ಹೈಕೋರ್ಟ್ ಪೀಠದಲ್ಲಿ ದಾಖಲೆ ಸಂಖ್ಯೆಯ ಪ್ರಕರಣಗಳ ವಿಚಾರಣೆ: ನ್ಯಾ. ನಾಗಪ್ರಸನ್ನ ಚಾರಿತ್ರಿಕ ದಾಖಲೆ!
ಹೈಕೋರ್ಟ್ ಪೀಠದಲ್ಲಿ ದಾಖಲೆ ಸಂಖ್ಯೆಯ ಪ್ರಕರಣಗಳ ವಿಚಾರಣೆ: ನ್ಯಾ. ನಾಗಪ್ರಸನ್ನ ಚಾರಿತ್ರಿಕ ದಾಖಲೆ!
ಕರ್ನಾಟಕ ಹೈಕೋರ್ಟ್ ಇಂದು ವಿಚಿತ್ರ ಸಂಗತಿಗೆ ಸುದ್ದಿಯಾಯಿತು. ನ್ಯಾಯಪೀಠದಲ್ಲಿ ಅತಿ ಹೆಚ್ಚು ಪ್ರಕರಣಗಳ ಪಟ್ಟಿ ಮಾಡುವ ಮೂಲಕ, ಆ ಪ್ರಕರಣಗಳ ವಿಚಾರಣೆ ಮಾಡುವ ಮೂಲಕ ಹೈಕೋರ್ಟ್ ಪೀಠ ಹೊಸ ದಾಖಲೆ ಬರೆಯಿತು.
ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ 522 ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಇದು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಎಂದೇ ಪರಿಗಣಿಸಲಾಗಿತ್ತು. ಈ ಹಿಂದೆ ನ್ಯಾ. ಬಿ. ಶ್ರೀನಿವಾಸ ಗೌಡ ಅವರಿದ್ದ ನ್ಯಾಯಪೀಠ 700 ಪ್ರಕರಣಗಳನ್ನು ವಿಚಾರಣೆ ನಡೆಸಿ ದಾಖಲೆ ಸೃಷ್ಟಿಸಿತ್ತು.
ನ್ಯಾ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಇಂದು ಒಂದೇ ದಿನದಲ್ಲಿ ಸುಮಾರು 50 ಪ್ರಕರಣಗಳನ್ನು ಇತ್ಯರ್ಥ ಮಾಡಿದರೆ, 200 ಮಧ್ಯಂತರ ಆದೇಶಗಳನ್ನು ಹೊರಡಿಸಿದೆ. ಈ ಎಲ್ಲ ಪ್ರಕರಣಗಳನ್ನೂ ಬೆಳಿಗ್ಗೆ 10-30ರಿಂದ ಸಂಜೆ 5 ಗಂಟೆಯೊಳಗೆ ನಿರ್ವಹಿಸುವ ಮೂಲಕ ನ್ಯಾ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಹೊಸ ಇತಿಹಾಸ ಬರೆಯಿತು.
ನ್ಯಾ. ನಾಗಪ್ರಸನ್ನ ಅವರು ಪ್ರತಿಯೊಂದು ಪ್ರಕರಣವನ್ನೂ ಎಚ್ಚರಿಕೆಯಿಂದ ಗಮನಿಸಿ ಸಮರ್ಪಕವಾದ ರೀತಿಯಲ್ಲಿ ನ್ಯಾಯತೀರ್ಮಾನವನ್ನು ಮಾಡಿದರು.
ಅಧಿಕೃತ ಮಾಹಿತಿಗಳ ಪ್ರಕಾರ, ಕರ್ನಾಟಕ ಹೈಕೋರ್ಟ್ ಮುಂದೆ 217142 ಪ್ರಕರಣಗಳು ಇತ್ಯರ್ಥಕ್ಕೆ ಕಾಯುತ್ತಿದೆ. ಈ ಪೈಕಿ 1,76,446 ಸಿವಿಲ್ ಪ್ರಕರಣಗಳಾಗಿದ್ದರೆ, 40,677 ಪ್ರಕರಣಗಳು ಕ್ರಿಮಿನಲ್ ಕೇಸುಗಳಾಗಿವೆ.
.