-->
ಇ-ಖಾತಾ ಅರ್ಜಿದಾರರಿಗೆ ವೆಬ್ ಹೋಸ್ಟ್ ಮೂಲಕ ಸಮಗ್ರ ಮಾಹಿತಿ ನೀಡಿ: ಪೌರಾಡಳಿತಕ್ಕೆ ಹೈಕೋರ್ಟ್ ನಿರ್ದೇಶನ

ಇ-ಖಾತಾ ಅರ್ಜಿದಾರರಿಗೆ ವೆಬ್ ಹೋಸ್ಟ್ ಮೂಲಕ ಸಮಗ್ರ ಮಾಹಿತಿ ನೀಡಿ: ಪೌರಾಡಳಿತಕ್ಕೆ ಹೈಕೋರ್ಟ್ ನಿರ್ದೇಶನ

ಇ-ಖಾತಾ ಅರ್ಜಿದಾರರಿಗೆ ವೆಬ್ ಹೋಸ್ಟ್ ಮೂಲಕ ಸಮಗ್ರ ಮಾಹಿತಿ ನೀಡಿ: ಪೌರಾಡಳಿತಕ್ಕೆ ಹೈಕೋರ್ಟ್ ನಿರ್ದೇಶನ






ರಾಜ್ಯದ ಎಲ್ಲ ನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯತ್ ಸೇರಿದಂತೆ ಪೌರಾಡಳಿತಗಳು ಇ-ಖಾತೆ ಅರ್ಜಿಗಳ ಸಮಗ್ರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಅಗತ್ಯವಾದ ವೆಬ್ ಹೋಸ್ಟ್ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.



ಬೀದರ್ ಖಾದಿ ಗ್ರಾಮೋದ್ಯೋಗ ಸಂಘ ಅಲ್ಲಿನ ನಗರಸಭೆಗೆ ಇ-ಖಾತೆಗಾಗಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿದ್ದ ಬೀದರ್ ನಗರಸಭೆಯ ಕ್ರಮ ಪ್ರಶ್ನಿಸಿ ಬೀದರ್ ಖಾದಿ ಗ್ರಾಮೋದ್ಯೋಗ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ನಿರ್ದೇಶನ ಜಾರಿ ಮಾಡಿದೆ.



ಆಸ್ತಿ ಖಾತೆ ಕೋರಿ ಸಲ್ಲಿಸುವ ಅರ್ಜಿಗಳ ಸ್ವೀಕೃತಿ ಮತ್ತು ಅವುಗಳ ಸದ್ಯದ ಸ್ಥಿತಿ, ಏನೆಲ್ಲ ಬೆಳವಣಿಗೆ ಆಗಿದೆ ಎಂಬುದನ್ನು ನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯತ್ ಸೇರಿದಂತೆ ಪೌರಾಡಳಿತಗಳು ತಮ್ಮ ವೆಬ್ ಹೋಸ್ಟ್ ಮೂಲಕ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಪೌರಾಡಳಿತ ಇಲಾಖೆ ನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.



ಭೌತಿಕ ಅಥವಾ ಡಿಜಿಟಲ್ ಮಾದರಿಯಲ್ಲಿ ಖಾತೆ ಕೋರಿ ಅರ್ಜಿ ಸಲ್ಲಿಸಿದಾಗ ಅದನ್ನು ಕರ್ನಾಟಕ ಸಕಾಲ ಸೇವೆಗಳ ಕಾಯ್ದೆ 2011ರಡಿಯಲ್ಲಿ 30 ದಿನಗಳ ಒಳಗೆ ಪರಿಗಣಿಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಪೌರಾಡಳಿತಗಳಿಗೆ ಸೂಚಿಸಿದೆ.



ಖಾತೆಗೆ ಸಂಬಂಧಿಸಿದ ಸ್ವೀಕೃತಿ, ಅರ್ಜಿಯ ಸದಸ್ಯದ ಬೆಳವಣಿಗೆಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್ ಹೋಸ್ಟ್ ಮಾಡುವ ವ್ಯವಸ್ಥೆ ಜಾರಿ ಮಾಡುವ ಬಗ್ಗೆ ಒಂದು ತಿಂಗಳ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಸೆಪ್ಟೆಂಬರ್ 26ರಂದು ಹೈಕೋರ್ಟ್‌ನ್ನು ಕೋರಿಕೊಂಡಿತ್ತು. 


ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಅನುಪಾಲನೆಗಾಗಿ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 30ರಂದು ಪಟ್ಟಿ ಮಾಡಲಾಗಿದೆ.


ಪ್ರಕರಣ: ಖಾದಿ ಗ್ರಾಮೋದ್ಯೋಗ ಸಂಘ Vs ಸಿಟಿ ಮುನಿಸಿಪಲ್ ಕೌನ್ಸಿಲ್, ಬೀದರ್

ಕರ್ನಾಟಕ ಹೈಕೋರ್ಟ್ (ಕಲ್ಬುರ್ಗಿ ಪೀಠ) WP 201823/2023 Dated 07-07-2023

Ads on article

Advertise in articles 1

advertising articles 2

Advertise under the article