-->
11ಇ, ಅಲಿನೇಷನ್ ಪೂರ್ವ ನಕ್ಷೆ, ತತ್ಕಾಲ್ ಪೋಡಿ, ಹದ್ದುಬಸ್ತು: ಸೇವಾ ಶುಲ್ಕದಲ್ಲಿ ಭಾರೀ ಬದಲಾವಣೆ

11ಇ, ಅಲಿನೇಷನ್ ಪೂರ್ವ ನಕ್ಷೆ, ತತ್ಕಾಲ್ ಪೋಡಿ, ಹದ್ದುಬಸ್ತು: ಸೇವಾ ಶುಲ್ಕದಲ್ಲಿ ಭಾರೀ ಬದಲಾವಣೆ

11ಇ, ಅಲಿನೇಷನ್ ಪೂರ್ವ ನಕ್ಷೆ, ತತ್ಕಾಲ್ ಪೋಡಿ, ಹದ್ದುಬಸ್ತು: ಸೇವಾ ಶುಲ್ಕದಲ್ಲಿ ಭಾರೀ ಬದಲಾವಣೆ

11ಇ, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ, ಹದ್ದುಬಸ್ತು ಹಾಗೂ ಸ್ವಾವಲಂಬಿ ಯೋಜನೆಯ ಅನ್ವಯ ಸ್ವೀಕರಿಸುವ ಅರ್ಜಿಗಳ ಸೇವಾ ಶುಲ್ಕವನ್ನು ಪರಿಷ್ಕರಿಸಲಾಗಿದೆ.

ಹೊಸ ದರಗಳು 1-01-2024ರಿಂದಲೇ ಜಾರಿಗೆ ಬರಲಿದೆ. ಈಗಾಗಲೇ ಅಳತೆಗಾಗಿ ಸ್ವೀಕೃತವಾಗಿ ಬಾಕಿ ಇರುವ ಪ್ರಕರಣಗಳಿಗೆ ಹೊಸ ದರಗಳು ಅನ್ವಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನೂತನ ದರಗಳು ಹೀಗಿವೆ:

I) 11ಇ, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ

ನಗರ ಪ್ರದೇಶ

A) 2 ಎಕರೆ ವರೆಗೆ: ರೂ. 2500/-

B) 2 ಎಕರೆಗಿಂತ ಹೆಚ್ಚಿದ್ದರೆ ಪ್ರತಿ ಎಕರೆಗೆ/ಭಾಗಶಃ ಎಕರೆಗೆ ವರೆಗೆ: ರೂ. 1000/-

ಗ್ರಾಮೀಣ ಪ್ರದೇಶ

A) 2 ಎಕರೆ ವರೆಗೆ: ರೂ. 1500/-

B) 2 ಎಕರೆಗಿಂತ ಹೆಚ್ಚಿದ್ದರೆ ಪ್ರತಿ ಎಕರೆಗೆ/ಭಾಗಶಃ ಎಕರೆಗೆ ವರೆಗೆ: ರೂ. 400/-

II) ಹದ್ದುಬಸ್ತು

ನಗರ ಪ್ರದೇಶ

A) 2 ಎಕರೆ ವರೆಗೆ: ರೂ. 2000/-

B) 2 ಎಕರೆಗಿಂತ ಹೆಚ್ಚಿದ್ದರೆ ಪ್ರತಿ ಎಕರೆಗೆ/ಭಾಗಶಃ ಎಕರೆಗೆ ವರೆಗೆ: ರೂ. 400/-

ಗ್ರಾಮೀಣ ಪ್ರದೇಶ

A) 2 ಎಕರೆ ವರೆಗೆ: ರೂ. 500/-

B) 2 ಎಕರೆಗಿಂತ ಹೆಚ್ಚಿದ್ದರೆ ಪ್ರತಿ ಎಕರೆಗೆ/ಭಾಗಶಃ ಎಕರೆಗೆ ವರೆಗೆ: ರೂ. 300/-

ನೋಟೀಸ್ ಶುಲ್ಕ: ಗ್ರಾಮೀಣ ಮತ್ತು ನಗರದ ಪ್ರದೇಶದ ಪ್ರತಿ ಬಾಜುದಾರರಿಗೆ ರೂ. 25/-

III) ಸ್ವಾವಲಂಬಿ ಯೋಜನೆಯಡಿ ಸ್ವ ಇಚ್ಚೆಯಿಂದ ಸ್ಕೆಚ್ ತಯಾರಿಸಲು ಸಲ್ಲಿಸುವ ಪ್ರತಿ ಅರ್ಜಿಗೆ ರೂ. 1,000/- ಮೊತ್ತವನ್ನು ಅರ್ಜಿ ಶುಲ್ಕವನ್ನಾಗಿ ನಿಗದಿಪಡಿಸಲಾಗಿದೆ.
Ads on article

Advertise in articles 1

advertising articles 2

Advertise under the article