-->
ಜನನ ಮರಣ ನೋಂದಣಿ ತಿದ್ದುಪಡಿ: ದಾವೆ ಇತ್ಯರ್ಥದ ನ್ಯಾಯವ್ಯಾಪ್ತಿ ಅಧಿಕಾರ ಎಸಿ ಕೋರ್ಟ್‌ಗಿಲ್ಲ

ಜನನ ಮರಣ ನೋಂದಣಿ ತಿದ್ದುಪಡಿ: ದಾವೆ ಇತ್ಯರ್ಥದ ನ್ಯಾಯವ್ಯಾಪ್ತಿ ಅಧಿಕಾರ ಎಸಿ ಕೋರ್ಟ್‌ಗಿಲ್ಲ

ಜನನ ಮರಣ ನೋಂದಣಿ ತಿದ್ದುಪಡಿ: ದಾವೆ ಇತ್ಯರ್ಥದ ನ್ಯಾಯವ್ಯಾಪ್ತಿ ಅಧಿಕಾರ ಎಸಿ ಕೋರ್ಟ್‌ಗಿಲ್ಲ

ಜನನ ಮರಣ ನೋಂದಣಿ ವಹಿಯಲ್ಲಿ ತಿದ್ದುಪಡಿ ಮಾಡುವ ಕುರಿತು ಉಂಟಾಗುವ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ನ್ಯಾಯವ್ಯಾಪ್ತಿಯ ಅಧಿಕಾರ ಎಸಿ ಕೋರ್ಟ್‌ಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಜನನ ಮತ್ತು ಮರಣಗಳ ನೋಂದಣಿ ತಿದ್ದುಪಡಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ನ್ಯಾಯಾಂಗದ ವ್ಯಾಪ್ತಿಯಿಂದ ಬದಲಾಯಿಸಿದ ಸರ್ಕಾರದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ.ರಾಜ್ಯ ಸರ್ಕಾರ 18-07-2022ರಂದು ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದ್ದು, ದಾವೆಯ ಕಾರ್ಯವ್ಯಾಪ್ತಿಯನ್ನು ಬದಲಾಯಿಸಿತ್ತು. ಈ ಅಧಿಸೂಚನೆ ಪ್ರಕಾರ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ(ಜೆಎಂಎಫ್‌ಸಿ) ನ್ಯಾಯಾಲಯದ ವ್ಯಾಪ್ತಿಗೆ ಬದಲಾಗಿ ಉಪ ವಿಭಾಗಾಧಿಕಾರಿ ನ್ಯಾಯಾಲಯಕ್ಕೆ ನೀಡಲಾಗಿತ್ತು.ಈ ಕುರಿತ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಬೀದರ್ ವಕೀಲರ ಸಂಘದ ಅಧ್ಯಕ್ಷ ಸುದರ್ಶನ ವಿ. ಬಿರಾದರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ನೇತೃತ್ವದ ನ್ಯಾಯಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ಈ ಮೂಲಕ ಕರ್ನಾಟಕ ಜನನ ಮತ್ತು ಮರಣ ನೋಂದಣಿ(ತಿದ್ದುಪಡಿ) ಅಧಿನಿಯಮಗಳು- 2022 ರದ್ದಾಗಿದೆ.ಈ ಮಹತ್ವದ ತೀರ್ಪಿನಿಂದಾಗಿ, ಜನನ ಅಥವಾ ಮರಣ ವಹಿಯಲ್ಲಿ ತಡ ನೋಂದಣಿ ಕುರಿತ ಯಾವುದೇ ವಿವಾದಗಳನ್ನು ಬಗೆಹರಿಸುವ ಕಾರ್ಯವ್ಯಾಪ್ತಿ ಮತ್ತೆ ಜೆಎಂಎಫ್‌ಸಿ ನ್ಯಾಯಾಲಯದ ವ್ಯಾಪ್ತಿಗೆ ಬಂದಿದೆ. ಇದು ಈ ಹಿಂದೆ ಜಾರಿಯಲ್ಲಿದ್ದ ವ್ಯವಸ್ಥೆಯೇ ಆಗಿದೆ.

.

Ads on article

Advertise in articles 1

advertising articles 2

Advertise under the article