OPS Vs NPS : ಎನ್‌ಪಿಎಸ್‌ನಲ್ಲಿ ಕೆಲವು ಬದಲಾವಣೆ- ಸರ್ಕಾರಿ ನೌಕರರಿಗೆ ಎಷ್ಟು ಅನುಕೂಲ?
OPS Vs NPS : ಎನ್‌ಪಿಎಸ್‌ನಲ್ಲಿ ಕೆಲವು ಬದಲಾವಣೆ- ಸರ್ಕಾರಿ ನೌಕರರಿಗೆ ಎಷ್ಟು ಅನುಕೂಲ?
ಪಿಂಚಣಿ ಯೋಜನೆಯಲ್ಲಿ OPS ಉತ್ತಮವೇ? NPS ಉತ್ತಮವೇ..? ಈ ಪ್ರಶ್ನೆ ಸರ್ಕಾರಿ ನೌಕರರನ್ನು ಕಾಡುತ್ತಿದೆ. ಕೆಲವು ರಾಜ್ಯಗಳು NPS ಬದಲಿಗೆ OPS ಯೋಜನೆಯತ್ತ ಮುಖ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರೆ ಸರ್ಕಾರಿ NPS ಪಿಂಚಣಿ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮುಂದಾಗಿದೆ.
ಸರ್ಕಾರಿ ಉದ್ಯೋಗಿ ತನ್ನ ಸೇವಾವಧಿಯಲ್ಲಿ ಕೊನೆಯ ವೇತನದ ಕನಿಷ್ಟ 40-45ರಷ್ಟು ಮೊತ್ತದ ಪಿಂಚಣಿಯನ್ನು ಖಾತರಿಪಡಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ.
ಬಂಡವಾಳ ಮಾರುಕಟ್ಟೆ ಆಧಾರಿತ ನೂತನ ಪಿಂಚಣಿ ಯೋಜನೆಯ ಬದಲಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಕೆಲವು ಸರ್ಕಾರಗಳು ಇಚ್ಚಿಸಿವೆ. ಈ ಹಿನ್ನೆಲೆಯಲ್ಲಿ ಹೊಸ ಪಿಂಚಣಿ ಯೋಜನೆಯನ್ನು ಮತ್ತಷ್ಟು ಆಕರ್ಷಕಗೊಳಿಸಲಾಗುವುದು. ಇದಕ್ಕಾಗಿ ಕೆಲವು ಬದಲಾವಣೆಗಳನ್ನು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂಬುದನ್ನು ಹಣಕಾಸು ಸಚಿವಾಲಯ ತಿಳಿಸಿದೆ. ಹೊಸ ಪಿಂಚಣಿ ಯೋಜನೆಯಲ್ಲಿ ನೌಕರರ ಪಿಂಚಣಿಗಾಗಿ ಮೀಸಲಿಡುವ ಮೊತ್ತವನ್ನು ಬಂಡವಾಳ ಮಾರುಕಟ್ಟೆಯಲ್ಲಿ ವಿನಿಯೋಗಿಸಲಾಗುವುದು. ಮಾರುಕಟ್ಟೆಯ ಏರಿಳಿತವನ್ನು ಅವಲಂಬಿಸಿ ಪಿಂಚಣಿ ಮೊತ್ತ ನಿರ್ಧಾರವಾಗುತ್ತದೆ.
ಆದರೆ, ಹಳೆಯ ಪಿಂಚಣಿ ಯೋಜನೆಯಲ್ಲಿ ಕೊನೆಯ ವೇತನದ ಶೇ. 50ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ. ಹಳೆಯ ವ್ಯವಸ್ಥೆಯಲ್ಲಿ ನೌಕರರು ಪಿಂಚಣಿಗೆ ತಮ್ಮ ವೇತನದಿಂದ ಯಾವುದೇ ಕೊಡುಗೆ ನೀಡಬೇಕಾಗಿಲ್ಲ.
ಹೊಸ ಪಿಂಚಣಿ ಯೋಜನೆಯಲ್ಲಿ ಕೆಲವೊಂದು ಬದಲಾವಣೆ ತಂದು, ಪಿಂಚಣಿಯಾಗಿ ನೀಡಲಾಗುವ ಖಾತರಿ ಮೊತ್ತವನ್ನು ನೀಡುವ ಚಿಂತನೆಯನ್ನು ಮಾಡಲಾಗಿದೆ ಎನ್ನಲಾಗಿದೆ. ಆದರೆ, ಮತ್ತೆ ಹಳೆಯ ವ್ಯವಸ್ಥೆಗೆ ಮರಳುವ ಯಾವುದೇ ಸಾಧ್ಯತೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಹಳೆಯ ಪಿಂಚಣಿ ವ್ಯವಸ್ಥೆಗೆ ಮರಳುವುದಕ್ಕಿಂತ ಈ ವ್ಯವಸ್ಥೆಯು ಹಣಕಾಸಿನ ಲೆಕ್ಕಾಚಾರದಲ್ಲಿ ಹೆಚ್ಚು ಸೂಕ್ತ ಎಂಬ ಅಭಿಪ್ರಾಯಗಳು ಬಲವಾಗುತ್ತಿದೆ.
.