ಬೆಂಗಳೂರು ವಕೀಲರ ಸಹಕಾರ ಸಂಘದ ಚುನಾವಣೆ: ಎಲ್ಲ ಸದಸ್ಯರಿಗೂ ಮತದಾನದ ಹಕ್ಕು- ಕರ್ನಾಟಕ ಹೈಕೋರ್ಟ್ ಆದೇಶ
ಬೆಂಗಳೂರು ವಕೀಲರ ಸಹಕಾರ ಸಂಘದ ಚುನಾವಣೆ: ಎಲ್ಲ ಸದಸ್ಯರಿಗೂ ಮತದಾನದ ಹಕ್ಕು- ಕರ್ನಾಟಕ ಹೈಕೋರ್ಟ್ ಆದೇಶ
ಬೆಂಗಳೂರು ವಕೀಲರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಎಲ್ಲ 6238 ಸದಸ್ಯರಿಗೂ ಮತದಾನದ ಹಕ್ಕು ದೊರೆತಿದೆ. ಎಲ್ಲ ಸದಸ್ಯರೂ ಮತದಾನದ ಪ್ರಕ್ರಿಯೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಸಂಘ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಅನಂತ ರಾಮನಾಥ್ ಹೆಗ್ಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ದಿನಾಂಕ 09-02-2024ರಂದು ಈ ಆದೇಶ ಹೊರಡಿಸಿದೆ.
ದಿನಾಂಕ 18-02-2024ರಂದು ಭಾನುವಾರ ನಡೆಯಲಿರುವ ಬೆಂಗಳೂರು ವಕೀಲರ ಸಹಕಾರ ಸಂಘ ನಿ. ಇದರ ನಿರ್ದೇಶಕರ ಸ್ಥಾನಕ್ಕೆ ನಡೆಯಲಿದೆ.
ಈ ಮಧ್ಯಂತರ ಆದೇಶವನ್ನು ಪರಿಗಣಿಸಿ ಚುನಾವಣಾಧಿಕಾರಿ ಮತದಾರರ ಗುರುತಿನ ಚೀಟಿ ಮತ್ತು ಅರ್ಹತೆಯನ್ನು ಪರಿಶೀಲಿಸಿ ಮತದಾನಕ್ಕೆ ಅವಕಾಶ ನೀಡಬೇಕು ಮತ್ತು ಚುನಾವಣೆಯನ್ನು ನ್ಯಾಯಸಮ್ಮತವಾಗಿ ಶಾಂತಿಯುತವಾಗಿ ನಡೆಸಬೇಕು ಮತ್ತು ಮತಪತ್ರಗಳನ್ನು ಸೀಲ್ ಮಾಡಲಾದ ಮತಪೆಟ್ಟಿಗೆಯಲ್ಲಿ ಭದ್ರವಾಗಿ ಕಾಯ್ದಿರಿಸಬೆಕು ಎಂದು ಕರ್ನಾಟಕ ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ನಿರ್ದೇಶನ ನೀಡಿದೆ.
ಮುಂದಿನ ಆದೇಶದ ವರೆಗೆ ಚುನಾವಣಾ ಫಲಿತಾಂಶವನ್ನು ಘೋಷಣೆ ಮಾಡುವಂತಿಲ್ಲ. ಎಂಬುದನ್ನೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.