-->
ಆಸ್ತಿ ನೋಂದಣಿಗೆ ಬರಲಿದೆ ಹೊಸ ನಿಯಮ: ಇ-ಖಾತಾ ಕಡ್ಡಾಯ; ಖುದ್ದು ಹಾಜರಾತಿಗೂ ವಿನಾಯಿತಿ...!?

ಆಸ್ತಿ ನೋಂದಣಿಗೆ ಬರಲಿದೆ ಹೊಸ ನಿಯಮ: ಇ-ಖಾತಾ ಕಡ್ಡಾಯ; ಖುದ್ದು ಹಾಜರಾತಿಗೂ ವಿನಾಯಿತಿ...!?

ಆಸ್ತಿ ನೋಂದಣಿಗೆ ಬರಲಿದೆ ಹೊಸ ನಿಯಮ: ಇ-ಖಾತಾ ಕಡ್ಡಾಯ; ಖುದ್ದು ಹಾಜರಾತಿಗೂ ವಿನಾಯಿತಿ...!?






ಆಸ್ತಿ ನೋಂದಣಿ ಪ್ರಕ್ರಿಯೆ ಇನ್ನು ಮುಂದೆ ಹೊಸ ನಿಯಮಗಳು ಜಾರಿಯಾಗಲಿವೆ. ನಗರ ಪ್ರದೇಶದಲ್ಲಿ ಇ-ಖಾತಾ ಕಡ್ಡಾಯವಾಗಿ ಹಾಜರುಪಡಿಸಬೇಕಾದ ಅಗತ್ಯ ದಾಖಲೆಯಾಗಲಿದೆ. ಎರಡೂ ಕಡೆಯವರ ಖುದ್ದು ಹಾಜರಾತಿ ಇಲ್ಲದೆಯೂ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಸಬಹುದಾದ ಸಾಧ್ಯತೆಗೆ ಅವಕಾಶವಿದೆ.


ಗ್ರಾಮೀಣ ಪ್ರದೇಶಗಳ ಆಸ್ತಿ ನೋಂದಣಿಗೆ "ಇ-ಸ್ವತ್ತು" ಕಡ್ಡಾಯಗೊಳಿಸಿದ ಮಾದರಿಯಲ್ಲೇ ನಗರ ಪ್ರದೇಶಗಳ ಆಸ್ತಿ ನೋಂದಣಿಗೆ ಡಿಜಿಟಲ್ ಸ್ವರೂಪದ 'ಇ-ಖಾತ' ಕಡ್ಡಾಯವಾಗಲಿದೆ.

ಆಸ್ತಿ ನೋಂದಣಿ ಸಂದರ್ಭದಲ್ಲಿ 'ಇ-ಖಾತ' ಹಾಜರುಪಡಿಸುವುದನ್ನು ಕಡ್ಡಾಯಗೊಳಿಸುವ 'ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ 2024ಕ್ಕೆ ಕರ್ನಾಟಕ ವಿಧಾನಸಭೆ ಅಂಗೀಕಾರ ನೀಡಿದೆ.


ಡಿಜಿಟಲ್ ಸ್ವರೂಪದಲ್ಲಿ ಹಾಜರುಪಡಿಸುವ ಕೆಲವು ದಾಖಲೆಗಳನ್ನು ಪೋರ್ಟಲ್‌ನಲ್ಲಿ ಅಪ್‌ಮಾಡಿರಬೇಕು. ಇನ್ನು ಎರಡು ಕಡೆಯವರ ಖುದ್ದು ಹಾಜರಾತಿ ಇಲ್ಲದೆ ಕಡ್ಡಾಯವಾಗಿ ನೋಂದಣಿಗೆ ಅವಕಾಶ ಕಲ್ಪಿಸುವ ಘೋಷಣೆಯನ್ನು ಕಳೆದ ಸಾಲಿನ ರಾಜ್ಯ ಬಜೆಟ್ ನಲ್ಲಿ ಮಾಡಲಾಗಿತ್ತು. ಅದನ್ನು ಅನುಷ್ಠಾನಕ್ಕೆ ತರಲು ಈ ತಿದ್ದುಪಡಿ ಮಸೂದೆ ರೂಪಿಸಲಾಗಿದೆ ಇದೇ ಮಸೂದೆಯಲ್ಲಿ 'ಇ-ಖಾತ' ಕಡ್ಡಾಯಗೊಳಿಸುವ ಅಂಶವೂ ಇದೆ.


