-->
ಮಾನ್ಯತೆ ಇಲ್ಲದ ವಿವಿಯ ಕಾನೂನು ಪದವಿ: ವಕೀಲರ ನೋಂದಣಿ ನಿರಾಕರಿಸಲು ಬಿಸಿಐಗೆ ಹಕ್ಕಿದೆ

ಮಾನ್ಯತೆ ಇಲ್ಲದ ವಿವಿಯ ಕಾನೂನು ಪದವಿ: ವಕೀಲರ ನೋಂದಣಿ ನಿರಾಕರಿಸಲು ಬಿಸಿಐಗೆ ಹಕ್ಕಿದೆ

ಮಾನ್ಯತೆ ಇಲ್ಲದ ವಿವಿಯ ಕಾನೂನು ಪದವಿ: ವಕೀಲರ ನೋಂದಣಿ ನಿರಾಕರಿಸಲು ಬಿಸಿಐಗೆ ಹಕ್ಕಿದೆ





ಭಾರತೀಯ ವಕೀಲರ ಪರಿಷತ್ತು(Bar Council of India-BCI) ಒಂದು ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು, ತನ್ನಲ್ಲಿ ನೋಂದಾಯಿಸುವ ಸದಸ್ಯರಿಗೆ ಯಾ ವಕೀಲರಿಗೆ ಇರಬೇಕಾದ ಅರ್ಹತೆ ಮತ್ತು ಅಗತ್ಯಗಳನ್ನು ಸೂಚಿಸುವ ಅಧಿಕಾರ ಅದಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.



ಬಾರ್ ಕೌನ್ಸಿಲ್ ಆಫ್ ಇಂಡಿಯಾ Vs ರಬಿ ಸಾಹು ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ವಿಕ್ರಮ್‌ನಾಥ್ ಮತ್ತು ಪಿ.ವಿ. ಸಂಜಯ್ ಕುಮಾರ್ ವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.



ಬಾರ್ ಕೌನ್ಸಿಲ್ ಆಫ್ ಇಂಡಿಯಾ Vs ಬೋನಿ ಫೋಯ್ ಲಾ ಕಾಲೇಜ್‌ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನಿಕ ಪೀಠ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಮಾನ್ಯತೆ ಪಡೆದ ಸಂಸ್ಥೆಯಿಂದ ಕಾನೂನು ಪದವಿ ಪಡೆದರೆ ಮಾತ್ರ ವಕೀಲರಾಗಿ ನೋಂದಾಯಿಸಿಕೊಳ್ಳಬಹುದು ಎಂಬ ಬಿಸಿಐ ನಿಯಮ ಸಮರ್ಪಕವಾಗಿದೆ ಎಂದು ಸ್ಪಷ್ಟಪಡಿಸಿದೆ.


ಮಾನ್ಯತೆ ಇಲ್ಲದ ಒಡಿಶಾದ ವಿವೇಕಾನಂದ ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ವಿದ್ಯಾರ್ಥಿಯನ್ನು ವಕೀಲರಾಗಿ ನೋಂದಾಯಿಸಿಕೊಳ್ಳಲು ಭಾರತೀಯ ವಕೀಲರ ಪರಿಷತ್ತು ನಿರಾಕರಿಸಿತ್ತು. 


ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಪುರಸ್ಕರಿಸಿದ ಒಡಿಶಾ ಹೈಕೋರ್ಟ್, ಅರ್ಜಿದಾರ ವಿದ್ಯಾರ್ಥಿಯನ್ನು ವಕೀಲರನ್ನಾಗಿ ನೋಂದಾಯಿಸಿಕೊಳ್ಳುವಂತೆ ಅದೇಶ ನೀಡಿತ್ತು. ಅಲ್ಲದೆ, ಹೆಚ್ಚುವರಿ ಷರತ್ತು ವಿಧಿಸದಂತೆ ಬಿಸಿಐಗೆ ಹೈಕೋರ್ಟ್ ನಿರ್ಬಂಧ ವಿಧಿಸಿತ್ತು.



ಈ ಆದೇಶವನ್ನು ಸಲ್ಲಿಸಿ ಬಿಸಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನೋಂದಣಿಗೆ ಮುನ್ನ ವಕೀಲರ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ವಿಚಾರಗಳನ್ನು ನಿರ್ಧರಿಸುವ ಅಧಿಕಾರ ಯಾ ಹಕ್ಕು ಬಿಸಿಐಗೆ ಇದೆಯೇ ಎಂಬುದು ನ್ಯಾಯಪೀಠದ ಮುಂದೆ ಇದ್ದ ಪ್ರಶ್ನೆಯಾಗಿತ್ತು. 


ವಿ. ಸುಧೀರ್ Vs ಬಿಸಿಐ ಪ್ರಕರಣದ ತೀರ್ಪನ್ನು ಬದಿಗೆ ಸರಿಸಿ ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ಅನುಸರಿಸಿ ಬಿಸಿಐ ಮೇಲ್ಮನವಿಯನ್ನು ಪುರಸ್ಕರಿಸಿತು.


ಪ್ರಕರಣ: ಬಾರ್ ಕೌನ್ಸಿಲ್ ಆಫ್ ಇಂಡಿಯಾ Vs ರಬಿ ಸಾಹು ಪ್ರಕರಣ

Ads on article

Advertise in articles 1

advertising articles 2

Advertise under the article