-->
ಎರಡು ಪ್ರತ್ಯೇಕ ಚೆಕ್ ಅಮಾನ್ಯ ಪ್ರಕರಣ: ಆರೋಪಿಗೆ ಚೆಕ್ ಮೌಲ್ಯದ ದುಪ್ಪಟು ಹಣ, ಹೆಚ್ಚುವರಿ ಪರಿಹಾರದ ಜೊತೆಗೆ 1 ವರ್ಷ ಜೈಲು ಶಿಕ್ಷೆಯ ತೀರ್ಪು

ಎರಡು ಪ್ರತ್ಯೇಕ ಚೆಕ್ ಅಮಾನ್ಯ ಪ್ರಕರಣ: ಆರೋಪಿಗೆ ಚೆಕ್ ಮೌಲ್ಯದ ದುಪ್ಪಟು ಹಣ, ಹೆಚ್ಚುವರಿ ಪರಿಹಾರದ ಜೊತೆಗೆ 1 ವರ್ಷ ಜೈಲು ಶಿಕ್ಷೆಯ ತೀರ್ಪು

ಎರಡು ಪ್ರತ್ಯೇಕ ಚೆಕ್ ಅಮಾನ್ಯ ಪ್ರಕರಣ: ಆರೋಪಿಗೆ ಚೆಕ್ ಮೌಲ್ಯದ ದುಪ್ಪಟು ಹಣ, ಹೆಚ್ಚುವರಿ ಪರಿಹಾರದ ಜೊತೆಗೆ 1 ವರ್ಷ ಜೈಲು ಶಿಕ್ಷೆಯ ತೀರ್ಪು





ಶ್ರೀನಗರದ ಸಣ್ಣ ವ್ಯಾಜ್ಯಗಳ ನ್ಯಾಯಾಲಯ ಎರಡು ಪ್ರತ್ಯೇಕ ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ತಲಾ ಒಂದು ವರ್ಷದ ಜೈಲು ಶಿಕ್ಷೆ ಮತ್ತು ಚೆಕ್ ಮೌಲ್ಯದ ದುಪ್ಪಟ್ಟು ಮೊತ್ತವನ್ನು ಪರಿಹಾರವಾಗಿ ನೀಡಬೇಕು ಎಂದು ತೀರ್ಪು ವಿಧಿಸಿದೆ.



ಎರಡು ಪ್ರತ್ಯೇಕ ಪ್ರಕರಣ ವಿಚಾರಣೆ ನಡೆಸಿದ ಶ್ರೀನಗರದ ಸಣ್ಣ ವ್ಯಾಜ್ಯಗಳ ನ್ಯಾಯಾಲಯ, ಆರೋಪಿಗಳಿಗೆ ತಲಾ ಒಂದು ವರ್ಷದ ಸಾದಾ ಜೈಲು ಶಿಕ್ಷೆ ಮತ್ತು ಚೆಕ್ ಮೊತ್ತದ ದುಪ್ಪಟ್ಟು ಹಣವನ್ನು ದಂಡವಾಗಿ ವಿಧಿಸಿದ್ದು, ಈ ತೀರ್ಪು ಚೆಕ್ ಅಮಾನ್ಯ ಪ್ರಕರಣಗಳ ಪೈಕಿ ಭಾರೀ ಚರ್ಚೆಗೀಡಾಗಿದೆ.



ಆರೋಪಿ ಫಾರೂಕ್ ಅಹ್ಮದ್ ಭಟ್ ಅವರನ್ನು ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಸೆಕ್ಷನ್ 138ರ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿತು. ಈ ಪ್ರಕರಣದಲ್ಲಿ ಐದು ಲಕ್ಷದ ಚೆಕ್ ಅಮಾನ್ಯಗೊಂಡಿತ್ತು. ನ್ಯಾಯಾಲಯವು ರೂ. 10,300,000/- ಮೊತ್ತವನ್ನು ದಂಡವಾಗಿ ತೆರಬೇಕು ಎಂದು ತೀರ್ಪು ನೀಡಿದ್ದು, ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಿದೆ. ಇದರ ಜೊತೆಗೆ ದೂರುದಾರರಿಗೆ ಪರಿಹಾರವಾಗಿ ಐದು ಲಕ್ಷ ರೂ. ಹೆಚ್ಚುವರಿ ಮೊತ್ತವನ್ನು ನೀಡುವಂತೆ ನಿರ್ದೇಶಿಸಿದೆ.



ಆರೋಪಿಗೆ ಸೇರಿದ ಚರ ಮತ್ತು ಸ್ಥಿರ ಆಸ್ತಿಗಳನ್ನು ಸಿವಿಲ್ ಪ್ರಕ್ರಿಯೆ ಮೂಲಕ ಅಮಲ್ಜಾರಿ ಅಥವಾ ಜಪ್ತಿ ಯಾ ಹರಾಜು ಮೂಲಕ ಒಟ್ಟು 10,800,000 ರೂ.ಗಳ ಒಟ್ಟು ಮೊತ್ತವನ್ನು ಪಡೆದುಕೊಳ್ಳಲು ಬಾರಾಮುಲ್ಲಾ ಜಿಲ್ಲಾಧಿಕಾರಿ ಅವರಿಗೆ ಅಧಿಕಾರ ನೀಡುವ ಮೂಲಕ ವಿಧಿಸಲಾದ ದಂಡವನ್ನು ಲೆವಿ ವಾರೆಂಟ್ ಜಾರಿಗೊಳಿಸುವ ಮೂಲಕ ವಸೂಲಿ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.


"ಈ ಆದೇಶವನ್ನು ಪ್ರಕಟಿಸಿದ ದಿನದಿಂದ ಒಂದು ತಿಂಗಳೊಳಗೆ ಅಮಲ್ಜಾರಿಗೆ ಸಂಬಂಧಿಸಿದಂತೆ ಬಾರಾಮುಲ್ಲಾ ಜಿಲ್ಲಾಧಿಕಾರಿ ಅನುಸರಣೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.



4-11-2020ರಂದು ಆರೋಪಿಯು ದೂರುದಾರರಿಗೆ 51,50,000 ಮೊತ್ತದ ಚೆಕ್ ನೀಡಿದ್ದರು.

ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಆರೋಪಿ ಶಬೀರ್ ಅಹ್ಮದ್ ಸೋಫಿ ಎಂಬಾತನನ್ನು ದೋಷಿ ಎಂದು ಘೋಷಿಸಿದ್ದು, ಅಪರಾಧಿಗೆ ಒಂದು ವರ್ಷದ ಸಾದಾ ಜೈಲು ಶಿಕ್ಷೆ ಹಾಗೂ ವಿಧಿಸಿತು. 


ಜೊತೆಗೆ ಆರೋಪಿಗೆ 17.02 ಲಕ್ಷ ರೂಪಾಯಿ ಮೊತ್ತದ ಚೆಕ್ ಮೊತ್ತದ ದುಪ್ಪಟ್ಟು ಮೊತ್ತದ ದಂಡ ವಿಧಿಸಿ ತೀರ್ಪು ನೀಡಿತು. ಅಲ್ಲದೆ ಪರಿಹಾರವಾಗಿ ಹೆಚ್ಚುವರಿ ಮೂರು ಲಕ್ಷ ರೂ.ಗಳ ಮೊತ್ತವನ್ನು ನೀಡಬೇಕು ಎಂದು ಅದು ಹೇಳಿತು.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200