-->
RBI New Rule for Personal Loan- ಅರ್ಜೆಂಟ್ ಹಣದ ಅಗತ್ಯವಿದೆಯೇ..? ವೈಯಕ್ತಿಕ ಸಾಲಕ್ಕೆ ಆರ್‌ಬಿಐ ಹೊಸ ರೂಲ್ಸ್..!

RBI New Rule for Personal Loan- ಅರ್ಜೆಂಟ್ ಹಣದ ಅಗತ್ಯವಿದೆಯೇ..? ವೈಯಕ್ತಿಕ ಸಾಲಕ್ಕೆ ಆರ್‌ಬಿಐ ಹೊಸ ರೂಲ್ಸ್..!

ಅರ್ಜೆಂಟ್ ಹಣದ ಅಗತ್ಯವಿದೆಯೇ..? ವೈಯಕ್ತಿಕ ಸಾಲಕ್ಕೆ ಆರ್‌ಬಿಐ ಹೊಸ ರೂಲ್ಸ್..!






ಹಣಕಾಸಿನ ಅಗತ್ಯ ಯಾರಿಗಿಲ್ಲ...? ಎಲ್ಲರಿಗೂ ತಮ್ಮದೇ ಆದ ಆರ್ಥಿಕ ಅಗತ್ಯಗಳು ಇರುತ್ತವೆ. ಹೆಚ್ಚಿನವರು ತಮ್ಮಲ್ಲೇ ಈ ಅಗತ್ಯಗಳನ್ನು ನಿವಾರಿಸುತ್ತಾರೆ. ಇನ್ನು ಕೆಲವರು ತಮ್ಮ ಬ್ಯಾಂಕ್ ಖಾತೆಯಲ್ಲೋ, ಫಿಕ್ಸೆಡ್ ಡೆಪಾಸಿಟ್ ಅಥವಾ ಉಳಿತಾಯದಲ್ಲೋ ಈ ಅಗತ್ಯಗಳನ್ನು ಪೂರೈಸುತ್ತಾರೆ.


ಇನ್ನು ಕೆಲವರು ಗೆಳೆಯರ, ಬಂಧು-, ಮಿತ್ರರ ಮೊರೆ ಹೋಗುತ್ತಾರೆ. ಇನ್ನು ಒಂದು ದೊಡ್ಡ ವರ್ಗ ಅಗತ್ಯ ಆರ್ಥಿಕ ಬೇಡಿಕೆಯ ಸಂದರ್ಭದಲ್ಲಿ ತುರ್ತು ಸಾಲ, ಮೀಟರ್ ಬಡ್ಡಿ ಸಾಲ, ಫೈನಾನ್ಸ್ ಸಾಲ ಹೀಗೆ ವಿವಿಧ ಸಾಲದ ಯೋಜನೆಗಳತ್ತ ಮುಖ ಮಾಡುತ್ತಾರೆ. ಇಂತಹ ಅರ್ಜೆಂಟ್ ಆರ್ಥಿಕ ಸಮಸ್ಯೆಗೆ ವೈಯಕ್ತಿಕ ಸಾಲ ಒಂದು ಉತ್ತಮ ದಾರಿ.


ಇದೀಗ ವೈಯಕ್ತಿಕ ಸಾಲದ ನಿಯಮವನ್ನು ಭಾರತೀಯ ರಿಸರ್ವ್‌ ಬ್ಯಾಂಕ್ ತಿದ್ದುಪಡಿ ಮಾಡಿದ್ದು, ಬಿಗಿ ನಿಯಮಗಳನ್ನು ಜಾರಿಗೆ ತಂದಿದೆ.


ವೈಯಕ್ತಿಕ ಸಾಲ ನೀಡುವಾಗ ಗ್ರಾಹಕನಿಂದ ಬ್ಯಾಂಕ್‌ಗೆ ಎಷ್ಟು ನಷ್ಟ ಆಗಬಹುದು ಎಂಬ ಸಾಧ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು ಆರ್‌ಬಿಐ ಹೊಸ ನಿಯಮ ರೂಪಿಸಿದೆ. ಅಡಮಾನ ರಹಿತ ವೈಯಕ್ತಿಕ ಸಾಲ ನೀಡಿಕೆ ಹೆಚ್ಚುತ್ತಿರುವುದನ್ನು ಗಮನದಲ್ಲಿರಿಸಿಕೊಂಡು ಈ ಹೊಸ ನಿಯಮವನ್ನು ಜಾರಿಗೆ ತಂದಿದೆ.


ವೈಯಕ್ತಿಕ ಸಾಲ ನೀಡುವಾಗ ಬ್ಯಾಂಕ್‌ಗಳಿಗೆ ಆಗಬಹುದಾದ ನಷ್ಟವನ್ನು ಭರಿಸಲು ತೆಗೆದಿರಿಸುವ ಮೊತ್ತದ ಪ್ರಮಾಣವನ್ನು ಶೇ. 100ರಿಂದ 125ಕ್ಕೆ ಹೆಚ್ಚಿಸಿದೆ. ಬ್ಯಾಂಕ್‌ಗಳ ವೈಯಕ್ತಿಕ ಸಾಲದ ಮೊತ್ತ 2023ರ ಸೆಪ್ಟಂಬರ್ ಅಂತ್ಯಕ್ಕೆ 48.26 ಲಕ್ಷ ಕೋಟಿ ರೂ.ಗಳಷ್ಟಿತ್ತು. ಅದರ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ಮೊತ್ತ ಶೇ. 30ರಷ್ಟು ಹೆಚ್ಚಿದೆ.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200