-->
SBIನಲ್ಲಿ ಖಾತೆ ಹೊಂದಿರುವವರಿಗೆ ಇದು ಮಹತ್ವದ ಸೂಚನೆ: ಗ್ರಾಹಕರಿಗೆ ಬಂಪರ್ ಕೊಡುಗೆ

SBIನಲ್ಲಿ ಖಾತೆ ಹೊಂದಿರುವವರಿಗೆ ಇದು ಮಹತ್ವದ ಸೂಚನೆ: ಗ್ರಾಹಕರಿಗೆ ಬಂಪರ್ ಕೊಡುಗೆ

SBIನಲ್ಲಿ ಖಾತೆ ಹೊಂದಿರುವವರಿಗೆ ಇದು ಮಹತ್ವದ ಸೂಚನೆ: ಗ್ರಾಹಕರಿಗೆ ಬಂಪರ್ ಕೊಡುಗೆ





ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಬಂಪರ್ ಆಫರ್‌ನ್ನು ಪ್ರಕಟಿಸಿದೆ. ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ರಾಷ್ಟ್ರೀಕೃತ ಬ್ಯಾಂಕ್ ಎಂಬ ಹೆಗ್ಗಳಿಕೆಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಸೇವೆಯನ್ನು ಆರಂಭಸಿದೆ.



ತನ್ನ ಕೋಟ್ಯಂತರ ಗ್ರಾಹಕರಿಗೆ ಯುಪಿಐ ಎಟಿಎಂ ನಗದು ವಿತ್‌ಡ್ರಾವಲ್ ಎಂಬ ಹೊಸ ಸೇವೆಯನ್ನು ಎಸ್‌ಬಿಐ ಆರಂಭಿಸಿದೆ. ಈ ಯುಪಿಐ ನಗದು ಹಣ ಪಡೆಯುವ ಯೋಜನೆಯನ್ನು ಬಳಸಿಕೊಂಡು ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್ ಇಲ್ಲದೆ ಯಾವುದೇ ಎಟಿಎಂನಿಂದ ಯುಪಿಐ ಬಳಸಿ ಹಣವನ್ನು ಪಡೆಯಬಹುದಾಗಿದೆ.



ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ವಿನೂತನ ಯೋಜನೆ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಗ್ರಾಹಕರು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಇರುವ ಯಾವುದೇ ಯುಪಿಐ ಆಪ್ ಮೂಲಕ ಎಟಿಎಂನಲ್ಲಿ ಹಣ ಪಡೆಯಬಹುದು.



ಗೂಗಲ್ ಪೇ, ಫೋನ್ ಪೆ, ಪೇಟಿಎಂನಂತಹ ಯುಪಿಐ ಆಪ್‌ ನ್ನು ಆಯ್ಕೆ ಮಾಡಿಕೊಂಡಾಗ ಕ್ಯೂ ಆರ್ ಕೋಡ್ ಬರುತ್ತದೆ. ಆ ಕ್ಯೂ ಆರ್ ಕೋಡ್ ನ್ನು ಯುಪಿಐ ಆಪ್ ಮೂಲಕ ಸ್ಕ್ಯಾನ್ ಮಾಡಿ ಹಣವನ್ನು ಎಟಿಎಂ ಮೂಲಕ ಪಡೆಯಬಹುದು.



ಗ್ರಾಹಕರಿಗೆ ಮತ್ತೊಂದು ಭರ್ಜರಿ ಕೊಡುಗೆ

ಸ್ಟೇಟ್ ಬ್ಯಾಂಕ್ ಇನ್ನೊಂದು ಗ್ರಾಹಕ ಸ್ನೇಹಿ ವ್ಯವಸ್ಥೆಯನ್ನು ಆರಂಭಿಸಿದೆ. ಎಸ್‌ಬಿಐ ವಾಟ್ಸ್ಯಾಪ್ ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆ. ಈ ಸೌಲಭ್ಯವನ್ನು ಈಗಾಗಲೇ ಲಕ್ಷಾಂತರ ಗ್ರಾಹಕರು ಪಡೆದುಕೊಳ್ಳುತ್ತಿದ್ದಾರೆ.


ಈ ವಿನೂತನ ಯೋಜನೆಯ ಮೂಲಕ ಗ್ರಾಹಕರು ತಮ್ಮ ಬ್ಯಾಂಕಿಂಗ್ ಸೇವೆಯನ್ನು ಬ್ಯಾಂಕ್ ಶಾಖೆಗೆ ಭೇಟಿ ನೀಡದೆ ತಮ್ಮ ಮನೆಯಲ್ಲೋ ಆಫೀಸ್‌ನಲ್ಲೋ ಕುಳಿತು ವ್ಯವಹಾರ ನಡೆಸಬಹುದಾಗಿದೆ.


ಅಕೌಂಟ್ ಬ್ಯಾಲೆನ್ಸ್ ಮಾಹಿತಿ, ಸಾಲ ಸೌಲಭ್ಯ, ಹಾಗೂ ಚೆಕ್ ಸೇವೆ ಸೇರಿದಂತೆ ಹತ್ತು ಹಲವು ಸೇವೆಗಳನ್ನು ನಿಮಿಷಾರ್ಧದಲ್ಲಿ ತಾವಿರುವಲ್ಲಿಂದಲೇ ಪಡೆಯಬಹುದಾಗಿದೆ.



ಅಂತಿಮವಾಗಿ, ಇಮೇಲ್ ಖಾತೆ ಮತ್ತು ಮೊಬೈಲ್‌ ಸಂಖ್ಯೆಯನ್ನು ಲಿಂಕ್ ಮಾಡದ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಸೂಚನೆಯನ್ನು ನೀಡಿದೆ. ತಕ್ಷಣ ಲಿಂಕ್ ಮಾಡಿಕೊಳ್ಳುವುದು ಅತಿ ಅಗತ್ಯ. ಇದರಿಂದ ಗ್ರಾಹಕರಿಗೆ ಸುಲಭವಾಗಿ ಖಾತೆಯ ವಹಿವಾಟುಗಳ ಮಾಹಿತಿ ಸಿಗುತ್ತದೆ.

.



Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200