-->
NI Act: ಸರಿಯಾದ ವಿಳಾಸಕ್ಕೆ ರಿಜಿಸ್ಟರ್ಡ್ ಅಂಚೆ ಮೂಲಕ ನೋಟೀಸ್ ಕಳಿಸಿದ್ದರೆ ಅದು ಜಾರಿಯಾಗಿದೆ ಎಂಬ ಪೂರ್ವಭಾವನೆ-ಹೈಕೋರ್ಟ್ ಮಹತ್ವದ ತೀರ್ಪು

NI Act: ಸರಿಯಾದ ವಿಳಾಸಕ್ಕೆ ರಿಜಿಸ್ಟರ್ಡ್ ಅಂಚೆ ಮೂಲಕ ನೋಟೀಸ್ ಕಳಿಸಿದ್ದರೆ ಅದು ಜಾರಿಯಾಗಿದೆ ಎಂಬ ಪೂರ್ವಭಾವನೆ-ಹೈಕೋರ್ಟ್ ಮಹತ್ವದ ತೀರ್ಪು

NI Act: ಸರಿಯಾದ ವಿಳಾಸಕ್ಕೆ ರಿಜಿಸ್ಟರ್ಡ್ ಅಂಚೆ ಮೂಲಕ ನೋಟೀಸ್ ಕಳಿಸಿದ್ದರೆ ಅದು ಜಾರಿಯಾಗಿದೆ ಎಂಬ ಪೂರ್ವಭಾವನೆ- ಹೈಕೋರ್ಟ್ ಮಹತ್ವದ ತೀರ್ಪು

ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರ ಸರಿಯಾದ ವಿಳಾಸಕ್ಕೆ ರಿಜಿಸ್ಟರ್ಡ್ ಅಂಚೆ ಮೂಲಕ ನೋಟೀಸ್ ಕಳಿಸಿದ್ದರೆ ಸಾಕು, ಅದನ್ನು ಕಾನೂನು ಪ್ರಕಾರ ಸಮರ್ಪಕವಾದ ನೋಟೀಸ್ ಜಾರಿ ಎಂಬ ಪೂರ್ವಭಾವನೆ ತಾಳಬಹುದು ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಅಲಹಾಬಾದ್ ಹೈಕೋರ್ಟ್‌ನ ನ್ಯಾ. ಜ್ಯೋತ್ಸ್ನಾ ಶರ್ಮಾ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.


ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881 ಸಂಬಂಧಿಸಿದ ಪ್ರಕರಣದಲ್ಲಿ, ಆರೋಪಿತರ ಸರಿಯಾದ ವಿಳಾಸಕ್ಕೆ ದೂರುದಾರರು ರಿಜಿಸ್ಟರ್ಡ್‌ ಅಂಚೆ ಮೂಲಕ ನೋಟೀಸ್ ಕಳಿಸಿದ್ದು, ಟ್ರ್ಯಾಕ್ ರೆಕಾರ್ಡ್ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದಿದ್ದರೂ ನೋಟೀಸ್ ಜಾರಿಯಾಗಿದೆ ಎಂಬ ಪೂರ್ವಭಾವನೆಯನ್ನು ನ್ಯಾಯಾಲಯ ತಾಳಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಆದರೆ, ಸದ್ರಿ ರಿಜಿಸ್ಟ್ರಿ ನೋಟಿಸ್‌ನಲ್ಲಿ ನಮೂದಿಸಿದ ವಿಳಾಸವು ಆರೋಪಿತರ ಸರಿಯಾದ ವಿಳಾಸವೇ ಆಗಿದೆ ಎಂಬುದನ್ನು ದೂರುದಾರರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.


ಪ್ರಕರಣ: Top Filling Point Proprietor Rakesh Agrawal v. State of U.P. and Another

ಅಲಹಾಬಾದ್ ಹೈಕೋರ್ಟ್‌, Dated 13-10-2023


Ads on article

Advertise in articles 1

advertising articles 2

Advertise under the article