ವೇಶ್ಯೆಯರ ಜೊತೆಗೆ ಕ್ರಿಕೆಟಿಗ ಮೊಹಮ್ಮದ್ ಶಮಿ ಸಂಬಂಧ: ಪತ್ನಿ ಆರೋಪ
ವೇಶ್ಯೆಯರ ಜೊತೆಗೆ ಕ್ರಿಕೆಟಿಗ ಮೊಹಮ್ಮದ್ ಶಮಿ ಸಂಬಂಧ: ಪತ್ನಿ ಆರೋಪ
ಬಿಸಿಸಿಐ ಪ್ರವಾಸದ ವೇಳೆ ಮತ್ತು ಹೊಟೇಲ್‌ಗಳಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿ ವೇಶ್ಯೆಯರ ಜೊತೆಗೆ ಸಂಬಂಧ ಹೊಂದಿದ್ದರು. ವೇಶ್ಯೆಯರ ಜೊತೆಗಿನ ಒಡನಾಟಕ್ಕಾಗಿ ಶಮಿ ಎರಡನೇ ಫೋನ್ ಬಳಸುತ್ತಿದ್ದರು. ಅದು ಈಗ ಪೊಲೀಸರ ವಶದಲ್ಲಿ ಇದೆ. ಇಷ್ಟಾದರೂ ಶಮಿ ಅವರಿಗೆ ವೇಶ್ಯೆಯ ನಂಟು ಮುಂದುವರಿದಿದೆ.
ಹಾಗಂತ, ಆರೋಪ ಮಾಡಿದವರು ಶಮಿ ಅವರ ಪತ್ನಿ ಹಸೀನಾ ಜಹಾನ್. ಈ ವಿಚಾರಗಳನ್ನು ಮುಂದಿರಿಸಿ ಆಕೆ ಸುಪ್ರೀಂಕೋರ್ಟ್‌ಗೆ ಲಿಖಿತ ಅರ್ಜಿ ಸಲ್ಲಿಸಿದ್ದು, ಪತಿ ಮೊಹಮ್ಮದ್ ಶಮಿ ಅವರ ಬಂಧನಕ್ಕೆ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಕೋರಿದ್ದಾರೆ.
ಶಮಿ ನನ್ನಿಂದ ವರದಕ್ಷಿಣೆ ಕೇಳಿ ಹಣ ತರುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೆ, ನಿರಂತರವಾಗಿ ವಿವಾಹೇತರ ಅಕ್ರಮ ಸಂಬಂಧಗಳಲ್ಲಿ ತೊಡಗಿದ್ದಾರೆ ಎಂದು ಹಸೀನ್ ಜಹಾನ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ.
2023ರ ಜನವರಿಯಲ್ಲಿ ಕೊಲ್ಕೊತ್ತಾ ನ್ಯಾಯಾಲಯವು ಹಸೀನಾ ವರಿಗೆ ಮಾಸಿಕ 50,000/- ಜೀವನಾಂಶ ನೀಡುವಂತೆ ಪತಿ ಶಮಿ ಅವರಿಗೆ ಆದೇಶ ನೀಡಿತ್ತು. ಶಮಿ ವಿರುದ್ಧ ಹೊರಡಿಸಿದ್ದ ಬಂಧನ ವಾರೆಂಟ್‌ಗೆ 2019ರಲ್ಲಿ ಪಶ್ಚಿಮ ಬಂಗಾಳದ ಸೆಷನ್ಸ್ ನ್ಯಾಯಾಲಯ ತಡೆ ನೀಡಿತ್ತು. ಜೊತೆಗೆ ಶಮಿ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನೂ ಸ್ಥಗಿತಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಹಸೀನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
.