ಪರಿಸರ ಸಂರಕ್ಷಣೆ: ಹೈಕೋರ್ಟ್ ನ್ಯಾಯಮೂರ್ತಿಗಳು, ವಕೀಲರಿಂದ ಕಾರ್ ರಹಿತ ದಿನಾಚರಣೆ
Friday, September 29, 2023
ಪರಿಸರ ಸಂರಕ್ಷಣೆ: ಹೈಕೋರ್ಟ್ ನ್ಯಾಯಮೂರ್ತಿಗಳು, ವಕೀಲರಿಂದ ಕಾರ್ ರಹಿತ ದಿನಾಚರಣೆ
ಪರಿಸರ ಸಂರಕ್ಷಣೆಗಾಗಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳು, ವಕೀಲರಿಂದ ಕಾರ್ ರಹಿತ ದಿನವಾಗಿ ಆಚರಿಸುವ ಮೂಲಕ ದೇಶಕ್ಕೆ ಸಂದೇಶ ಸಾರಿದ್ದಾರೆ.
ಈ ವಿನೂತನ ಅಭಿಯಾನದಲ್ಲಿ ನೂರಾರು ವಕೀಲರು ನ್ಯಾಯಾಧೀಶರಿಗೆ ಸಾಥ್ ನೀಡಿದ್ದಾರೆ.
ನ್ಯಾಯಮೂರ್ತಿಗಳು, ವಕೀಲರು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ತಮ್ಮ ಕಚೇರಿಗಳಿಗೆ ಸಾರ್ವಜನಿಕ ಸಾರಿಗೆ ಅಥವಾ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸಿದರು.
ವಿವಿಧ ಜಿಲ್ಲೆಗಳ ಜಿಲ್ಲಾ ನ್ಯಾಯಾಧೀಶರೂ ತಮ್ಮ ಕರ್ತವ್ಯನಿರತ ನ್ಯಾಯಾಲಯಗಳನ್ನು ತಲುಪಲು ಸೈಕಲ್‌ಗಳನ್ನೂ ಬಳಸಿದ ಅನೇಕ ಉದಾಹರಣೆಗಳು ಇವೆ.
ಮಧ್ಯಪ್ರದೇಶ ಹೈಕೋರ್‌ನ ಇಂದೋರ್ ನ್ಯಾಯಪೀಠವು ತನ್ನ ಸಿಬ್ಬಂದಿ, ನ್ಯಾಯಮೂರ್ತಿಗಳು ಮತ್ತು ವಕೀಲರಿಗೆ ಕಾರ್‌ಗಳ ಬದಲಿಗೆ ಪರ್ಯಾಯ ಸಾರಿಗೆ ಬಳಸುವಂತೆ ಮನವಿ ಮಡಿತ್ತು.