ಸ್ಥಿರಾಸ್ತಿ ನೋಂದಣಿಗೆ ಇನ್ನು ಆಧಾರ್ ಬಳಕೆ: ರಾಜ್ಯ ಸರ್ಕಾರ ಅನುಮತಿ
ಸ್ಥಿರಾಸ್ತಿ ನೋಂದಣಿಗೆ ಇನ್ನು ಆಧಾರ್ ಬಳಕೆ: ರಾಜ್ಯ ಸರ್ಕಾರ ಅನುಮತಿ
ಸ್ಥಿರಾಸ್ತಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಮಾರಾಟಗಾರರು ಮತ್ತು ಖರೀದಿದಾರರನ್ನು ಗುರುತಿಸಲು ಆಧಾರ್ ಕಾರ್ಡನ್ನು ಗುರುತಿನ ಚೀಟಿಯಾಗಿ ಬಳಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಒಬ್ಬರ ಆಸ್ತಿಯನ್ನು ಬೇರೊಬ್ಬರು ಮಾರಾಟ ಮಾಡುವುದನ್ನು ತಡೆಯುವ ಉದ್ದೇಶದಿಂದ ಕಂದಾಯ ಇಲಾಖೆ ಈ ಕ್ರಮ ಕೈಗೊಂಡಿದೆ.
ಇಲ್ಲಿಯವರೆಗೆ ಗುರುತಿನ ದಾಖಲೆಗಳು ಮತ್ತು ಸಹಿಯನ್ನು ಬಳಸಿಕೊಂಡು ಉಪ ನೋಂದಣಿ ಕಚೇರಿಗಳ್ಲಲಿ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ನಡೆಸಲಾಗುತ್ತಿತ್ತು. ಗುರುತಿನ ಚೀಟಿಗಳ ಆಧಾರದಲ್ಲಿ ಮಾರಾಟಗಾರರು ಮತ್ತು ಖರೀದಿದಾರರನ್ನು ಗುರುತಿಸಲಾಗುತ್ತಿತ್ತು.
ಈ ಪ್ರಕ್ರಿಯೆಲ್ಲಿ ನೈಜ ಮಾಲಕರನ್ನು ವಂಚಿಸಿ ಬೇರೆಯವರೂ ತಾವು ಮಾಲೀಕರೆಂದು ಬಿಂಬಿಸಿಕೊಳ್ಳುವ ಅಪಾಯ ಇತ್ತು.
ಕಂದಾಯ ಇಲಾಖೆಯ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ, ಭೂಮಿ ನಗರ ಆಸ್ತಿ ದಾಖಲೆಗಳ ವಿಭಾಗಗಳು ಆಸ್ತಿ ಮಾರಾಟಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಮಾರಾಟಗಾರರು ಮತ್ತು ಖರೀದಿದಾರರನ್ನು ಬಳಸಿಕೊಳ್ಳಲು ಅನುಮತಿ ನೀಡಿ ಮೇ 19ರಂದು ಅಧಿಸೂಚನೆ ಹೊರಡಿಸಲಾಗಿದೆ.