-->
ಚೆಕ್ ಅಮಾನ್ಯ ಪ್ರಕರಣ: ITRನಲ್ಲಿ ಸಾಲ ದಾಖಲಾಗಿಲ್ಲ ಎಂಬ ಕಾರಣಕ್ಕೆ ದೂರು ವಜಾಗೊಳಿಸಲಾಗದು: ಹೈಕೋರ್ಟ್‌

ಚೆಕ್ ಅಮಾನ್ಯ ಪ್ರಕರಣ: ITRನಲ್ಲಿ ಸಾಲ ದಾಖಲಾಗಿಲ್ಲ ಎಂಬ ಕಾರಣಕ್ಕೆ ದೂರು ವಜಾಗೊಳಿಸಲಾಗದು: ಹೈಕೋರ್ಟ್‌

ಚೆಕ್ ಅಮಾನ್ಯ ಪ್ರಕರಣ: ಆದಾಯ ತೆರಿಗೆ ದಾಖಲೆಯಲ್ಲಿ ಸಾಲವನ್ನು ಉಲ್ಲೇಖಿಸಿಲ್ಲ ಎಂಬ ಕಾರಣಕ್ಕೆ ದೂರನ್ನು ವಜಾಗೊಳಿಸಲಾಗದು- ಹೈಕೋರ್ಟ್ ತೀರ್ಪು






ಚೆಕ್ ಅಮಾನ್ಯ ಪ್ರಕರಣದಲ್ಲಿ ಚೆಕ್ ಹೊಂದಿರುವವರು ಸಾಲ ನೀಡಿದ ಕುರಿತು ಆದಾಯ ತೆರಿಗೆ ದಾಖಲೆಯಲ್ಲಿ ಆ ಸಾಲವನ್ನು ಉಲ್ಲೇಖಿಸಿಲ್ಲ ಎಂಬ ಕಾರಣಕ್ಕೆ ಚೆಕ್ ಅಮಾನ್ಯ ಕುರಿತ ದೂರನ್ನು ವಜಾಗೊಳಿಸಲು ಸಕಾರಣವಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಪ್ರಕಾಶ್ ಮಧುಕರರಾವ್ ದೇಸಾಯಿ VS ದತ್ತಾತ್ರೇಯ ಶೇಷರಾವ್ ದೇಸಾಯಿ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಈ ಮಹತ್ವದ ತೀರ್ಪು ನೀಡಿದೆ.



ಚೆಕ್ ಹೊಂದಿದಾತ ತಾನು ಆರೋಪಿತನಿಗೆ ನೀಡಿದ ಸಾಲವನ್ನು ತನ್ನ ವೈಯಕ್ತಿಕ ದಾಖಲೆ ಯಾ ಆದಾಯ ತೆರಿಗೆ ದಾಖಲೆ (ಐಟಿಆರ್‌) ಯಲ್ಲಿ ದಾಖಲಿಸಲು ವಿಫಲವಾದರೆ, ಆಗ ಆ ಪ್ರಕರಣವು ವರ್ಗಾವಣೀಯ ಪತ್ರಗಳ ಕಾಯ್ದೆ (ಎನ್‌ಐ ಕಾಯ್ದೆ)ಯ ಸೆಕ್ಷನ್ 138 ರ ಅಡಿಯಲ್ಲಿ ನಿರ್ವಹಣೆಗೆ ಯೋಗ್ಯವಲ್ಲ ಎಂಬ ಕಾರಣಕ್ಕೆ ದೂರನ್ನು ವಜಾಗೊಳಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.



ಚೆಕ್‌ ಹೋಲ್ಡರ್‌ನ ಖಾತೆ ಯಾ ಆದಾಯ ತೆರಿಗೆ ವರದಿಯಲ್ಲಿ ಸಾಲದ ಬಗ್ಗೆ ಯಾವುದೇ ಉಲ್ಲೇಖವಿಲ್ಲದ ಹಿನ್ನೆಲೆಯಲ್ಲಿ ಅದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 60-SSನ ಉಲ್ಲಂಘನೆಯಾಗಿದೆ. ಆದರೂ ಅದು "ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಸಾಲ" ಎಂದು ಪರಿಗಣಿಸಬಹುದು ಮತ್ತು ನೆಗೋಶಬಲ್ ಇನ್‌ಸ್ಟ್ರುಮೆಂಟ್ಸ್‌ ಕಾಯ್ದೆಯ ಸೆಕ್ಷನ್ 138 ರ ಅಡಿಯಲ್ಲಿ ವಿಚಾರಣೆಗೆ ಒಳಪಟ್ಟಿರುತ್ತದೆ ಎಂದು ನ್ಯಾ. ಎ. ಎಸ್. ಚಂದೂರ್ಕರ್ ಮತ್ತು ನ್ಯಾ. ವೃಶಾಲಿ ವಿ. ಜೋಶಿ ಅವರಿದ್ದ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.



Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200