-->
ಶಾಲೆ, ಕಾಲೇಜು, ವಿವಿಗಳಲ್ಲಿ ಇದು ಇನ್ನು ಕಡ್ಡಾಯ!- ಸರ್ಕಾರಿಯಾಗಲೀ... ಖಾಸಗಿಯಾಗಲೀ ಕಡ್ಡಾಯ...

ಶಾಲೆ, ಕಾಲೇಜು, ವಿವಿಗಳಲ್ಲಿ ಇದು ಇನ್ನು ಕಡ್ಡಾಯ!- ಸರ್ಕಾರಿಯಾಗಲೀ... ಖಾಸಗಿಯಾಗಲೀ ಕಡ್ಡಾಯ...

ಶಾಲೆ, ಕಾಲೇಜು, ವಿವಿಗಳಲ್ಲಿ ಇದು ಇನ್ನು ಕಡ್ಡಾಯ!- ಸರ್ಕಾರಿಯಾಗಲೀ... ಖಾಸಗಿಯಾಗಲೀ ಕಡ್ಡಾಯ...

ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಸಂವಿಧಾನದ ಪೀಠಿಕೆ ಓದುವುದು ಇನ್ನು ಮುಂದೆ ಕಡ್ಡಾಯ.ಸಂವಿಧಾನದ ಆಶಯವನ್ನು ಎತ್ತಿಹಿಡಿಯುವ ಈ ಐತಿಹಾಸಿಕ ತೀರ್ಮಾನವನ್ನು ರಾಜ್ಯ ಸರ್ಕಾರ ತನ್ನ ಸಂಪುಟ ಸಭೆಯಲ್ಲಿ ಕೈಗೊಂಡಿದೆ.ಅಷ್ಟೇ ಅಲ್ಲ.. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್, ನಗರ ಸಭೆ ಮತ್ತು ಪುರಸಭೆ ಸೇರಿದಂತೆ ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನ ಪೀಠಿಕೆ ಅಳವಡಿಸಬೇಕು.ಇದನ್ನು ಕಡ್ಡಾಯಗೊಳಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವುದಾಗಿ ಸಚಿವ ಎಚ್.ಸಿ. ಮಹಾದೇವಪ್ಪ ಮಾಹಿತಿ ನೀಡಿದ್ದಾರೆ.ನಾವೇ ಪಡೆದುಕೊಂಡಿರುವ ಸ್ವಾತಂತ್ಯವನ್ನು ಮೈಮರೆತು ಕಳೆದುಕೊಂಡರೆ ಮತ್ತೆ ಅದನ್ನು ಪಡೆಯಲಾಗದು ಎಂದು ಅಂಬೇಡ್ಕರ್ ತಿಳಿ ಹೇಳಿರುವುದನ್ನು ನೆನಪಿಸಿದ ಸಚಿವರು, ದೇಶ ನಿರ್ಮಾಣದಲ್ಲಿ ಯುವ ಜನರನ್ನು ತೊಡಗಿಸಲು, ಧಾರ್ಮಿಕ ಸಮಾನತೆಯನ್ನು ಕಾಣಲು ಸಂವಿಧಾನದ ಓದು ಅಗತ್ಯವಾಗಿದೆ. ಜನರ ನೈತಿಕ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲೂ ಇದು ಅತಿ ಅಗತ್ಯವಾಗಿದೆ ಎಂಬುದು ಸಂಪುಟ ಸಭೆಯ ಈ ನಿರ್ಧಾರ ಆಶಯ ಎಂದು ಅವರು ಹೇಳಿದರು.

.

Ads on article

Advertise in articles 1

advertising articles 2

Advertise under the article