-->
SARFAESI Act: ಬ್ಯಾಂಕ್‌ ಕ್ರಮ ಪ್ರಶ್ನಿಸಿ ರಿಟ್ ಅರ್ಜಿ ಹಾಕುವುದು ಸೂಕ್ತವಲ್ಲ- ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು

SARFAESI Act: ಬ್ಯಾಂಕ್‌ ಕ್ರಮ ಪ್ರಶ್ನಿಸಿ ರಿಟ್ ಅರ್ಜಿ ಹಾಕುವುದು ಸೂಕ್ತವಲ್ಲ- ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು

SARFAESI Act: ಬ್ಯಾಂಕ್‌ ಕ್ರಮ ಪ್ರಶ್ನಿಸಿ ರಿಟ್ ಅರ್ಜಿ ಹಾಕುವುದು ಸೂಕ್ತವಲ್ಲ- ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು

ಸೆಕ್ಯುರಿಟೈಸೇಶನ್ ಮತ್ತು ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಮತ್ತು ಎನ್ಫೋರ್ಸ್ಮೆಂಟ್ ಆಫ್ ಸೆಕ್ಯುರಿಟಿ ಇಂಟ್ರೆಸ್ಟ್ ಆಕ್ಟ್, 2002(SARFAESI ಕಾಯಿದೆ)ರ ಸೆಕ್ಷನ್ 13(4) ರ ಅಡಿಯಲ್ಲಿ ಬ್ಯಾಂಕ್ ತೆಗೆದುಕೊಂಡ ಕಾನೂನುಬದ್ಧ ಕ್ರಮದ ವಿರುದ್ಧ ಭಾರತದ ಸಂವಿಧಾನದ ಆರ್ಟಿಕಲ್ 226 ರ ಅಡಿಯಲ್ಲಿ ಹಾಕಲಾದ ರಿಟ್ ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್‌ನ ನ್ಯಾ. ಎಂ.ಆರ್. ‍ಷಾ ಮತ್ತು ನ್ಯಾ. ಸಿ.ಟಿ. ರವಿ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ.

ಜಿ. ವಿಕ್ರಮ್ ಕುಮಾರ್ Vs ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮತ್ತಿತರರು ಪ್ರಕರಣದಲ್ಲಿ ಹಾಕಲಾದ ರಿಟ್ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, SARFAESI ಕಾಯಿದೆಯ ಸೆಕ್ಷನ್ 17ರ ಅಡಿಯಲ್ಲಿ ಪರ್ಯಾಯ ಶಾಸನಬದ್ಧ ಪರಿಹಾರ ಅಸ್ತಿತ್ವದಲ್ಲಿ ಇರುವುದರಿಂದ ಸದ್ರಿ ರಿಟ್ ಅರ್ಜಿ ನಿರ್ವಹಣೆಗೆ ಯೋಗ್ಯವಲ್ಲ ಎಂದು ಹೇಳಿದೆ.

ಪ್ರಕರಣ: ಜಿ. ವಿಕ್ರಮ್ ಕುಮಾರ್ Vs ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮತ್ತಿತರರು (ಸುಪ್ರೀಂ ಕೋರ್ಟ್‌)

Ads on article

Advertise in articles 1

advertising articles 2

Advertise under the article