
ಇನ್ಮುಂದೆ ಪಂಚಾಯತ್‌ನಲ್ಲೇ ಸರ್ವೇ, ಪೋಡಿ: ಸರಳ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ
ಇನ್ಮುಂದೆ ಪಂಚಾಯತ್‌ನಲ್ಲೇ ಸರ್ವೇ, ಪೋಡಿ: ಸರಳ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ
ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ವಿಷಯದಲ್ಲಿ ರಾಜ್ಯ ಸರ್ಕಾರ ಸರಳ ಕ್ರಮಗಳ ಮೂಲಕ ಜನಸ್ನೇಹಿ ಕಾರ್ಯಕ್ಕೆ ಮುಂದಾಗಿದೆ.
ಗ್ರಾಮೀಣ ಪ್ರದೇಶದ ಜನರು ಇನ್ನು ಮುಂದೆ ಭೂ-ಪರಿವರ್ತನೆ ಅಥವಾ ಸರ್ವೇ ಕಾರ್ಯಕ್ಕಾಗಲೀ, ಪೋಡಿಗಾಗಲೀ ಕಚೇರಿಯಿಂದ ಕಚೇರಿಗೆ ಅಲೆಯಬೇಕಿಲ್ಲ.
ಸ್ಥಳೀಯ ಮಟ್ಟದ ಗ್ರಾಮ ಪಂಚಾಯತ್‌ನಲ್ಲೇ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಗ್ರಾಮ ಪಂಚಾಯತ್‌ನಲ್ಲಿ ವ್ಯವಸ್ಥೆ ಮಾಡಲಾಗಿರುವ ಬಾಪೂಜಿ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಭೂ ಪರಿವರ್ತನೆ, ತತ್ಕಾಲ್ ಪೋಡಿ, ಹದ್ದುಬಸ್ತು, 11-E ನಕ್ಷೆ ಸೇರಿದಂತೆ ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಒದಗಿಸುವ ಸೇವೆಗಳಿಗೆ ಈತನಕ ಹೋಬಳಿ ಮಟ್ಟದ ನಾಡಾ ಕಚೇರಿ ಇಲ್ಲವೇ ತಾಲೂಕು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕಿತ್ತು.