-->
ಆರೋಪಿ ಪರ ವಾದಿಸದಂತೆ ವಕೀಲರನ್ನು ತಡೆಯುವುದು ನ್ಯಾಯಾಂಗ ನಿಂದನೆ- ಸುಪ್ರೀಂ ಕೋರ್ಟ್

ಆರೋಪಿ ಪರ ವಾದಿಸದಂತೆ ವಕೀಲರನ್ನು ತಡೆಯುವುದು ನ್ಯಾಯಾಂಗ ನಿಂದನೆ- ಸುಪ್ರೀಂ ಕೋರ್ಟ್

ಆರೋಪಿ ಪರ ವಾದಿಸದಂತೆ ವಕೀಲರನ್ನು ತಡೆಯುವುದು ನ್ಯಾಯಾಂಗ ನಿಂದನೆ- ಸುಪ್ರೀಂ ಕೋರ್ಟ್
ವಕೀಲರ ಸಂಘಗಳು ಆರೋಪಿಗಳ ಪರ ವಾದಿಸದಂತೆ ವಕೀಲರನ್ನು ನಿರ್ಬಂಧಿಸುವ ನಿರ್ಣಯಗಳನ್ನು ಅಂಗೀಕರಿಸುವುದು ನ್ಯಾಯಾಲಯದ ನಿಂದನೆಯಾಗಿದೆ ಎಂದು ಸುಪ್ರೀಂ ಕೋರ್ಟ್  ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಜಿಲ್ಲಾ ಕಾನೂನು ನೆರವು ಸೇವಾ ಪ್ರಾಧಿಕಾರದಿಂದ ಕಾನೂನು ನೆರವು ರಕ್ಷಣಾ ಸಲಹೆಗಾರರಾಗಿ ನೇಮಕಗೊಂಡಿದ್ದ ಮೂವರು ವಕೀಲರ ಪರವಾನಿಗೆಯನ್ನು ಅಮಾನತುಗೊಳಿಸಿದ ಭರತ್ಪುರ ವಕೀಲರ ಸಂಘದ ಕ್ರಮಕ್ಕೆ ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ಮೂವರು ಆರೋಪಿಗಳ ಪರ ವಕಾಲತ್ತು ಸಲ್ಲಿಸಿದ್ದ ಡಿಫೆನ್ಸ್ ಕೌನ್ಸೆಲ್ ವಕೀಲರ ಸದಸ್ಯತ್ವವನ್ನು ಅಮಾನತು ಮಾಡಿದ ಭರತ್ಪುರದ ವಕೀಲರ ಸಂಘದ ಕ್ರಮವನ್ನು ಪ್ರಶ್ನಿಸಿ ವಕೀಲರಾದ ವಿಶಾಲ್ ತಿವಾರಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠ ನಡೆಸಿತು.

ವಕೀಲರು ಆರೋಪಿಯನ್ನು ಪ್ರತಿನಿಧಿಸುವುದಿಲ್ಲ ಎಂದು ವಕೀಲರ ಸಂಘಗಳು ನಿರ್ಣಯವನ್ನು ಅಂಗೀಕರಿಸುವುದು ಕ್ರಿಮಿನಲ್ ನ್ಯಾಯಾಂಗ ನಿಂದನೆಯಲ್ಲದೆ ಬೇರೇನೂ ಅಲ್ಲ.  ವಕೀಲರ ಸಂಘಗಳು ಇಂತಹ ನಿರ್ಣಯಗಳನ್ನು ಅಂಗೀಕರಿಸುವಂತಿಲ್ಲ. ಯಾವ ವಕೀಲರೂ ಕಲಾಪದಲ್ಲಿ ಭಾಗವಹಿಬಾರದು, ವಕಲಾತ್ತು ಹಾಕಬಾರದು ಎಂದು ಹೇಳುವುದು ಅಪರಾಧಿಕ ಪ್ರಕ್ರಿಯೆಯೇ ಸರಿ ಎಂದು ನ್ಯಾಯಪೀಠ ವಿಷಾದ ವ್ಯಕ್ತಪಡಿಸಿತು.

ಅಲ್ಲದೆ, ಮುಂದಿನ ವಿಚಾರಣಾ ದಿನದಂದು ಭರತ್ಪುರ  ವಕೀಲರ ಸಂಘದ ಪದಾಧಿಕಾರಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಮತ್ತು ವಕೀಲರ ಪರವಾನಗಿಯನ್ನು ಅಮಾನತುಗೊಳಿಸುವ ಕ್ರಮವನ್ನು ವಿವರಿಸಲು ಸುಪ್ರೀಂ ಕೋರ್ಟ್ ನ್ಯಾಯಪೀಠ ಸಮನ್ಸ್ ಜಾರಿಗೊಳಿಸಿತು.

ಕಾನೂನು ನೆರವು ಸೇವಾ ಪ್ರಾಧಿಕಾರವು ಜಾರಿಗೊಳಿಸಿದ ಕಾನೂನು ನೆರವು ರಕ್ಷಣಾ ಸಲಹೆಗಾರರ ಯೋಜನೆಯ  ಪ್ರಕಾರ, ಆರೋಪಿಗಳಿಗೆ ಅಥವಾ ಅಪರಾಧಗಳಿಗೆ ಶಿಕ್ಷೆಗೊಳಗಾದ ವ್ಯಕ್ತಿಗಳಿಗೆ ಕಾನೂನು ನೆರವು ನೀಡಲು ಪ್ರತ್ಯೇಕವಾಗಿ ಕೆಲಸ ಮಾಡಲು ವಕೀಲರು ಪೂರ್ಣ ಸಮಯವನ್ನು ತೊಡಗಿಸಿಕೊಳ್ಳಬೇಕು.

ಯೋಜನೆಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾದಾಗ, ಭರತ್ಪುರದಲ್ಲಿ ವಕೀಲರು ಯೋಜನೆಯ ವಿರುದ್ಧ ಪ್ರತಿಭಟಿಸಿದರು.

ಅರ್ಜಿದಾರರು, ವಕೀಲರಾದ ಪೂರ್ಣಪ್ರಕಾಶ ಶರ್ಮಾ, ಪುನೀತ್ ಗಾರ್ಗ್ ಮತ್ತು ಮಾಧವೇಂದ್ರ ಸಿಂಗ್ ಅವರು ಡಿಫೆನ್ಸ್ ಕೌನ್ಸೆಲ್ ಆಗಿ ನಿಯುಕ್ತಿಗೊಂಡರು ಮತ್ತು ಅವರು ಸದ್ರಿ ವಕೀಲರ ಸಂಘದ ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ.

 

ಹಿನ್ನೆಲೆಯಲ್ಲಿ ಚಳವಳಿಯನ್ನು ವಿರೋಧಿಸಿ ದುರ್ಬಲಗೊಳಿಸಿದ್ದಕ್ಕಾಗಿ ಅರ್ಜಿದಾರರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಅವರು ಬಗ್ಗದಿದ್ದಾಗ, ಸರತಿ ಸಾಲಿನಲ್ಲಿ ಬೀಳದ ಕಾರಣ ಅವರನ್ನು ಅಮಾನತುಗೊಳಿಸಲಾಯಿತು.

ಈ ಹಿನ್ನೆಲೆಯಲ್ಲಿ ಅಮಾನತುಗೊಂಡ ವಕೀಲರು, ಭರತ್ ಪುರ ವಕೀಲರ ಸಂಘದ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.


Ads on article

Advertise in articles 1

advertising articles 2

Advertise under the article