-->
ಫೋರ್ಬ್ಸ್‌ ಪಟ್ಟಿಯಲ್ಲಿ ಮಾರ್ವಾಡಿಗಳ ಪಾರಮ್ಯ; ಕರ್ನಾಟಕದಲ್ಲಿ ಜಿಎಸ್‌ಬಿ ಉದ್ಯಮಿಗಳೇ ಅಗ್ರರು

ಫೋರ್ಬ್ಸ್‌ ಪಟ್ಟಿಯಲ್ಲಿ ಮಾರ್ವಾಡಿಗಳ ಪಾರಮ್ಯ; ಕರ್ನಾಟಕದಲ್ಲಿ ಜಿಎಸ್‌ಬಿ ಉದ್ಯಮಿಗಳೇ ಅಗ್ರರು

ಫೋರ್ಬ್ಸ್‌ ಪಟ್ಟಿಯಲ್ಲಿ ಮಾರ್ವಾಡಿಗಳ ಪಾರಮ್ಯ; ಕರ್ನಾಟಕದಲ್ಲಿ ಜಿಎಸ್‌ಬಿ ಉದ್ಯಮಿಗಳೇ ಅಗ್ರರು






ಫೋರ್ಬ್ಸ್ ಇಂಡಿಯಾ 2023 ರ ಯಾದಿ ಪ್ರಕಟ. ಭಾರತದ 100 ಮಂದಿ ಕುಬೇರರ ಪೈಕಿ ಮಾರ್ವಾಡಿ (ಬನಿಯಾ) ಉದ್ಯಮಿಗಳದ್ದೇ ಪಾರಮ್ಯ. ಕರ್ನಾಟಕದಲ್ಲಿ ಜಿ.ಎಸ್.ಬಿ.ಉದ್ಯಮಿಗಳಿಗೆ ಅಗ್ರಸ್ಥಾನ


2023 ನೇ ಸಾಲಿನ ಭಾರತದ 100 ಮಂದಿ ಶ್ರೀಮಂತರ ಯಾದಿಯನ್ನು ಫೋರ್ಬ್ಸ್ ಇಂಡಿಯಾ ಪ್ರಕಟಿಸಿದೆ. ಭಾರತದ ಬಿಲಿಯನರ್ ಗಳ ಪೈಕಿ 50% ಮಂದಿ ಮಾರ್ವಾಡಿ (ಬನಿಯಾ) ಸಮುದಾಯಕ್ಕೆ ಸೇರಿದವರು. 


ಐವತ್ತು ಶೇಕಡ ಭಾರತೀಯ ಸ್ಟಾರ್ಟಪ್ ಗಳಲ್ಲಿ ಕನಿಷ್ಠ ಒಬ್ಬ ಮಾರವಾಡಿ ಸಹ- ಸಂಸ್ಥಾಪಕನಾಗಿರುವುದರಿಂದ ಮಾರ್ವಾಡಿ ಗಳನ್ನು ಭಾರತದ ಶ್ರೀಮಂತ ವ್ಯಾಪಾರಿ ಸಮುದಾಯವೆಂದು ಪರಿಗಣಿಸಲಾಗಿದೆ.


ರಿಲಯನ್ಸ್ ಇಂಡಸ್ಟ್ರೀಸ್ ನ ಒಡೆಯ ಶ್ರೀ ಮುಕೇಶ್ ಅಂಬಾನಿ 92 ಬಿಲಿಯನ್ ಡಾಲರ್ ಅಂದರೆ 9,20,000 ಕೋಟಿ ರೂಪಾಯಿ ಸಂಪತ್ತು ಹೊಂದಿದ್ದು ಭಾರತದ ಕುಬೇರರಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.


ಅದಾನಿ ಎಂಟರರ್ಪ್ರೈಸಸ್ ಒಡೆಯ ಶ್ರೀ ಗೌತಮ್ ಅದಾನಿ 68 ಬಿಲಿಯನ್ ಡಾಲರ್ ಎಂದರೆ 6,80,000 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಯಾದಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.


ಹೆಚ್.ಸಿ.ಎಲ್. (HCL) ಟೆಕ್ನಾಲಜಿಯ ಶ್ರೀ ಶಿವ ನಾಡಾರ್ 29.3 ಬಿಲಿಯನ್ ಡಾಲರ್ ಅಂದರೆ 2,93,000 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಮೂರನೆಯ ಸ್ಥಾನ ಪಡೆದಿರುತ್ತಾರೆ.


ಒ. ಪಿ. ಜಿಂದಾಲ್ ಗ್ರೂಪ್ ನ ಒಡತಿ ಶ್ರೀಮತಿ ಸಾವಿತ್ರಿ ಜಿಂದಾಲ್ 24 ಬಿಲಿಯನ್ ಡಾಲರ್ 240000 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಯಾದಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.


