-->
ಜಾಮೀನು ನೀಡುವಲ್ಲಿ ತಡ ಮಾಡುವಂತಿಲ್ಲ, ವಿಸ್ತೃತ ಆದೇಶ ಬೇಡ: ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ

ಜಾಮೀನು ನೀಡುವಲ್ಲಿ ತಡ ಮಾಡುವಂತಿಲ್ಲ, ವಿಸ್ತೃತ ಆದೇಶ ಬೇಡ: ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ

ಜಾಮೀನು ನೀಡುವಲ್ಲಿ ತಡ ಮಾಡುವಂತಿಲ್ಲ, ವಿಸ್ತೃತ ಆದೇಶ ಬೇಡ: ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ





ಜಾಮೀನು ಮಂಜೂರು, ತಿರಸ್ಕಾರ ಅಥವಾ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಲ್ಲಿ ವಿಚಾರಣಾ ನ್ಯಾಯಾಲಯಗಳು ಅತಿಯಾದ ವಿಳಂಬ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಮಹತ್ವದ ಸೂಚನೆ ನೀಡಿದೆ.



ಪ್ರಸ್ತುತ ಜಾಮೀನು ಕೋರಿದ್ದ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ತನ್ನ ಆದೇಶಕ್ಕಾಗಿ ಐದು ವಾರಗಳ ಕಾಲ ಕಾಯ್ದಿರಿಸಿತ್ತು. ಆ ಬಳಿಕ ಆದೇಶ ಪ್ರಕಟಿಸಿತ್ತು. ಅಲ್ಲದೆ, ಈ ಆದೇಶ 13 ಪುಟಗಳಷ್ಟು ಸುದೀರ್ಘವಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.


ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬಿ.ಆರ್. ಗವಾಯಿ, ನ್ಯಾ. ವಿಕ್ರಮ್‌ನಾಥ್, ನ್ಯಾ. ಸಂಜಯ್ ಕರೋಲ್ ಅವರಿದ್ದ ತ್ರಿಸದಸ್ಯ ಪೀಠ, ನಾಗರಿಕ ಸ್ವಾತಂತ್ಯದ ವಿಚಾರದಲ್ಲಿ ವಿಚಾರಣಾ ನ್ಯಾಯಾಲಯಗಳು ಮತ್ತು ನ್ಯಾಯಾಂಗ ಸಂಸ್ಥೆಗಳು ನ್ಯಾಯಬದ್ಧವಾಗಿ ನಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿತು.


ಸದ್ರಿ ಪ್ರಕರಣದಲ್ಲಿನ ವಿಳಂಬವು ಸಾಂವಿಧಾನಿಕ ಸಮ್ಮತಿಗೆ ಹೊಂದಾಣಿಕೆಯಾಗುವುದಿಲ್ಲ. ಜಾಮೀನು ನೀಡುವಲ್ಲಿ ಕೆಳ ಹಂತದ ನ್ಯಾಯಾಲಯಗಳು ಅನಗತ್ಯ ವಿಳಂಬ ಮಾಡುವಂತಿಲ್ಲ ಎಂದು ಅದು ಹೇಳಿತು.


ಎಲ್ಲ ನ್ಯಾಯಾಲಯಗಳು ಜಾಮೀನು ಆದೇಶವನ್ನು ವಿಸ್ತಾರವಾಗದಂತೆ ನೋಡಿಕೊಳ್ಳಬೇಕು. ಅವುಗಳನ್ನು ಕಾಲಬದ್ಧ ನೆಲೆಯಲ್ಲಿ ಪ್ರಕಟಿಸಬೇಕು ಎಂದು ನ್ಯಾಯಪೀಠ ತಾಕೀತು ಮಾಡಿತು.


ಪ್ರಕರಣ: ಸುಮಿತ್ ಸುಭಾಷ್‌ಚಂದ್‌ರ ಗಂಗಾವಾಲ್ ಮತ್ತಿತರರು Vs ಮಹಾರಾಷ್ಟ್ರ ಸರ್ಕಾರ

ಸುಪ್ರೀಂ ಕೋರ್ಟ್

.

Ads on article

Advertise in articles 1

advertising articles 2

Advertise under the article