-->
NI Act | ವಿವರ ಭರ್ತಿ ಮಾಡದಿದ್ದರೂ ಸ್ವ ಇಚ್ಚೆಯಿಂದ ಸಹಿ ಹಾಕಿದ ಚೆಕ್ ಹೊಣೆಗಾರಿಕೆ ಹೊಂದಿದೆ: ಕೇರಳ ಹೈಕೋರ್ಟ್!

NI Act | ವಿವರ ಭರ್ತಿ ಮಾಡದಿದ್ದರೂ ಸ್ವ ಇಚ್ಚೆಯಿಂದ ಸಹಿ ಹಾಕಿದ ಚೆಕ್ ಹೊಣೆಗಾರಿಕೆ ಹೊಂದಿದೆ: ಕೇರಳ ಹೈಕೋರ್ಟ್!

ವಿವರ ಭರ್ತಿ ಮಾಡದಿದ್ದರೂ ಸ್ವ ಇಚ್ಚೆಯಿಂದ ಸಹಿ ಹಾಕಿದ ಚೆಕ್ ಹೊಣೆಗಾರಿಕೆ ಹೊಂದಿದೆ: ಕೇರಳ ಹೈಕೋರ್ಟ್!



ಚೆಕ್ ನ ಇತರ ಕಾಲಂಗಳನ್ನು ಯಾರೇ ಭರ್ತಿ ಮಾಡಿದ್ದರೂ, ಆ ಚೆಕ್ಕಿಗೆ ಸ್ವಯಂ ಇಚ್ಚೆಯಿಂದ ಸಹಿ ಹಾಕಿದ್ದರೆ ಅಂತಹ ಚೆಕ್ ‘ವರ್ಗಾವಣೀಯ ಕಾಯ್ದೆ-1881’ ಸೆಕ್ಷನ್ 138ರ ಅನ್ವಯ ಹೊಣೆಗಾರಿಕೆಯನ್ನು ಹೊಂದಿದೆ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವಿಬಿನ್ ಮೆಲೆಪುರಂ Vs ಡೆನ್ನಿ ಥೋಮಸ್ ಮತ್ತಿತರರು ಪ್ರಕರಣದಲ್ಲಿ  ನ್ಯಾ. ಪಿ.ಜಿ. ಅಜಿತ್ ಕುಮಾರ್ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.

ತಮ್ಮ ಸಹಿ ಇರುವ ಚೆಕ್ ನ್ನು ಸ್ವ-ಇಚ್ಚೆಯಿಂದ ಆರೋಪಿ ನೀಡಿದ್ದು, ಅದು ಅಮಾನ್ಯಗೊಂಡಿದ್ದರೆ ಆಗ ಅದು ಸೆಕ್ಷನ್ 138ರಡಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಚೆಕ್‌ಗೆ ಸಹಿ ಹಾಕುವ ಮತ್ತು ಅದನ್ನು ಪಾವತಿಸುವವರಿಗೆ ಒಪ್ಪಿಸುವ ವ್ಯಕ್ತಿಯು ಋಣಭಾರವನ್ನು ಪಾವತಿಸಲು ಅಥವಾ ಹೊಣೆಗಾರಿಕೆಯ ಮರುಪಾವತಿಗಾಗಿ ಚೆಕ್ ಅನ್ನು ನೀಡಲಾಗಿದೆ ಎಂಬ ಊಹೆಯನ್ನು ನಿರಾಕರಿಸಲು ಪುರಾವೆಗಳನ್ನು ಸಲ್ಲಿಸದ ಹೊರತು ಚೆಕ್ ನೀಡಿದಾತನೇ ಹೊಣೆಗಾರನಾಗಿರುತ್ತಾನೆ. ಚೆಕ್‌ಗೆ ನೀಡಿದವರು ಇಚ್ಚಾಪೂರ್ವಕವಾಗಿ ಸಹಿ ಮಾಡಿದ್ದರೆ, ಚೆಕ್ ನೀಡಿದವರು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ ಚೆಕ್ ನ ಇತರ ಕಾಲಂ ಅನ್ನು ಭರ್ತಿ ಮಾಡಿರಬಹುದು ಎಂಬುದು ಅಪ್ರಸ್ತುತವಾಗಿದೆ" ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.

 

ಪ್ರಕರಣ: Vibin Melepuram Vs Denny Thomas and Ors

ಕೇರಳ ಹೈಕೋರ್ಟ್, Crl RP: 344/2023 Dated 07-12-2023


Ads on article

Advertise in articles 1

advertising articles 2

Advertise under the article