ಅವೆನ್ಯೂ ಸೂಪರ್ ಮಾರ್ಕೆಟ್ (D Mart) ನ ಒಡೆಯ ಶ್ರೀ ರಾಧಾಕಿಶನ್ ದಮಾನಿ ಅವರು 23 ಬಿಲಿಯನ್ ಡಾಲರ್ ಎಂದರೆ 230000 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಐದನೇ ಸ್ಥಾನ ಹೊಂದಿದ್ದಾರೆ.


ಕರ್ನಾಟಕ ರಾಜ್ಯದ ಐದು ಮಂದಿ ಕನ್ನಡಿಗ ಉದ್ಯಮಿಗಳು ಫೋರ್ಬ್ಸ್ ಇಂಡಿಯಾ ಪ್ರಕಟಿಸಿದ ಯಾದಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಮೂವರು ಪ್ರತಿಷ್ಠಿತ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಉದ್ಯಮಿಗಳಾಗಿದ್ದಾರೆ.


ತಂತ್ರಜ್ಞಾನ, ಶಿಕ್ಷಣ, ವೈದ್ಯಕೀಯ ಆರೋಗ್ಯ, ಹಣಕಾಸು ಹೂಡಿಕೆ, ಭೂವ್ಯವಹಾರ ಕ್ಷೇತ್ರಗಳಲ್ಲಿ ಜಿ.ಎಸ್‌.ಬಿ. ಸಮುದಾಯದ ಉದ್ಯಮಿಗಳು ರಾಜ್ಯದಲ್ಲಿ ಪಾರಮ್ಯ ಸಾಧಿಸಿದ್ದಾರೆ.


ಹಣಕಾಸು ಮತ್ತು ಹೂಡಿಕೆಗಳ ಉದ್ಯಮ ಝೆರೋದಾ ಸಂಸ್ಥೆಯ ಸ್ಥಾಪಕರಾದ ಶ್ರೀ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಸಹೋದರರು 55 ಬಿಲಿಯನ್ ಡಾಲರ್ ಎಂದರೆ 55000 ಕೋಟಿ ರೂಪಾಯಿ ಗಳ ಸಂಪತ್ತು ಹೊಂದಿದ್ದು ರಾಜ್ಯದ ಶ್ರೀಮಂತರ ಪೈಕಿ ಅಗ್ರಸ್ಥಾನ ಪಡೆದಿರುತ್ತಾರೆ.


ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ ಶ್ರೀ ಎನ್. ಆರ್. ನಾರಾಯಣ ಮೂರ್ತಿ ಅವರು 4.5 ಬಿಲಿಯನ್ ಡಾಲರ್ ಅಂದರೆ 45 ಸಾವಿರ ಕೋಟಿ ರೂಪಾಯಿ ಸಂಪತ್ತನ್ನು ಹೊಂದಿದ್ದು ಕರ್ನಾಟಕದಲ್ಲಿ ಎರಡನೇ ಸ್ಥಾನ ಪಡೆದಿರುತ್ತಾರೆ.


ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ಶ್ರೀ ನಂದನ್ ನೀಲೆಕಣಿ ಅವರು 2.94 ಬಿಲಿಯನ್ ಡಾಲರ್ ಅಂದರೆ 29400 ಕೋಟಿ ರೂಪಾಯಿ ಸಂಪತ್ತು ಹೊಂದಿದ್ದು ಕರ್ನಾಟಕ ರಾಜ್ಯದ ಮೂರನೆಯ ಶ್ರೀಮಂತ ಉದ್ಯಮಿ ಎನಿಸಿಕೊಂಡಿದ್ದಾರೆ.


ಮಣಿಪಾಲ್ ಗ್ರೂಪ್ ನ ಡಾ. ರಂಜನ್ ಪೈ ಅವರು 2.75 ಬಿಲಿಯನ್ ಡಾಲರ್ ಎಂದರೆ 27,500 ಕೋಟಿ ರೂಪಾಯಿಗಳ ಸಂಪತ್ತಿನೊಂದಿಗೆ ರಾಜ್ಯದ ನಾಲ್ಕನೇ ಶ್ರೀಮಂತ ಉದ್ಯಮಿಯಾಗಿ ಯಾದಿಯಲ್ಲಿ ಸ್ಥಾನ ಪಡೆದಿರುತ್ತಾರೆ.


ಇನ್ಫೋಸಿಸ್ ಸಂಸ್ಥೆಯ ಸಹಸಂಸ್ಥಾಪಕರಾದ ಶ್ರೀ ಕೆ. ದಿನೇಶ್ ಅವರು 2.4 ಮಿಲಿಯನ್ ಡಾಲರ್ ಎಂದರೆ 24,000 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ರಾಜ್ಯದ ಐದನೇ ಶ್ರೀಮಂತ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


Ads on article

Advertise in articles 1

advertising articles 2

Advertise under the article