ಪ್ರಾಸಿಕ್ಯೂಷನ್‌ಗೆ 6 ತಿಂಗಳಲ್ಲಿ ಸಕ್ಷಮ ಪ್ರಾಧಿಕಾರ ಅನುಮತಿ, ಇಲ್ಲದಿದ್ದರೆ ಪ್ರಕರಣ ರದ್ದು: ಕರ್ನಾಟಕ ಹೈಕೋರ್ಟ್
ಪ್ರಾಸಿಕ್ಯೂಷನ್‌ಗೆ 6 ತಿಂಗಳಲ್ಲಿ ಸಕ್ಷಮ ಪ್ರಾಧಿಕಾರ ಅನುಮತಿ, ಇಲ್ಲದಿದ್ದರೆ ಪ್ರಕರಣ ರದ್ದು: ಕರ್ನಾಟಕ ಹೈಕೋರ್ಟ್
ಸರ್ಕಾರಿ ಅಧಿಕಾರಿ/ನೌಕರನ ವಿರುದ್ಧ ಕ್ರಿಮಿನಲ್ ಪ್ರಕರಣಗಳಲ್ಲಿ ಅಭಿಯೋಜನೆ (ಪ್ರಾಸಿಕ್ಯೂಷನ್)ಗೆ ಅನುಮತಿ ಕೋರಿ ತನಿಖಾ ಸಂಸ್ಥೆ ಸಲ್ಲಿಸುವ ಮನವಿಯನ್ನು ಆರು ತಿಂಗಳೊಳಗೆ ಸಕ್ಷಮ ಪ್ರಾಧಿಕಾರ ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಭ್ರಷ್ಟಾಚಾರ ಆರೋಪವವಾದರೂ ರದ್ದುಪಡಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕ ಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಸರ್ಕಾರಿ ಅಧಿಕಾರಿ ಯಾ ನೌಕರರ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಂಜ್ಞೇಯ ತೆಗೆದುಕೊಳ್ಳುವ ಹಾಗಿಲ್ಲ.
ಸರ್ಕಾರಿ ಅಧಿಕಾರಿ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ತನಿಖಾಧಿಕಾರಿ ಸಲ್ಲಿಸುವ ಮನವಿಯನ್ನು ಸಕ್ಷಮ ಪ್ರಾಧಿಕಾರ ಆರು ತಿಂಗಳೊಳಗೆ ಬಗೆಹರಿಸಬೇಕು ಎಂಬುದನ್ನು ಹೈಕೋರ್ಟ್ ತೀರ್ಪು ಸ್ಪಷ್ಟಪಡಿಸಿದೆ.
ಹಾಸನದ ಅರಕಲಗೂಡು ತಾಲೂಕು ಪಂಚಾಯತ್ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಎಂ. ಎಸ್. ಫಣೀಶ ಎಂಬವರ ವಿರುದ್ಧ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ವಿಚಾರಣೆಗೆ ಪರಿಗಣಿಸಲಾಗಿತ್ತು. ಹಾಗೆ, ವಿಚಾರಣಾ ನ್ಯಾಯಾಲಯ ವಿಚಾರಣೆಗೆ ಪರಿಗಣಿಸಿದ (ಸಂಜ್ಞೇಯತೆಯ) ಆದೇಶವನ್ನು ಹೈಕೋರ್ಟ್ ಈ ಮೂಲಕ ರದ್ದುಪಡಿಸಿದೆ.
ಪ್ರಕರಣ: ಫಣೀಶ Vs ಕರ್ನಾಟಕ ಸರ್ಕಾರ (ಕರ್ನಾಟಕ ಹೈಕೋರ್ಟ್)