-->
ನಿವೃತ್ತಿಯ ಮುನ್ನಾ ದಿನವೂ ಇಂಕ್ರಿಮೆಂಟ್ ನಿರಾಕರಿಸುವಂತಿಲ್ಲ, ಅದು ಭಕ್ಷೀಸು ಅಲ್ಲ: ಸುಪ್ರೀಂ ಮಹತ್ವದ ತೀರ್ಪು

ನಿವೃತ್ತಿಯ ಮುನ್ನಾ ದಿನವೂ ಇಂಕ್ರಿಮೆಂಟ್ ನಿರಾಕರಿಸುವಂತಿಲ್ಲ, ಅದು ಭಕ್ಷೀಸು ಅಲ್ಲ: ಸುಪ್ರೀಂ ಮಹತ್ವದ ತೀರ್ಪು

ನಿವೃತ್ತಿಯ ಮುನ್ನಾ ದಿನವೂ ಇಂಕ್ರಿಮೆಂಟ್ ನಿರಾಕರಿಸುವಂತಿಲ್ಲ, ಅದು ಭಕ್ಷೀಸು ಅಲ್ಲ: ಸುಪ್ರೀಂ ಮಹತ್ವದ ತೀರ್ಪು


ಸುಪ್ರೀಂ ಕೋರ್ಟ್‌ ತನ್ನ ಮಹತ್ವದ ತೀರ್ಪೊಂದರಲ್ಲಿ ಸರ್ಕಾರಿ ನೌಕರರ ವಾರ್ಷಿಕ ವೇತನ ಹೆಚ್ಚಳವನ್ನು ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.ನ್ಯಾ. ಎಂ. ಆರ್. ಷಾ ಮತ್ತು ನ್ಯಾ. ಸಿ.ಟಿ. ರವಿಕುಮಾರ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ, ನೌಕರನ ನಿವೃತ್ತಿ ನಾಳೆಯಾಗುತ್ತಿದೆ ಎನ್ನುವ ಸಂದರ್ಭ ಬಂದಾಗಲೂ ಈ ದಿನ ಆತ ಇಂಕ್ರಿಮೆಂಟ್‌ಗೆ ಅರ್ಹತೆ ಹೊಂದಿದ್ದರೆ ಅದನ್ನು ಆತನಿಗೆ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.ಇಂಕ್ರಿಮೆಂಟ್ ಎಂಬುದು ಮುಂದಿನ ವರ್ಷ ಉತ್ತಮ ಸೇವೆ ಮಾಡಿ ಎಂದು ಕೊಡುವ ಪ್ರೋತ್ಸಾಹಕರ ಭಕ್ಷೀಸು ಅಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ನೌಕರನು ಇಂಕ್ರಿಮೆಂಟ್‌ಗೆ ಅರ್ಹನಾಗಿದ್ದರೆ ಆತನಿಗೆ ಅದನ್ನು ನಿರಾಕರಿಸುವಂತಿಲ್ಲ. ಕೇವಲ ಶಿಕ್ಷೆಗೆ ಗುರಿಪಡಿಸಬಹುದಾದ ಕಾರಣಕ್ಕೆ ಮಾತ್ರ ಇಂಕ್ರಿಮೆಂಟ್‌ನ್ನು ತಡೆಹಿಡಿಯಬಹುದಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.ಇಂಕ್ರಿಮೆಂಟ್ ಎನ್ನುವುದು ನೌಕರಿಗೆ ಸರ್ಕಾರ (ಉದ್ಯೋಗದಾತ) ನೀಡುತ್ತಿರುವ ಒಂದು ರೀತಿಯ ಪ್ರೋತ್ಸಾಹಕ ಕೊಡುಗೆ ಎಂಬ ಕೆಪಿಟಿಸಿಎಲ್ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.ಪ್ರಕರಣ: ನಿರ್ದೇಶಕರು(ಅಡ್ಮಿನ್ ಮತ್ತು ಎಚ್‌ಆರ್‌), ಕೆಪಿಟಿಸಿಎಲ್‌ ಮತ್ತಿತರರು Vs ಸಿ.ಪಿ. ಮುಂದಿನಮಣಿ ಮತ್ತಿತರರು (ಸುಪ್ರೀಂ ಕೋರ್ಟ್‌, Dated 11-04-2023)Ads on article

Advertise in articles 1

advertising articles 2

Advertise under the article