-->
ವಿವಾಹಿತರ ಸಹ ಜೀವನ ಅಪರಾಧವಲ್ಲ, ಮದುವೆ ಆಮಿಷ ತೋರಿಸಿ ಅತ್ಯಾಚಾರವೆಸಗಿದ ಆರೋಪ ಮಾಡಲಾಗದು- ಹೈಕೋರ್ಟ್‌

ವಿವಾಹಿತರ ಸಹ ಜೀವನ ಅಪರಾಧವಲ್ಲ, ಮದುವೆ ಆಮಿಷ ತೋರಿಸಿ ಅತ್ಯಾಚಾರವೆಸಗಿದ ಆರೋಪ ಮಾಡಲಾಗದು- ಹೈಕೋರ್ಟ್‌

ವಿವಾಹಿತರ ಸಹ ಜೀವನ ಅಪರಾಧವಲ್ಲ, ಮದುವೆ ಆಮಿಷ ತೋರಿಸಿ ಅತ್ಯಾಚಾರವೆಸಗಿದ ಆರೋಪ ಮಾಡಲಾಗದು- ಹೈಕೋರ್ಟ್‌

ವಯಸ್ಕರಾಗಿರುವ ಇಬ್ಬರು ವಿವಾಹಿತರ ನಡುವೆ ಸಹ ಜೀವನ ಇದ್ದರೆ, ಅದು ಸಾಮಾಜಿಕವಾಗಿ ಒಪ್ಪಿಗೆಯಾಗದಿದ್ದರೂ ಅದನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ನ್ಯಾ. ಸ್ವರನಾ ಕಾಂತ ಶರ್ಮಾ ಅವರಿದ್ದ ಏಕಸದಸ್ಯಪೀಠ ಈ ಮಹತ್ವದ ತೀರ್ಪು ನೀಡಿದೆ.

ಸಮಾಜದ ದೃಷ್ಟಿಯಿಂದ ನೈತಿಕ ತಪ್ಪು ಮತ್ತು ಕಾನೂನಾತ್ಮಕ ಕ್ರಿಮಿನಲ್ ತಪ್ಪುಗಳು ಎರಡು ಪ್ರತ್ಯೇಕ ವಿಚಾರಗಳಾಗಿವೆ. ವಯಸ್ಕರಾಗಿರುವ ಇಬ್ಬರು ವಿವಾಹಿತರ ನಡುವೆ ಸಹ ಜೀವನ ಇದ್ದರೆ, ಅದನ್ನು ಸಾಮಾಜಿಕವಾಗಿ ಟೀಕೆ ಮಾಡಬಹುದು. ಆದರೆ, ಇದನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ಹೇಳಿದೆ.ಬೇರೆ ಬೇರೆಯವರ ಜೊತೆಗೆ ವಿವಾಹ ಆಗಿರುವ ಇಬ್ಬರು ವಯಸ್ಕರ ಸಹಜೀವನ (ಲಿವ್ ಇನ್ ರಿಲೇಶನ್) ಕಾನೂನಾತ್ಮಕವಾಗಿ ಅಥವಾ ಶಾಸನಾತ್ಮಕವಾಗಿ ಅಪರಾಧವಲ್ಲ. ನೈತಿಕತೆಯನ್ನು ಕಾನೂನಾತ್ಮಕವಾಗಿ ಜಾರಿ ಮಾಡುವುದು ಶಾಸನಬದ್ಧವಲ್ಲ. ತೀರ್ಪಿನ ಮೂಲಕ ಬೋಧಿಸಲಾದ ಯಾವುದೇ ಕಾನೂನು ನೈತಿಕತೆಯ ವಿಷಯವಾಗಿರಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಸೂಕ್ಷ್ಮವಾಗಿ ನೈತಿಕತೆ ಮತ್ತು ಕಾನೂನಿನ ನಡುವಿನ ಎಳೆಯನ್ನು ತೋರಿಸಿದೆ.ಅದೇ ರೀತಿ, ಮದುವೆ ಆಮಿಷ ತೋರಿಸಿ ಅತ್ಯಾಚಾರವೆಸಗಿದ ಎಂದು ಮಹಿಳೆ ತನ್ನ ಲೈಂಗಿಕ ಸಹಚರನ ವಿರುದ್ಧ ಆರೋಪ ಮಾಡಲಾಗದು. ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿಯನ್ನು ಕಾನೂನಾತ್ಮಕವಾಗಿ ಮದುವೆಯಾಗಲು ಸಾಧ್ಯವಿಲ್ಲದಿದ್ದಾಗ ಸಂತ್ರಸ್ತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376ನ್ನು ವಿಸ್ತರಿಸಲಾಗದು ಎಂದು ಹೈಕೋರ್ಟ್‌ ನ್ಯಾಯಪೀಠ ಸ್ಪಷ್ಟಪಡಿಸಿದೆ.ಮಹಿಳೆಯರಿಗೂ ಪುರುಷರಂತೆ ತಮ್ಮ ಲೈಂಗಿಕ ಸಹಚರ ಆಯ್ಕೆ ಮಾಡುವ ಹಕ್ಕು ಇದೆ. ಇದನ್ನು ನೈತಿಕತೆಯನ್ನು ಮೀರಿಯೂ ಆಕೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಪ್ರಕರಣ: ಎಸ್. ರಾಜಾ ದೊರೈ Vs ದೆಹಲಿ ಮತ್ತು ಇತರರು


Ads on article

Advertise in articles 1

advertising articles 2

Advertise under the article