ವಿಚಾರಣೆ ವೇಳೆ ಹಾಜರುಪಡಿಸುವ ಬ್ಯಾಂಕ್ ದೃಢೀಕೃತ ನಕಲು ದಾಖಲೆ ಸ್ವತಃ ಸ್ವೀಕಾರಾರ್ಹ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Saturday, February 10, 2024
ವಿಚಾರಣೆ ವೇಳೆ ಹಾಜರುಪಡಿಸುವ ಬ್ಯಾಂಕ್ ದೃಢೀಕೃತ ನಕಲು ದಾಖಲೆ ಸ್ವತಃ ಸ್ವೀಕಾರಾರ್ಹ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಬ್ಯಾಂಕ್ ನೀಡಿದ ದಾಖಲೆಯ ಪ್ರಮಾಣೀಕೃತ ನಕಲನ್ನು ಯಾವುದೇ ಔಪಚಾರಿಕ ಪುರಾವೆಗಳಿಲ್ಲದೆ ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಆಕ್ಟ್, 1891 ರ ಅಡಿಯಲ್ಲಿ ಸ್ವತಃ ಸ್ವೀಕಾರಾರ್ಹವಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ಬಿ.ಆರ್. ಗವಾಯಿ ಮತ್ತು ನ್ಯಾ. ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯ ಅಗತ್ಯ ಸಂದರ್ಭದಲ್ಲಿ, ಬ್ಯಾಂಕ್ ನಿರ್ವಹಿಸುವ ಮಾದರಿಯ ಸಹಿಯ ಪ್ರಮಾಣೀಕೃತ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬಹುದು. ಅಥವಾ ಚೆಕ್‌ನಲ್ಲಿ ಕಂಡುಬರುವ ಸಹಿಯೊಂದಿಗೆ ಹೋಲಿಕೆ ಮಾಡಲು ಬ್ಯಾಂಕ್‌ನಿಂದ ಸಹಿಗಳ ಪ್ರಮಾಣೀಕೃತ ಪ್ರತಿಗಳನ್ನು ಬ್ಯಾಂಕಿನಿಂದ ಕರೆಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 138 ರ ಅಡಿಯಲ್ಲಿ ದಾಖಲಾದ ದೂರಿನಲ್ಲಿ ಆರೋಪಿ ನೀಡಿದ ಚೆಕ್‌ನ ಸಹಿಗೆ ತಕರಾರು ವ್ಯಕ್ತಪಡಿಸಿದ್ದರೆ, ಆಗ ಚೆಕ್‌ನಲ್ಲಿ ಕಂಡುಬರುವ ಸಹಿಯೊಂದಿಗೆ ಹೋಲಿಕೆ ಮಾಡಲು ಬ್ಯಾಂಕ್‌ನಿಂದ ಸಹಿಗಳ ಪ್ರಮಾಣೀಕೃತ ಪ್ರತಿಗಳನ್ನು ಬ್ಯಾಂಕಿನಿಂದ ಕರೆಸಬಹುದು ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ: ಅಜಿತ್ ಸಿನ್ಹ್ ಚೆಹೂಜಿ ರಾಥೋಡ್ Vs ಗುಜರಾತ್ ರಾಜ್ಯ ಮತ್ತಿತರರು
ಸುಪ್ರೀಂ ಕೋರ್ಟ್ Crl A 16641/2023 Dated 29-01-2024