-->
NI Act Sec 138: ಚೆಕ್ ಅಮಾನ್ಯ ಪ್ರಕರಣದಲ್ಲಿ ಮೊತ್ತದ ಬಾಧ್ಯಸ್ಥತೆ- ಆರೋಪಿಯ ಖುಲಾಸೆಗೆ ರಾಜಮಾರ್ಗ...!

NI Act Sec 138: ಚೆಕ್ ಅಮಾನ್ಯ ಪ್ರಕರಣದಲ್ಲಿ ಮೊತ್ತದ ಬಾಧ್ಯಸ್ಥತೆ- ಆರೋಪಿಯ ಖುಲಾಸೆಗೆ ರಾಜಮಾರ್ಗ...!

ಚೆಕ್ ಅಮಾನ್ಯ ಪ್ರಕರಣದಲ್ಲಿ ಮೊತ್ತದ ಬಾಧ್ಯಸ್ಥತೆ- ಆರೋಪಿಯ ಖುಲಾಸೆಗೆ ರಾಜಮಾರ್ಗ...!

ಚೆಕ್ ಅಮಾನ್ಯ ಪ್ರಕರಣದಲ್ಲಿ ಫಿರ್ಯಾದುದಾರರು ನ್ಯಾಯಾಲಯದಲ್ಲಿ ಸಾಬೀತುಮಾಡಬೇಕಾದ ಮೂರು ಅಂಶಗಳಲ್ಲಿ ಚೆಕ್‌ನಲ್ಲಿ ಕಾಣಿಸಿದ ಮೊತ್ತದ ಬಾಧ್ಯಸ್ಥತೆಯನ್ನು ಸಾಬೀತುಪಡಿಸಬೇಕಾದದ್ದೂ ಒಂದು.ಒಂದು ವೇಳೆ, ಫಿರ್ಯಾದುದಾರರು ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರಕರಣದಲ್ಲಿ ಬಾಕಿ ಇರುವ ಹಣದ ಬಾಧ್ಯಸ್ಥತೆಯನ್ನು ತೋರಿಸಲು ಸಾಧ್ಯವಾಗದಿದ್ದರೆ ಅದು ಆರೋಪಿಯ ಖುಲಾಸೆಗೆ ರಾಜಮಾರ್ಗವಾಗುತ್ತದೆ ಎಂಬುದು ಗಮನಿಸಬೇಕಾದ ಪ್ರಮುಖ ಅಂಶ.ವರ್ಗಾವಣೀಯ ಪತ್ರಗಳ ಕಾಯ್ದೆ 1881ರ ಸೆಕ್ಷನ್ 138ರಲ್ಲಿ ದಾಖಲಿಸಲಾದ ಪ್ರಕರಣದಲ್ಲಿ ಚೆಕ್ ನಗದೀಕರಣಕ್ಕೆ ಬ್ಯಾಂಕ್‌ಗೆ ಮಂಡಿಸಲಾದ ಸಮಯದಲ್ಲಿ ಫಿರ್ಯಾದುದಾರರಿಗೆ ಆರೋಪಿಯು ಚೆಕ್‌ನಲ್ಲಿ ಕಾಣಿಸಿದ ಮೊತ್ತ ಬಾಕಿ ಇದೆ ಎಂಬುದನ್ನು ಸಾಬೀತುಪಡಿಸುವ ಹೊಣೆ ಫಿರ್ಯಾದುದಾರರದ್ದೇ ಆಗಿರುತ್ತದೆ. ಇದು ಆರೋಪಿಯು ಸ್ಪಷ್ಟ ಆರೋಪ ನಿರಾಕರಣೆ ಮಾಡಿದ ಸಂದರ್ಭದಲ್ಲಿ ಮಾತ್ರ.ದಶರಥಬಾಯಿ ತ್ರಿಕಂಬಾಯಿ ಪಟೇಲ್ Vs ಹಿತೇಶ್ ಮಹೇಂದ್ರ ಬಾಯಿ ಪಟೇಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಈ ದಿಸೆಯಲ್ಲಿ ಒಂದು ಮೈಲುಗಲ್ಲೇ ಸರಿ.ಚೆಕ್ ಅಮಾನ್ಯ ಪ್ರಕರಣದಲ್ಲಿ ಚೆಕ್ ನೀಡಿದ ಸಂದರ್ಭದಿಂದ ಹಿಡಿದು ಬ್ಯಾಂಕಿಗೆ ನಗದೀಕರಣಕ್ಕೆ ಮಂಡಿಸುವ ಸಂದರ್ಭದಲ್ಲಿ ಯಾವುದೇ ಮೊತ್ತದ ಭಾಗಶಃ ಪಾವತಿ ಮಾಡಿದ್ದರೆ ಅದನ್ನು ಅನುಮೋದನೆ ಮಾಡಬೇಕಾದದ್ದು ಫಿರ್ಯಾದುದಾರರ ಕರ್ತವ್ಯ. ಸೆಕ್ಷನ್ 56ರ ಅನ್ವಯ ಭಾಗಶಃ ಪಾವತಿಯನ್ನು ಅನುಮೋದಿಸಬೇಕು. ಹಾಗೆ ಮಾಡದಿದ್ದರೆ, ಸೆಕ್ಷನ್ 138ರ ಅಡಿ ಪ್ರಕರಣ ರದ್ದು ಆಗುವ ಸಾಧ್ಯತೆ ಇದ್ದು, ಆರೋಪಿಯ ಖುಲಾಸೆಗೆ ದಾರಿ ಮಾಡಿಕೊಡಬಲ್ಲದು.


ಪ್ರಕರಣ: ದಶರಥಬಾಯಿ ತ್ರಿಕಂಬಾಯಿ ಪಟೇಲ್ Vs ಹಿತೇಶ್ ಮಹೇಂದ್ರ ಬಾಯಿ ಪಟೇಲ್

ಸುಪ್ರೀಂ ಕೋರ್ಟ್ CrA 1497/2022 Dated 11-10-2022

.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200