-->
ಮಲ್ಟಿ ಸ್ಟೇಟ್ ಸಹಕಾರ ಸಂಘಗಳ ಮಸೂದೆ: ಪ್ರತಿಪಕ್ಷಗಳ ವಿರೋಧದ ಮಧ್ಯೆ ಸಂಸತ್ ಅಂಗೀಕಾರ

ಮಲ್ಟಿ ಸ್ಟೇಟ್ ಸಹಕಾರ ಸಂಘಗಳ ಮಸೂದೆ: ಪ್ರತಿಪಕ್ಷಗಳ ವಿರೋಧದ ಮಧ್ಯೆ ಸಂಸತ್ ಅಂಗೀಕಾರ

ಮಲ್ಟಿ ಸ್ಟೇಟ್ ಸಹಕಾರ ಸಂಘಗಳ ಮಸೂದೆ: ಪ್ರತಿಪಕ್ಷಗಳ ವಿರೋಧದ ಮಧ್ಯೆ ಸಂಸತ್ ಅಂಗೀಕಾರ





ಬಹು ರಾಜ್ಯ ಸಹಕಾರ ಸಂಘ(ಮಲ್ಟಿ ಸ್ಟೇಟ್ ಕೋ ಅಪರೇಟಿವ್ ಸೊಸೈಟಿ)ಗಳ ಮಸೂದೆ 2022 ಕ್ಕೆ ಸಂಸತ್ ಅಂಗೀಕಾರ ನೀಡಿದೆ. ಪ್ರತಿಪಕ್ಷಗಳ ವಿರೋಧದ ಮಧ್ಯೆ ಸಂಸತ್ತಿನಲ್ಲಿ ಅಂಗೀಕಾರ ದೊರೆತಿದೆ.



ಕೇಂದ್ರ ಸಹಕಾರ ಖಾತೆ ರಾಜ್ಯ ಸಚಿವ ಬಿ.ಎಲ್. ವರ್ಮಾ ಅವರು ರಾಜ್ಯ ಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು. ವಿರೋಧದ ಮಧ್ಯೆ ಗದ್ದಲ ನಡೆಸಿದ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದರು. ಆ ಬಳಿಕ ಧ್ವನಿಮತದ ಮೇಲೆ ಮಸೂದೆಯನ್ನು ಅಂಗೀಕರಿಸಲಾಯಿತು.



ಸಹಕಾರ ಸಂಘಗಳಲ್ಲಿ ನೌಕರರ ನೇಮಕಾತಿಗೆ ನಿಯಮವನ್ನು ರೂಪಿಸಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಸ್ವಜನ ಪಕ್ಷಪಾತಕ್ಕೆ ಈ ಮಸೂದೆ ಕಡಿವಾಣ ಹಾಕಲಿದೆ ಎಂದು ಹೇಳಲಾಗಿದೆ.



ಉದ್ಯೋಗ ಸೃಷ್ಟಿ ವಿಷಯಕ್ಕೆ ಬಂದಾಗ ಖಾಸಗಿ ವಲಯದಲ್ಲಿ ಮಿತಿ ಇದೆ. ಎಲ್‌ಪಿಜಿ, ಪೆಟ್ರೋಲ್ ಪಂಪ್‌ಗಳ ಡೀಲರ್‌ಶಿಪ್‌ಗಳಿಗೆ ಅವಕಾಶ ನೀಡುವ ಮೂಲಕ ಸಹಕಾರ ಕ್ಷೇತ್ರದ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿ ವಿಶಾಲವಾದ ತಳಹದಿಯಲ್ಲಿ ಅದನ್ನು ಬಲಪಡಿಸುವ ಕುರಿತು ಮಸೂದೆಯಲ್ಲಿ ಪ್ರಸ್ತಾಪ ಇದೆ.



ಸಹಕಾರ ಸಂಘಗಳಲ್ಲಿ ನಡೆಯುವ ಚುನಾವಣೆಯಲ್ಲಿ ಸುಧಾರಣೆ ತರಲು ತಿದ್ದುಪಡಿ ಮಸೂದೆ ಅವಕಾಶ ನೀಡಲಿದೆ. ಇದಕ್ಕಾಗಿ ಸಹಕಾರ ಚುನಾವಣಾ ಪ್ರಾಧಿಕಾರವನ್ನು ಪ್ರತ್ಯೇಕವಾಗಿ ಸ್ಥಾಪಿಸಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ.




Ads on article

Advertise in articles 1

advertising articles 2

Advertise under the article