ಸುಳ್ಳು ಸಾಕ್ಷಿ ಹೇಳಿದ ದೂರುದಾರ: ಕ್ರಮ ಜರುಗಿಸಲು ಕೋರ್ಟ್ ನಿರ್ದೇಶನ
ಸುಳ್ಳು ಸಾಕ್ಷಿ
ಹೇಳಿದ ದೂರುದಾರ: ಕ್ರಮ ಜರುಗಿಸಲು ಕೋರ್ಟ್ ನಿರ್ದೇಶನ
ಕೊಪ್ಪಳದ ಜಿಲ್ಲಾ
ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದೂರುದಾರರು ಪ್ರತಿಕೂಲ ಸುಳ್ಳು ಸಾಕ್ಷಿ ನುಡಿದಿರುವುದು
ಪ್ರತಿಕೂಲ ಸಾಕ್ಷಿಗೆ ತಿರುಗುಬಾಣವಾಗಿದೆ.
ಸುಳ್ಳು ಸಾಕ್ಷಿ
ನುಡಿದ ಹಿನ್ನೆಲೆಯಲ್ಲಿ ದೂರುದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ
ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಸುಳ್ಳು ಸಾಕ್ಷಿ
ನುಡಿದ ಪರಿಣಾಮವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಸರಕಾರದಿಂದ
ಪಡೆದ ಪರಿಹಾರದ ಮೊತ್ತ ರೂ. 25,000/-ನ್ನು ಕೂಡ ದೂರುದಾರರಿಂದ ವಸೂಲಿ ಮಾಡಲು ಜಿಲ್ಲಾದಿಕಾರಿಗೆ ನ್ಯಾಯಾಲಯ
ನಿರ್ದೇಶನ ನೀಡಿದೆ.
ಏನಿದು ಘಟನೆ?:
2020ರ ಮೇ
13ರಂದು ಸರ್ಕಾರಿ ಕರ್ತವ್ಯದಲ್ಲಿ ಇದ್ದಾಗ ವ್ಯಕ್ತಿಯೊಬ್ಬರು ಕೃಷಿ ಯೋಜನೆಗಳ ಮಾಹಿತಿ ಕೇಳಲು ಕಚೇರಿಗೆ
ಭೇಟಿ ನೀಡಿದ್ದರು. ಭೇಟಿ ನೀಡಿದ್ದ ಆ ವ್ಯಕ್ತಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯ ನಿರ್ವಹಣೆಗೆ
ಅಡ್ಡಿ ಮಾಡಿದ್ದರು. ಈ ವ್ಯಕ್ತಿಯ ವಿರುದ್ಧ ದೂರುದಾರರು ಕೊಪ್ಪಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆ ನಂತರ ತನಿಖಾಧಿಕಾರಿಯಾಗಿದ್ದ
ಡಿವೈಎಸ್ ಪಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ನೀಡಿದ್ದರಿಂದ ನ್ಯಾಯಾಲಯದಲ್ಲಿ ಪ್ರಕರಣದ ದಾಖಲಾಗಿತ್ತು.
ಈ ಪ್ರಕರಣದ
ವಿಚಾರಣೆಯ ಸಂದರ್ಭದಲ್ಲಿ ತಾವು ನೀಡಿದ ದೂರಿಗೆ ವ್ಯತಿರಿಕ್ತವಾಗಿ ದೂರುದಾರರು ಸಾಕ್ಷಿ ನುಡಿದಿದ್ದರು.
ಆರೋಪಿ ನನಗೆ ಗೊತ್ತಿಲ್ಲ. ಅವರು ಜಾತಿ ನಿಂದನೆ ಮಾಡಿರುವುದಿಲ್ಲ, ಕರ್ತವ್ಯಕ್ಕೂ ಅಡಚಣೆ ಮಾಡಿರುವುದಿಲ್ಲ.
ಹಾಗೂ ದೂರು ಕೊಟ್ಟಿರುವುದಿಲ್ಲ ಎಂದು ಪ್ರತಿಕೂಲ ಸುಳ್ಳು ಸಾಕ್ಷಿ ನುಡಿದಿದ್ದರು.
ಸುಳ್ಳು ಸಾಕ್ಷಿಯ
ಹಿನ್ನೆಲೆಯಲ್ಲಿ ಸದ್ರಿ ಪ್ರಕರಣದಲ್ಲಿ ಆರೋಪಿಯನ್ನು
ಆರೋಪಮುಕ್ತಗೊಳಿಸಿ ತೀರ್ಪು ನೀಡಲಾಗಿತ್ತು.