ಲೋಕ್ ಅದಾಲತ್ ಎಂಬುದು ಕೋರ್ಟಲ್ಲ.. ಅದಾಲತ್ ಅವಾರ್ಡ್, ಡಿಕ್ರಿ ಅಮಾನ್ಯ- ಸುಪ್ರೀಂ ಕೋರ್ಟ್
ಲೋಕ್ ಅದಾಲತ್ ಎಂಬುದು ಕೋರ್ಟಲ್ಲ.. ಅದಾಲತ್ ಅವಾರ್ಡ್, ಡಿಕ್ರಿ ಅಮಾನ್ಯ- ಸುಪ್ರೀಂ ಕೋರ್ಟ್
ಕಾನೂನು ಸೇವಾ ಪ್ರಾಧಿಕಾರ ಕಾಯ್ದೆಯ ಸೆಕ್ಷನ್ 20ರ ಪ್ರಕಾರ ಲೋಕ ಅದಾಲತ್‌ನಲ್ಲಿ ಹೊರಡಿಸಲಾಗಿರುವ ಸೆಟಲ್‌ಮೆಂಟ್ ಅವಾರ್ಡ್ ಮತ್ತು ಡಿಕ್ರಿ ನಿರ್ವಹಣೆಗೆ ಯೋಗ್ಯವಲ್ಲ. ಲೋಕ ಅದಾಲತ್‌ಗಳು ಯಾವುದೇ ನ್ಯಾಯಾಲಯವಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೆ.ಎಂ. ಜೋಸೆಫ್ ಮತ್ತು ಪಿ.ಎಸ್. ನರಸಿಂಹ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಲೋಕ ಅದಾಲತ್‌ಗಳು ಪಕ್ಷಕಾರರ ನಡುವಿನ ವ್ಯಾಜ್ಯವನ್ನು ಪರಸ್ಪರ ಸಮ್ಮತಿಯಿಂದ ಮುಗಿಸಲು ಸಹಕಾರಿಯಾಗುತ್ತದೆ. ಆದರೆ, ನ್ಯಾಯಿಕ ತೀರ್ಪುಗಳ ಮೂಲಕ ಮುಕ್ತಾಯವಾಗುವ ಪ್ರಕರಣಗಳಲ್ಲ. ಮತ್ತು ಅದನ್ನು ಪೂರ್ವನಿದರ್ಶನ ಎಂಬಂತೆ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ: ನ್ಯೂ ಓಕ್ಲಾ ಇಂಡಸ್ಟ್ರಿಯಲ್ ಡೆವೆಲಪ್‌ಮೆಂಟ್ ಅಥಾರಿಟಿ(ನೊಯ್ಡಾ) Vs ಯೂನುಸ್ ಮತ್ತಿತರರು
ಸುಪ್ರೀಂ ಕೋರ್ಟ್, CA No. 901/2022 Dated 03-02-2022