ಬೀದಿ ಬದಿ ವ್ಯಾಪಾರಿ ಮೇಲೆ ಸುಳ್ಳು ಕೇಸ್ ಜಡಿದ ಹೆಡ್ ಕಾನ್ಸ್‌ಟೆಬಲ್ ಸಸ್ಪೆಂಡ್
ಬೀದಿ ಬದಿ ವ್ಯಾಪಾರಿ ಮೇಲೆ ಸುಳ್ಳು ಕೇಸ್ ಜಡಿದ ಹೆಡ್ ಕಾನ್ಸ್‌ಟೆಬಲ್ ಸಸ್ಪೆಂಡ್
ಬಡಪಾಯಿ ಬೀದಿ ವ್ಯಾಪಾರಿ ಮೇಲೆ ಸುಳ್ಳು ಕೇಸ್ ಹಾಕಿದ ಆರೋಪದಲ್ಲಿ ಹಾಸನ ಜಿಲ್ಲೆಯ ಯಸಳೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಮಣಿಕುಮಾರ್‌ನನ್ನು ಅಮಾನತಗೊಳಿಸಲಾಗಿದೆ.
ಈತ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಯಸಳೂರು ಎಂಬಲ್ಲಿ ತಾನು ಕೇಳಿದಷ್ಟು ಬೆಲೆಗೆ ಪ್ಲ್ಯಾಸ್ಟಿಕ್ ಪೀಠೋಪಕರಣಗಳನ್ನು ನೀಡಿಲ್ಲ ಎಂಬ ಕಾರಣಕ್ಕೆ ಬೀದಿ ಬದಿ ವ್ಯಾಪಾರಿಯನ್ನು ಠಾಣೆಗೆ ಕರೆದೊಯ್ದು ಸುಳ್ಳು ಕೇಸು ಹಾಕಿದ್ದ.
ಯಸಳೂರು ರಸ್ತೆಯಲ್ಲಿ ಪ್ಲ್ಯಾಸ್ಟಿಕ್ ಪೀಠೋಪಕರಣಗಳನ್ನು ಮಾರಾಟ ಮಾಡುತ್ತಿದ್ದ ಗದಗ ಜಿಲ್ಲೆಯ ಅರ್ಜುನ್ ಎಂಬವರ ಮೇಲೆ ಪೊಲೀಸ್ ಅಧಿಕಾರಿ ಮಣಿಕುಮಾರ್ ಸುಳ್ಳು ಕೇಸ್ ಹಾಕಿ ಅರ್ಜುನ್‌ಗೆ ತೊಂದರೆ ನೀಡಲು ಮುಂದಾಗಿದ್ದರು.
ಮಾರಾಟ ಮಾಡುತ್ತಿದ್ದ ಅರ್ಜುನ್ ತಾನು ಕೇಳಿದ ಬೆಲೆಗೆ ಪೀಠೋಪಕರಣ ನೀಡಿಲ್ಲ ಎಂದು ಕೋಪಗೊಂಡು ಯಸಳೂರು ಕೆನರಾ ಬ್ಯಾಂಕಿನ ಮೇಲ್ಛಾವಣಿಗೆ ಕೊಂಡೊಯ್ದು ಪ್ಲ್ಯಾಸ್ಟಿಕ್ ಚೇರ್‌ಗಳ ಕಳ್ಳತನ ಮಾಡಿದ್ದೀಯಾ ಎಂದು ನಿಂದಿಸಿ ಲಾಠಿಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.
ಘಟನೆಯಿಂದ ಮನನೊಂದ ವ್ಯಾಪಾರಿ ಅರ್ಜುನ್ ಯಸಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ದಾಖಲಿಸಿಕೊಂಡ ಪೊಲೀಸರು, ಪ್ರಾಥಮಿಕ ತನಿಖೆಯಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಣಿ ಕುಮಾರ್ ಅವನ್ನು ಅಮಾನತುಗೊಳಿಸಲಾಗಿದೆ.