ಸೆ. 25ರಿಂದ ಹೈಕೋರ್ಟ್‌ನಲ್ಲಿ ಪ್ರಕರಣಗಳ ಪಟ್ಟಿಗೆ ಆನ್‌ಲೈನ್ ಮೆಮೊ ಪ್ರಾಯೋಗಿಕ ಪದ್ಧತಿ
ಸೆ. 25ರಿಂದ ಹೈಕೋರ್ಟ್‌ನಲ್ಲಿ ಪ್ರಕರಣಗಳ ಪಟ್ಟಿಗೆ ಆನ್‌ಲೈನ್ ಮೆಮೊ ಪ್ರಾಯೋಗಿಕ ಪದ್ಧತಿ
ಕರ್ನಾಟಕ ಹೈಕೋರ್ಟ್‌ನಲ್ಲಿ ಸೆಪ್ಟೆಂಬರ್ 25, 2023ರಿಂದ ಪ್ರಾಯೋಗಿಕವಾಗಿ ಹೊಸ ಪದ್ಧತಿಯೊಂದು ಜಾರಿಗೆ ಬರಲಿದೆ. ಆಯ್ದ ಪೀಠಗಳಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಪ್ರಕರಣಗಳ ಪಟ್ಟಿಗೆ ಆನ್‌ಲೈನ್ ಮೂಲಕ ಮೆಮೋ ಸಲ್ಲಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
ಹೈಕೋರ್ಟ್‌ನ ಆಯ್ದ ಕೋರ್ಟ್ ಹಾಲ್‌ಗಳಲ್ಲಿ ಪ್ರಕರಣಗಳ ಪಟ್ಟಿ ಮಾಡಲು ವಕೀಲರು ಆನ್‌ಲೈನ್ ಮೂಲಕ ಮೆಮೋ ಸಲ್ಲಿಸಬಹುದು.
ಈ ವ್ಯವಸ್ಥೆಯನ್ನು ಕೋರ್ಟ್ ಹಾಲ್ ನಂ. 10, 11, 16, 17 ಮತ್ತು 20ರಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು.
ಇದಕ್ಕಾಗಿ ಈ ಮೇಲಿನ ಪೀಠಗಳ ಮುಂದೆ ಆನ್‌ಲೈನ್ ಲಿಂಕ್ ಮಾಹಿತಿಯನ್ನೂ ಒದಗಿಸಲಾಗುವುದು.
ಕರ್ನಾಟಕ ಹೈಕೋರ್ಟ್ ಈ ಮಾಹಿತಿಯನ್ನು ನೀಡಿದ್ದು, ವಕೀಲರು ಮತ್ತು ಕಕ್ಷಿದಾರರು ಈ ನೂತನ ವ್ಯವಸ್ಥೆಯನ್ನು ಬಳಸಿಕೊಳ್ಳುವಂತೆ ಸೂಚಿಸಿದೆ.
ವಕೀಲರಿಗೆ ಅನುಕೂಲವಾಗುವಂತೆ ಆನ್‌ಮೆಮೋ ಸಲ್ಲಿಸುವುದು ಹೇಗೆ? ಅದಕ್ಕೆ ನೋಂದಣಿ ಮಾಡಿಕೊಳ್ಳುವುದು ಹೇಗೆ ಎಂಬ ಕುರಿತು ಒಂದು ಹ್ಯಾಂಡ್‌ಬುಕ್‌ನ್ನು ಕೂಡ ಅಧಿಸೂಚನೆ ಮಾಹಿತಿಯನ್ನು ನೀಡಲಾಗಿದೆ.
ವಕೀಲರು ಕರ್ನಾಟಕ ಜುಡೀಷಿಯರಿ ವೆಬ್ ಲಿಂಕ್‌ಗೆ ತೆರಳಿ ಅಲ್ಲಿ ನೋಟಿಫಿಕೇಶನ್ ಮತ್ತು ಲಿಂಕ್‌ನ್ನು ಪಡೆಯಬಹುದಾಗಿದೆ. (https://karnatakajudiciary.kar.nic.in/Circulars/HCK-Circular-RJ-187-2023.pdf)
ಹೆಚ್ಚಿನ ಮಾಹಿತಿ ಮತ್ತು ಫೀಡ್‌ಬ್ಯಾಕ್ ಇದ್ದರೆ ಈ ಕೆಳಗಿನ ಇಮೇಲ್ ಗೆ ಕಳುಹಿಸಬಹುದು.
regjudicial@hck.gov.in