ಎಲೆಕ್ಟ್ರಾನಿಕ್ ಮೀಡಿಯಾ ಸಾಧನೆಗಳ ಮೂಲಕ ಇತರೆ ಇಲಾಖೆಯ ತಂತ್ರಾಂಶದೊಂದಿಗೆ ಸಂಯೋಜಿಸದ ಹೊರತು ಸ್ಥಿರ ಸ್ವತ್ತಿನ ವರ್ಗಾವಣೆ ಅಥವಾ ಪರಬಾರೆ ಮಾಡುವಂತಿಲ್ಲ ಎಂಬುದನ್ನು ನೋಂದಣಿ ಕಾಯ್ದೆ 1908ರ ಸೆಕ್ಷನ್ 71-a ಇದರಲ್ಲಿ ಸೇರಿಸಲಾಗಿದೆ.


ಗ್ರಾಮೀಣ ಪ್ರದೇಶಗಳ ಸ್ಥಿರಾಸ್ತಿ ನನಿಗೆ ಇ-ಸ್ವತ್ತು ಕಡ್ಡಾಯವಾಗಿ ಹಾಜರುಪಡಿಸಬೇಕಾಗಿದೆ. ಆದರೆ ನಗರ ಪ್ರದೇಶಗಳಲ್ಲಿ ಭೌತಿಕ (ಕಾಗದದ) ಖಾತೆ ಆಧಾರದಲ್ಲಿ ಈಗಲೂ ನೋಂದಣಿ ನಡೆಯುತ್ತಿದೆ. ಇದರಿಂದ ಅಕ್ರಮವಾಗಿ ಸ್ವತ್ತುಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಮತ್ತು ಈ ಪ್ರಕ್ರಿಯೆಯಲ್ಲಿ ವಂಚನೆ ನಡೆಯುತ್ತಿದೆ ಎನ್ನಲಾಗಿದೆ. ಇದನ್ನು ತಪ್ಪಿಸಲು ಇ-ಖಾತೆ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.


ಈ ತಿದ್ದುಪಡಿ ಜಾರಿಯಾದ ಬಳಿಕ ನಗರ ಪ್ರದೇಶದಲ್ಲಿ ಆಸ್ತಿಗಳ ನೋಂದಣಿ ಈ ಖಾತೆ ಇದ್ದರೆ ಮಾತ್ರ ಸಾಧ್ಯ ಬಿಬಿಎಂಪಿ ವ್ಯಾಪ್ತಿಯ ಸ್ವತ್ತುಗಳು ಮತ್ತು ಇತರೆ ಎಲ್ಲಾ ನಗರ ಪ್ರದೇಶಗಳ ಸುತ್ತುಗಳಿಗೂ ಇದು ಅನ್ವಯವಾಗಲಿದೆ.


ಪತ್ರಗಳನ್ನು ಸ್ಕ್ಯಾನಿಂಗ್ ಮಾಡಿ ಡಿಜಿಟಲಿಕರಣ ಮಾಡಲಾಗಿದೆ ಮುಂದೆ ಪ್ರಾಮಾಣಿಕೃತ ಪ್ರತಿಯನ್ನು ಡಿಜಿಟಲ್ ರೂಪದಲ್ಲಿ ಒದಗಿಸುವ ವ್ಯವಸ್ಥೆ ಆರಂಭಿಸಲಾಗುವುದು. ಯಾವುದೇ ಕಾಗದ ಪತ್ರ ನೋಂದಣಿ ಸಂದರ್ಭದಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಅಥವಾ ಪೇ ಆರ್ಡರ್ ಮೂಲಕ ಮುದ್ರಾಂಕ ಶುಲ್ಕ ಪಾವತಿಸುವುದನ್ನು ಕರ್ನಾಟಕ ಸ್ಟ್ಯಾಂಪ್ ಆಕ್ಟ್ 2024 ನಿಷೇಧಿಸಿದೆ.


ಈ ತಿದ್ದುಪಡಿ ಜಾರಿಯಾದ ಬಳಿಕ ಇ-ಪೇಮೆಂಟ್ ಮೂಲಕ ಮುದ್ರಾಂಕ ಶುಲ್ಕ ಪಾವತಿಸುವುದು ಕಡ್ಡಾಯವಾಗಲಿದೆ.



Ads on article

Advertise in articles 1

advertising articles 2

Advertise under the article