-->
NI Act: ಚೆಕ್ ಅಮಾನ್ಯ ಪ್ರಕರಣ: ಸಂಭವನೀಯತೆಯ ಸಾಧ್ಯತೆ ಅಲ್ಲಗಳೆಯುವ ಹೊಣೆಗಾರಿಕೆ ಆರೋಪಿಯದ್ದು!

NI Act: ಚೆಕ್ ಅಮಾನ್ಯ ಪ್ರಕರಣ: ಸಂಭವನೀಯತೆಯ ಸಾಧ್ಯತೆ ಅಲ್ಲಗಳೆಯುವ ಹೊಣೆಗಾರಿಕೆ ಆರೋಪಿಯದ್ದು!

NI Act: ಚೆಕ್ ಅಮಾನ್ಯ ಪ್ರಕರಣ: ಸಂಭವನೀಯತೆಯ ಸಾಧ್ಯತೆ ಅಲ್ಲಗಳೆಯುವ ಹೊಣೆಗಾರಿಕೆ ಆರೋಪಿಯದ್ದು!

ಚೆಕ್ ನೀಡಿಕೆಯನ್ನು ಒಪ್ಪಿಕೊಂಡದ್ದೇ ಆದರೆ ಅದು ಕಾನೂನಾತ್ಮಕವಾಗಿ ನೀಡಬೇಕಾದ ಹಣಕ್ಕೆ ಪ್ರತಿಯಾಗಿ ನೀಡಲಾದ ಚೆಕ್ ಎಂಬ ಪೂರ್ವಭಾವನೆ ಹೊಂದಲಾಗುತ್ತದೆ. ಆದರೆ, ಸಂಭವನೀಯತೆಗಳ ಸಾಧ್ಯತೆಯನ್ನು ಅಲ್ಲಗಳೆಯುವ ಅವಕಾಶ ಸದಾ ಆರೋಪಿಯದ್ದಾಗಿರುತ್ತಾರೆ.


ರಾಜಾರಾಮ್ S/o ಶ್ರೀರಾಮುಲು ನಾಯ್ಡು (ಮೃತ) Vs ಮರುತಾಚಲಂ (ಮೃತ) ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಹಲವು ಪೂರ್ವ ತೀರ್ಪುಗಳ ನಿದರ್ಶನದ ಮೂಲಕ ಈ ವಿಷಯವನ್ನು ಮತ್ತೊಮ್ಮೆ ಸಾರಿ ಹೇಳಿದೆ.


ನ್ಯಾ. ಬಿ.ಆರ್. ಗವಾಯಿ ಮತ್ತು ನ್ಯಾ. ಎಂ.ಎಂ. ಸುಂದರೇಶ್ ಅವರ ನೇತೃತ್ವದ ನ್ಯಾಯಪೀಠ ಈ ಮೇಲಿನ ಪ್ರಕರಣದಲ್ಲಿ ಹಲವು ವಿಷಯಗಳ ಬಗ್ಗೆ ಆರೋಪಿಯ ಹೊಣೆಗಾರಿಕೆ ಮತ್ತು ಸಂಭವನೀಯತೆ ಸಾಧ್ಯತೆಗಳ ಬಗ್ಗೆ ವಿವರವಾದ ವಿಶ್ಲೇಷಣೆ ನಡೆಸಿದೆ.ಸಂಭವನೀಯತೆಗಳ ಸಾಧ್ಯತೆಯನ್ನು ಅಲ್ಲಗಳೆಯುವ ಹೊಣೆಗಾರಿಕೆ ಆರೋಪಿಯದ್ದಾಗಿರುತ್ತಾರೆ. ಎಲ್ಲ ಸಮಂಜಸವಾದ ಅನುಮಾನಗಳನ್ನು ಮೀರಿ ಗುಣಮಟ್ಟದ ಪುರಾವೆಗಳ ಮೂಲಕ ನ್ಯಾಯಾಲಯದ ಮುಂದೆ ಅದನ್ನು ಶ್ರುತಪಡಿಸಬೇಕಾದ ಹೊಣೆಗಾರಿಕೆ ಆರೋಪಿಯದ್ದಾಗಿರುತ್ತದೆ.ವರ್ಗಾವಣೀಯ ಪತ್ರಗಳ ಕಾಯ್ದೆ 1881, ಕಲಂ 139 ಪ್ರಕಾರ ಗುಣಮಟ್ಟದ ಪುರಾವೆಯನ್ನು ವಿಚಾರಣಾ ನ್ಯಾಯಾಲಯಕ್ಕೆ ಒದಗಿಸುವ ಮೂಲಕ ಇದನ್ನು ಶ್ರುತಪಡಿಸಬಹುದು. ಅದನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾದ ದಾಖಲೆಗಳ ಮೂಲಕವೋ, ಸಾಂದರ್ಭಿಕ ಬಲವಾದ ಘಟನೆಗಳ ಮೂಲಕವೋ ಅಥವಾ ಆರೋಪಿಯುವ ಒದಗಿಸುವ ದಾಖಲೆಗಳ ಮೂಲಕವೋ ಸಂಭವನೀಯತೆಯ ಸಾಧ್ಯತೆಗಳನ್ನು ಅಲ್ಲಗಳೆಯಬಹುದು.ಪ್ರಕರಣ: ರಾಜಾರಾಮ್ S/o ಶ್ರೀರಾಮುಲು ನಾಯ್ಡು (ಮೃತ) Vs ಮರುತಾಚಲಂ (ಮೃತ)

ಸುಪ್ರೀಂ ಕೋರ್ಟ್‌, CrA 1978/2013 Dated: 18-01-2023
Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200