-->
ಒಂದು ರೂಪಾಯಿ ಪಡೆಯದೆ 125ಕ್ಕೂ ಅಧಿಕ ವಿಚ್ಚೇದನ ತಡೆದಿದ್ದ ವಕೀಲನಿಗೆ ಪತ್ನಿಯಿಂದಲೇ ಡೈವರ್ಸ್!

ಒಂದು ರೂಪಾಯಿ ಪಡೆಯದೆ 125ಕ್ಕೂ ಅಧಿಕ ವಿಚ್ಚೇದನ ತಡೆದಿದ್ದ ವಕೀಲನಿಗೆ ಪತ್ನಿಯಿಂದಲೇ ಡೈವರ್ಸ್!

ಒಂದು ರೂಪಾಯಿ ಪಡೆಯದೆ 125ಕ್ಕೂ ಅಧಿಕ ವಿಚ್ಚೇದನ ತಡೆದಿದ್ದ ವಕೀಲನಿಗೆ ಪತ್ನಿಯಿಂದಲೇ ಡೈವರ್ಸ್!





ಒಂದು ರೂಪಾಯಿ ಕೂಡ ಶುಲ್ಕ ಪಡೆಯದೆ 125ಕ್ಕೂ ಅಧಿಕ ಪತಿ-ಪತ್ನಿಯರ ವಿಚ್ಚೇದನವನ್ನು ತಡೆದಿದ್ದ ವಕೀಲರೊಬ್ಬರಿಗೆ ತಮ್ಮ ಪತ್ನಿಯೇ ಡೈವರ್ಸ್ ನೀಡಿದ ವಿಲಕ್ಷಣ ಘಟನೆ ಅಹ್ಮದಾಬಾದ್‌ನಲ್ಲಿ ನಡೆದಿದೆ.


ತಮ್ಮ 16 ವರ್ಷಗಳ ವೃತ್ತಿ ಜೀವನದಲ್ಲಿ ಆ ಹಿರಿಯ ವಕೀಲರು 130ಕ್ಕೂ ಅಧಿಕ ವಿಚ್ಚೇದನ ಪ್ರಕರಣಗಳನ್ನು ಸುಖಾಂತ್ಯವಾಗಿ ಬಗೆಹರಿಸಿದ್ದರು. ಒಡೆದ ಮನಸ್ಸುಗಳನ್ನು ಒಂದುಗೂಡಿಸಿ ಮತ್ತೆ ಸುಖೀ ದಾಂಪತ್ಯ ನಡೆಸುವಂತೆ ಪ್ರೇರೇಪಿಸಿದ್ದರು. ಇದೆಲ್ಲವೂ ಅವರು ಮಾಡಿದ್ದು ಯಾವುದೇ ರೀತಿಯ ಶುಲ್ಕ ಪಡೆಯದೆ.


ಆದರೆ, ದುರದೃಷ್ಟವಶಾತ್ ಅವರ ಪತ್ನಿಯೇ ವಕೀಲ ಪತಿಗೆ ವಿಚ್ಚೇದನ ನೀಡಿ ತಮ್ಮ ಸಂಸಾರವನ್ನೇ ಕೊನೆಗಾಣಿಸಿದ್ದಾರೆ.


ಘಟನೆ ಏನು..?

ಗುಜರಾತ್‌ ಅಹ್ಮದಾಬಾದ್‌ನ ವಕೀಲರೊಬ್ಬರು ಕಳೆದ 16 ವರ್ಷಗಳಿಂದ ಹಲವು ಸಾಂಸಾರಿಕ ಬದುಕನ್ನು ಸರಿಪಡಿಸಿದ್ದರು. ಒಡೆದು ಬೇರೆಯಾಗುತ್ತಿದ್ದ ಜೋಡಿಗಳನ್ನು ಮನವೊಲಿಸಿ ಒಟ್ಟಾಗಿ ಸಂತಸದಿಂದ ಜೀವನ ಸಾಗಿಸುವಂತೆ ಪ್ರಯತ್ನ ಮಾಡಿದ್ದರು.



