷತ್ ಸ್ಪಷ್ಟಪಡಿಸಿದೆ.



ಹಾಗೆಯೇ ವಿದೇಶಿ ವಕೀಲರಿಗೆ ನಿರ್ಬಂಧಿತ ಮತ್ತು ನಿಯಂತ್ರಿತ ರೀತಿಯಲ್ಲಿ ಕಾನೂನು ಅಭ್ಯಾಸ ಕ್ಕೆ ಅವಕಾಶ ಕಲ್ಪಿಸಿದರೆ ದೇಶಕ್ಕೆ ಯಾವುದೇ ಅನಾನುಕೂಲತೆ ಉಂಟಾಗುವ ಸಾಧ್ಯತೆ ಇಲ್ಲ ಎಂದು ಸಹಾ ಭಾರತೀಯ ವಕೀಲರ ಪರಿಷತ್ ತಿಳಿಸಿದೆ.




Ads on article

Advertise in articles 1

advertising articles 2

Advertise under the article