-->
ಈ ಮಹಿಳಾ ನ್ಯಾಯಮೂರ್ತಿಗೆ ಕೇವಲ 20 ಕೇಸುಗಳ ಲಿಸ್ಟಿಂಗ್: ಹೈಕೋರ್ಟ್‌ಗೆ ವಕೀಲ ದೂರು

ಈ ಮಹಿಳಾ ನ್ಯಾಯಮೂರ್ತಿಗೆ ಕೇವಲ 20 ಕೇಸುಗಳ ಲಿಸ್ಟಿಂಗ್: ಹೈಕೋರ್ಟ್‌ಗೆ ವಕೀಲ ದೂರು

ಈ ಮಹಿಳಾ ನ್ಯಾಯಮೂರ್ತಿಗೆ ಕೇವಲ 20 ಕೇಸುಗಳ ಲಿಸ್ಟಿಂಗ್: ಹೈಕೋರ್ಟ್‌ಗೆ ವಕೀಲ ದೂರು




ಇತರ ನ್ಯಾಯಮೂರ್ತಿಗಳಿಗೆ ಪ್ರತಿದಿನ 100ಕ್ಕೂ ಹೆಚ್ಚು ಪ್ರಕರಣಗಳ ಪಟ್ಟಿ ಮಾಡಲಾಗುತ್ತದೆ. ಆದರೆ, ಈ ಮಹಿಳಾ ನ್ಯಾಯಮೂರ್ತಿಯವರಿಗೆ ಮಾತ್ರ ಕೇವಲ 20 ಕೇಸು ಮಾತ್ರ ಲಿಸ್ಟಿಂಗ್ ಮಾಡಲಾಗುತ್ತಿದೆ.



ಈ ತಾರತಮ್ಯ ಯಾಕೆ ಎಂದು ವಕೀಲರೊಬ್ಬರು ಹೈಕೋರ್ಟ್ ಮೊರೆ ಹೋದ ವಿಚಿತ್ರ ಪ್ರಕರಣ ಕೇರಳದಲ್ಲಿ ವರದಿಯಾಗಿದೆ.



ಯಶವಂತ ಶೆಣೈ ಎಂಬ ವಕೀಲರು ಮಹಿಳಾ ನ್ಯಾಯಮೂರ್ತಿಗಳ ಕುರಿತಾಗಿ ನಡೆಯುತ್ತಿರುವ ತಾರತಮ್ಯ ಧೋರಣೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.



ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ಮಾಸ್ಟರ್ ಆಫ್ ರೋಸ್ಟರ್ ಆಗಿದ್ದಾರೆ. ವಿಚಾರಣೆ ಮಾಡಬೇಕಾದ ಕೇಸುಗಳ ಪಟ್ಟಿಯನ್ನು ಅವರು ಸೂಚಿಸುತ್ತಾರೆ. ಅದಕ್ಕೆ ಪ್ರತ್ಯೇಕ ಅಧಿಕಾರಿಯೊಬ್ಬರೂ ಇದ್ದಾರೆ. ಇದರಲ್ಲಿ ಯಾರ ಮಧ್ಯಪ್ರವೇಶವೂ ಇಲ್ಲ. ಹಾಗಿದ್ದರೂ ಮಹಿಳಾ ನ್ಯಾಯಮೂರ್ತಿಯಾಗಿರುವ ಮೇರಿ ಜೋಸೆಫ್ ಅವರಿಗೆ ಕೇವಲ 20 ಕೇಸುಗಳ ಪಟ್ಟಿ ಮಾಡಲು ಸಿಜೆ ಸೂಚಿಸಿದರೆ ಅದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಎಂದು ವಕೀಲರಾದ ಶೆಣೈ ದೂರಿದ್ದಾರೆ.



ನ್ಯಾ. ಮೇರಿ ಕೇವಲ 20 ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದಾರೆ ಎಂದು ಕೇಳಿ ಆಘಾತವಾಯಿತು. ಅದರಲ್ಲೂ ಸದ್ರಿ ನ್ಯಾಯಮೂರ್ತಿಯವರು ಅನೇಕ ಪ್ರಕರಣಗಳನ್ನು ವಾಯ್ದೆ ಮಾಡುತ್ತಿದ್ದು, ಅನೇಕ ಬಾರಿ ಕಿರುಪಟ್ಟಿಯಲ್ಲಿ ಇರುವ ಎಲ್ಲ ಪ್ರಕರಣಗಳನ್ನೂ ಅವರು ವಿಚಾರಣೆ ನಡೆಸುವುದೇ ಇಲ್ಲ ವಕೀಲರಾದ ಶೆಣೈ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.


Watch This Also






Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200