ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
Thursday, December 14, 2023
ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
ಕರ್ನಾಟಕ ವಿಧಾನಸಭೆಯಲ್ಲಿ ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ.
ಡಿಸೆಂಬರ್ 12, 2023ರಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್ ಈ ವಿಧೇಯಕವನ್ನು ಸದನದಲ್ಲಿ ಮಂಡಿಸಿದ್ದರು.
ಕರ್ತವ್ಯ ನಿರತ ವಕೀಲರ ವಿರುದ್ಧ ಅಪರಾಧ ಎಸಗುವ ವ್ಯಕ್ತಿಗೆ ಆರು ತಿಂಗಳಿನಿಂದ ಮೂರು ವರ್ಷದ ವರೆಗೆ ಜೈಲು ಅಥವಾ ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಬಹುದಾಗಿದೆ. ಅಥವಾ ಎರಡೂ ಶಿಕ್ಷೆಗಳನ್ನು ಒಗ್ಗೂಡಿಸಿ ಏಕಕಾಲಕ್ಕೆ ಆದೇಶ ಮಾಡಬಹುದಾಗಿದೆ.
ಎದುರಾಳಿ ಕಕ್ಷಿದಾರರು ಅಥವಾ ಅವರ ಆಪ್ತರು, ಸಂಬಂಧಿಕರಿಂದ ರಕ್ಷಣೆ ಮತ್ತು ವಕೀಲರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅನುಕೂಲವಾಗುವಂತೆ ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.