ಆದರೆ, ವಕೀಲರ ಪತ್ನಿ ವಿಚ್ಚೇದನ ನೀಡಲು ಕಾರಣವೂ ವಕೀಲರ ಈ ಸಮಾಜ ಸೇವೆ. ತಮ್ಮ ಬಳಿ ಬರುವ ದಂಪತಿಗೆ ಬುದ್ಧಿಮಾತು ಹೇಳುವ ವಕೀಲರು ಅವರಿಂದ ಯಾವುದೇ ಹಣ ಪಡೆಯುತ್ತಿಲ್ಲ. ಈ ರೀತಿ ಆದರೆ, ನಮ್ಮ ಬದುಕು ಸಂಕಟವಾಗುತ್ತದೆ.


ಹೆಸರಾಂತ ವಕೀಲರಾದರೂ ಹಣ ಇಲ್ಲದಿದ್ದರೆ ಸಂಸಾರ ನಡೆಸುವುದು ಹೇಗೆ..? ಹಣಕಾಸಿನ ಮುಗ್ಗಟ್ಟು ಈ ವಕೀಲರ ಪತ್ನಿಗೆ ವಿಚ್ಚೇದನ ನೀಡಲು ಏಕೈಕ ಕಾರಣ.. ಏನೇ ಆದರೂ ಗಂಡ ಬದಲಾಗುವುದಿಲ್ಲ. ಹಾಗಾಗಿ ತಾವು ನ್ಯಾಯಾಲಯದ ಮೆಟ್ಟಿಲೇರಿದ್ದೇನೆ. ಪತಿಯಿಂದ ವಿಚ್ಚೇದನ ಬಯಸಿದ್ದೇನೆ ಎಂದು ವಕೀಲರ ಪತ್ನಿ ಹೇಳಿದ್ದಾರೆ.



ಅಪ್ಪನ ಹಾದಿಯಲ್ಲಿ ಮಗಳು

ಈ ದಂಪತಿಯ ಮಗಳೂ ಅಪ್ಪನ ಹಾದಿಯಲ್ಲೇ ಸಾಗಿದ್ದಾಳೆ. ಕಾನೂನು ಪದವಿ ಓದುತ್ತಿರುವ ಆಕೆ, ಈಗ ವಕೀಲ ವೃತ್ತಿಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಾಳೆ.


ತಾಯಿಯ ಜೊತೆಗೆ ವಾಸ ಮಾಡುತ್ತಿರುವ ಮಗಳು, ವಿಚ್ಚೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ತಾಯಿಯ ಜೊತೆಗೆ ಇರುವುದಾಗಿ ಹೇಳಿದ್ಧಾರೆ.


ತಂದೆ-ತಾಯಿಯ ವಿಚ್ಚೇದನ ಅಧಿಕೃತಗೊಂಡ ಬಳಿಕ ತಾವು ತಂದೆಯ ಜೊತೆಗೆ ಇರುವುದಾಗಿ ಹೇಳಿದ್ದಾರೆ. ನನಗೆ ತಂದೆಯೇ ರೋಲ್ ಮಾಡೆಲ್. ಆಕೆಯ ಬಯಕೆಯನ್ನು ನ್ಯಾಯಾಲಯವೂ ಒಪ್ಪಿಕೊಂಡಿದೆ.


ಈ ಪ್ರಕರಣದ ಇನ್ನೊಂದು ವಿಶೇಷವೆಂದರೆ, ಎಲ್ಲ ಕೇಸ್‌ನಂತೆ ಈ ಪ್ರಕಣದಲ್ಲಿ ಪತ್ನಿ ತನ್ನ ವಕೀಲ ಪತಿಯಿಂದ ಯಾವುದೇ ಜೀವನಾಂಶ ಕೇಳಿಲ್ಲ. ಸಾಮಾನ್ಯವಾಗಿ, ವಿಚ್ಚೇದಿತ ಪತಿ ತನ್ನ ವಿಚ್ಚೇದಿತ ಪತ್ನಿಗೆ ಜೀವನಾಂಶ ನೀಡಬೇಕಾಗುತ್ತದೆ.


138 ಜೋಡಿಗಳನ್ನು ಒಂದುಗೂಡಿಸಿದ ವಕೀಲರಿಗೆ ತಮ್ಮ ಪತ್ನಿಯನ್ನು ಮನವೊಲಿಸಿ ಒಂದುಗೂಡಿಸಲು ಸಾಧ್ಯವಾಗದೇ ಇರುವುದು ವಿಚಿತ್ರವಾದರೂ ಸತ್ಯ.

.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200