ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ಪೋಷಕರಿಗೆ ಭಾರೀ ದಂಡ: ಶಿವಮೊಗ್ಗ ನ್ಯಾಯಾಲಯದ ತೀರ್ಪು
Friday, September 8, 2023
ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ಪೋಷಕರಿಗೆ ಭಾರೀ ದಂಡ: ಶಿವಮೊಗ್ಗ ನ್ಯಾಯಾಲಯದ ತೀರ್ಪು
ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ವಾಹನ ಮಾಲೀಕರಿಗೆ ಇದೊಂದು ಎಚ್ಚರಿಕೆಯ ಗಂಟೆ. ಪ್ತಾಪ್ತ ವಯಸ್ಕರಲ್ಲದ ತಮ್ಮ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ಪೋಷಕರಿಗೆ 25000/- ರೂಪಾಯಿ ದಂಡ ವಿಧಿಸುವ ಮೂಲಕ ಶಿವಮೊಗ್ಗ ನ್ಯಾಯಾಲಯ ರಾಜ್ಯದ ಗಮನ ಸೆಳೆದಿದೆ.
ಇಲ್ಲಿನ ನಾಲ್ಕನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಪ್ರಕರಣವೊಂದರಲ್ಲಿ ಮೋಟಾರು ವಾಹನ ಕಾಯ್ದೆ ಸೆಕ್ಷನ್ 199A ಅಡಿ ಮಾಡಿರುವ ಅಪರಾಧಕ್ಕೆ ಈ ಶಿಕ್ಷೆ ವಿಧಿಸಿದೆ.
ತಪ್ಪೊಪ್ಪಿಕೊಂಡ ಅಪರಾಧಿಗೆ ಕೋರ್ಟ್ ಕಲಾಪ ಮುಗಿಯುವ ವರೆಗೆ ಬಂಧನ ವಿಧಿಸಿದ್ದಲ್ಲದೆ ರೂ. 25,000/- ಜುಲ್ಮಾನೆ, ದಂಡ ತೆರಲು ತಪ್ಪಿದರೆ 10 ದಿನಗಳ ಸಾದಾ ಕಾರಾಗೃಹ ವಾಸದ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿತು.
ಸಿಸಿ ನಂಬರ್ 3809/2023 ಪ್ರಕರಣದಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.