-->
ಇ-ಸಮನ್ಸ್ ಸೇವೆ: ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಆರಂಭ

ಇ-ಸಮನ್ಸ್ ಸೇವೆ: ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಆರಂಭ

ಇ-ಸಮನ್ಸ್ ಸೇವೆ: ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಆರಂಭ

ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಆರಂಭ ಇ-ಸಮನ್ಸ್ ಸೇವೆ ಆರಂಭವಾಗಿದೆ. ವಕೀಲರು ಮತ್ತು ಕಕ್ಷಿದಾರರ ಉಪಯೋಗಕ್ಕಾಗಿ ಈ ಸೇವೆ ಆರಂಭಿಸಲಾಗಿದೆ ಎಂದು ಬೆಂಗಳೂರಿನ ನಗರ ಸಿವಲ್ ನ್ಯಾಯಾಲಯದ ಮುಖ್ಯ ವಿಲೇಖಾಧಿಕಾರಿಗಳು ತಿಳಿಸಿದ್ದಾರೆ.ನ್ಯಾಯಾಲಯದಿಂದ ಜಾರಿಯಾಗುವ ನೋಟೀಸ್, ಸಮನ್ಸ್‌ಗಳನ್ನು ಪಿಡಿಎಫ್ ಮಾದರಿಯಲ್ಲಿ ವಕೀಲರು, ಕಕ್ಷಿದಾರರು ಮತ್ತು ಸಾಕ್ಷಿದಾರರ ನೋಂದಾಯಿತ ಇ-ಮೇಲ್ ಖಾತೆಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಸಿಟಿ ಸಿವಿಲ್ ಕೋರ್ಟ್ ಮಾಡಿದೆ.ಹೊಸ ಪ್ರಕರಣಗಳನ್ನು ದಾಖಲಿಸುವ ಸಮಯದಲ್ಲಿ ವಕೀಲರು, ಕಕ್ಷಿದಾರರು ಮತ್ತು ಸಾಕ್ಷಿದಾರರ ನೋಂದಾಯಿತ ಇ-ಮೇಲ್ ಖಾತೆಗಳ ವಿವರವನ್ನು ನೀಡಬಹುದು.ಅದೇ ರೀತಿ, ಈಗ ಚಾಲ್ತಿಯಲ್ಲಿ ಇರುವ ಪ್ರಕರಣಗಳಲ್ಲೂ ವಕೀಲರು, ಕಕ್ಷಿದಾರರು ಮತ್ತು ಸಾಕ್ಷಿದಾರರ ನೋಂದಾಯಿತ ಇ-ಮೇಲ್ ಖಾತೆಗಳ ವಿವರವನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.


ಆಧುನಿಕ ಕಾಲಘಟ್ಟದಲ್ಲಿ ನೂತನ ತಂತ್ರಜ್ಞಾನವನ್ನು ಬಳಸಿ ಕ್ಷಿಪ್ರ ನ್ಯಾಯದಾನ ಮಾಡುವ ವ್ಯವಸ್ಥೆ ಇದಾಗಿದೆ.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200