-->
TDS ಕಡಿತ ತಡೆ: ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಡಿಜಿಟಲ್ ವ್ಯವಸ್ಥೆ!

TDS ಕಡಿತ ತಡೆ: ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಡಿಜಿಟಲ್ ವ್ಯವಸ್ಥೆ!

TDS ಕಡಿತ ತಡೆ: ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಡಿಜಿಟಲ್ ವ್ಯವಸ್ಥೆ!





ಬಡ್ಡಿ ಆದಾಯದ ಮೇಲೆ ಮೂಲದಲ್ಲೇ ತೆರಿಗೆ ಕಡಿತ (TDS)ವನ್ನು ತಡೆಗಟ್ಟಲು ಬ್ಯಾಂಕ್‌ಗೆ ಗ್ರಾಹಕರು ಲಿಖಿತ ಕೋರಿಕೆಯನ್ನು ಸಲ್ಲಿಸಬೇಕು. ಈ ವ್ಯವಸ್ಥೆಯನ್ನು ಡಿಜಿಟಲ್‌ ಮಾಡಲು ಕೆನರಾ ಬ್ಯಾಂಕ್ ವಿಶೇಷ ಕ್ರಮ ಕೈಗೊಂಡಿದೆ.


TDS ಕಡಿತ ಮಾಡದಂತೆ ನೋಡಿಕೊಳ್ಳಲು ಗ್ರಾಹಕರು ಕೆನರಾ ಬ್ಯಾಂಕ್‌ಗೆ ಡಿಜಿಟಲ್ ವ್ಯವಸ್ಥೆಯ ಮೂಲಕ ಸಲ್ಲಿಸುವ ಸೌಕರ್ಯವನ್ನು ಕೆನರಾ ಬ್ಯಾಂಕ್ ಪರಿಚಯಿಸಿದೆ.


15-G ಮತ್ತು 15-H ನಮೂನೆ ಅರ್ಜಿಗಳನ್ನು ಗ್ರಾಹಕರು ಡಿಜಿಟಲ್ ವ್ಯವಸ್ಥೆ ಮೂಲಕ ತಾವು ಇದ್ದಲ್ಲಿಂದಲೇ ಬ್ಯಾಂಕ್‌ಗೆ ನೀಡಿ ನೆಮ್ಮದಿಯಾಗಿರಬಹುದು. ಹಿಂದೂ ಅವಿಭಕ್ತ ಕುಟುಂಬ, ವ್ಯಕ್ತಿಗಳು, ಹಿರಿಯ ನಾಗರಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.


ರಿಸರ್ವ್ ಬ್ಯಾಂಕ್‌ ಇನ್ನೋವೇಷನ್ ಹಬ್‌ (RBIH) ಜೊತೆಗೂಡಿ ಈ ಸೌಲಭ್ಯವನ್ನು ಆರಂಭಿಸಿರುವುದಾಗಿ ಕೆನರಾ ಬ್ಯಾಂಕ್ ಪ್ರಕಟಣೆ ತಿಳಿಸಿದೆ.


ಈ ಅರ್ಜಿಗಳನ್ನು ಆನ್‌ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಗ್ರಾಹಕರು ಬ್ಯಾಂಕ್‌ಗೆ ಸಲ್ಲಿಸಬಹುದು. ಹಿರಿಯ ನಾಗರಿಕರು, ಅಶಕ್ತರು ಯಾ ಬಿಡುವಿಲ್ಲದ ಗ್ರಾಹಕರು ತಮ್ಮ ಮನೆಯಿಂದಲೇ ಅಥವಾ ಕರ್ತವ್ಯದ ಸ್ಥಳದಿಂದಲೇ ಈ ಅರ್ಜಿಗಳನ್ನು ಸಲ್ಲಿಸಬಹುದು.


SMS ಮೂಲಕವೂ ಅರ್ಜಿ ಸಲ್ಲಿಕೆ

ಕೆನರಾ ಬ್ಯಾಂಕ್‌ನಿಂದ ಸಿಗುವ ಬಡ್ಡಿಯಲ್ಲದೆ ಇತರ ಆದಾಯ ರೂ. 25 ಸಾವಿರ ಆಗಿದ್ದರೆ ನಮೂನೆಯನ್ನು SMS ಮೂಲಕ 7036000157 ಸಂಖ್ಯೆಗೆ 15GH 25000 ಎಂಬ ಸಂದೇಶ ಟೈಪ್ ಮಾಡಿ ಕಳಿಸಬೇಕು.


ಒಂದು ವೇಳೆ, ವ್ಯಕ್ತಿಗೆ ಕೆನರಾ ಬ್ಯಾಂಕ್‌ಗೆ ಸಿಗುವ ಬಡ್ಡಿ ಹೊರತುಪಡಿಸಿ ಬೇರೆ ಯಾವ ಆದಾಯವೂ ಇಲ್ಲದಿದ್ದರೆ ಅಂತವರು SMS ಮೂಲಕ 7036000157 ಸಂಖ್ಯೆಗೆ 15GH ಎಂದಷ್ಟೇ ಸಂದೇಶ ಟೈಪ್ ಮಾಡಿ ಕಳಿಸಬೇಕು.


ಕೆನರಾ ಬ್ಯಾಂಕ್‌ ವೆಬ್‌ಸೈಟ್ ಮೂಲಕವೂ ಈ ಅರ್ಜಿಗಳನ್ನು ಸಲ್ಲಿಸಬಹುದು. ಅಲ್ಲಿ ತಮ್ಮ ಪ್ಯಾನ್ ಸಂಖ್ಯೆ ನಮೂದಿಸಿ OTP ಮೂಲಕ 15-G ಮತ್ತು 15-H ನಮೂನೆ ಅರ್ಜಿಗಳನ್ನು ಸಲ್ಲಿಸಬಹುದು.



Ads on article

Advertise in articles 1

advertising articles 2

Advertise under the article